ಹೆಚ್ಚು ಮಳೆಯಾಗಿ ಅಥವಾ ಹವಾಮಾನದ ವೈಪ್ಯರೀತ್ಯದಿಂದ ಸಮರ್ಪಕವಾಗಿ ಬೆಳೆ ಬಾರದೆ ರೈತರು ಸಾಕಷ್ಟು ಹಾನಿ ಅನುಭವಿಸುವುದು ಸಾಮಾನ್ಯ. ಇದಕ್ಕೆ ಪರಿಹಾರವೆಂಬಂತೆ ಅಂಕುರ್ ಕಂಪನಿಯು ಹೊಸ ತಂತ್ರಜ್ಞಾನ ಬಳಸಿ ಗುಣಮಟ್ಟದ ಬೀಜ ಉತ್ಪಾದನೆ ಮಾಡಿದೆ. ಅಂಕುರ್ ಬೀಜವು ಹವಾಮಾನ ವೈಪರೀತ್ಯ ಮೆಟ್ಟಿ ನಿಲ್ಲುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮಾಧವರಾವ್ ತಿಳಿಸಿದ್ದಾರೆ. ಕಂಪನಿಯು ಪ್ರಮುಖವಾಗಿ ಹತ್ತಿ, ಮೆಕ್ಕೆಜೋಳ, ಬತ್ತ, ತರಕಾರಿಗಳಾದ ಮೆಣಸಿನಕಾಯಿ, ಹಾಗಲಕಾಯಿ, ಬದನೆ ಸೇರಿದಂತೆ ಮೊದಲಾದ ಬೀಜಗಳನ್ನು ಉತ್ಪಾದನೆ ಮಾಡುತ್ತಿದೆ. ಅಂಕುರ್ ಹತ್ತಿ ಬೀಜ ಬಳಸಿ ಹಲವಾರು ರೈತರು ಹೆಕ್ಟೇರ್‌ಗೆ 19 ಟನ್ ಇಳುವರಿ ಪಡೆದಿದ್ದಾರೆ ಎಂದು ಮಾಧವರಾವ್ ಹೇಳುತ್ತಾರೆ.