ಕೃಷಿ-ಪರಿಸರ

ಅಲಂಕಾರಿಕ ಕೋಲಿಯಾಸ್

ಮನೆಯ ಕೈ ತೋಟದಲ್ಲಿ ಅಂದದ ಹೂವು ಗಿಡ ಬೆಳೆಸುವುದು ಎಲ್ಲರ ಸಾಮಾನ್ಯ ಆಸಕ್ತಿ. ಇದರ ಜತೆಗೆ ಥರಹೇವಾರಿ ಆಕರ್ಷಣೀಯ ಎಲೆಗಳನ್ನು ಹೊಂದಿರುವ ಅಲಂಕಾರಿಕ ಸಸ್ಯಗಳನ್ನು ಕುಂಡಗಳಲ್ಲಿ ಬೆಳೆಸಬಹುದು. ಅಂಥ ಒಂದು ಸಸ್ಯವೇ ಕೋಲಿಯಾಸ್.

ಈ ಕೋಲಿಯಾಸ್ ಗಿಡ ಸಾಮಾನ್ಯವಾಗಿ 11/2-2 ಅಡಿ ಎತ್ತರ ಬೆಳೆಯುತ್ತದೆ. ಇದರ ಕಾಂಡ ಮೃದು. ಸಣ್ಣ ಸಣ್ಣ ಕೊಂಬೆಗಳು ಟಿಸಿಲೊಡೆದಾಗ ಗುಂಪಾಗಿ ಒತ್ತಾಗಿ ಕಾಣುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಇದರ ಅಗಲವಾದ ಎಲೆಗಳು ಆಕರ್ಷಣೀಯ ಹಸಿರ, ಕಂದು ಕಡುನೀಲಿ ಮುಂತಾದ ಬಣ್ಣಗಳಿಂದಾಗಿದ್ದು, ನಡುವೆ ಬಣ್ಣದ ಚಿತ್ತಾರ ಹೊಂದಿರುತ್ತದೆ. ಕೆಲವೊಮ್ಮೆ ಅಂಚು ಬೇರೆ ಬಣ್ಣದ್ದಾಗಿರುತ್ತದೆ. ಕೋಲಿಯಾಸ್ ಗಿಡಗಳನ್ನು ಬಹಳ ಸುಲಭವಾಗಿ ಕುಂಡಗಳಲ್ಲಿ ಬೆಳೆಸಬಹುದು. ಇದಕ್ಕಾಗಿ ಕುಂಡಗಳಲ್ಲಿ ಮರಳು, ಸತ್ವಯುತ ಗೊಬ್ಬರ ಮತ್ತು ಕೆಂಪು ಮಣ್ಣನ್ನು ಸಮಪ್ರಮಾದಲ್ಲಿ ತುಂಬಬೇಕು. ಇದರಲ್ಲಿ 8-10 ಸೆಂ.ಮೀ. ಉದ್ದದ ಮೃದು ಕಾಂಡ ಕಡ್ಡಿಯನ್ನು ನೆಡಬೇಕು. ಈ ಮೃದು ಕಾಂಡದ ಕಡ್ಡಿಗಳನ್ನು ಬೆಳೆದು ನಿಂತಿರುವ ಗಿಡಗಳಿಂದ ಆರಿಸಿಕೊಳ್ಳಬಹುದು. ಕೊಂಬೆಗಳ ತುದಿ ಭಾಗದ 8-10ಸೆಂ.ಮೀ. ಉದ್ದದ ಮೃದುವಾಗಿರುವ ಕಾಂಡ ಭಾಗ ಆರಿಸಿಕೊಂಡು ಕತ್ತರಿಸಿ ತೆಗೆದಿಟ್ಟುಕೊಳ್ಳಬೇಕು. ಈ ಕತ್ತರಿಸಿದ ಕಡ್ಡಿಗಳ ಬುಡ ಭಾಗದಲ್ಲಿರುವ ಅಗಲವಾದ ಎಲೆಗಳನ್ನು ಪೂರ್ಣವಾಗಿ ತೆಗೆಯಬೇಕು (ಬೇಗನೆ ಬಾಡುವುದನ್ನು ತಡೆಗಟ್ಟಲು). ಹೀಗೆ ತಯಾರಿಸಿದ ಕಡ್ಡಿಗಳನ್ನು ತಕ್ಷಣವೇ ಕುಂಡಗಳಲ್ಲಿ ನೆಟ್ಟು ನೀರು ಹಾಯಿಸಬೇಕು. ಈ ಕಡ್ಡಿಗಳು 2-3 ವಾರಗಳಲ್ಲಿ ಬೇರು ಬಿಟ್ಟು ಚಿಗುರಲಾರಂಭಿಸುತ್ತವೆ. ಇದೇ ರೀತಿ ಮೃದು ಕಾಂಡಗಳನ್ನು ಪಾಲಿಥೀನ್ ಚೀಲದಲ್ಲೂ ಬೆಳೆಸಿ ನಂತರ ಹೂಕುಂಡಗಳಿಗೆ ವರ್ಗಾಯಿಸಬಹುದು.

ಕೋಲಿಯಾಸ್ ಬಹಳ ಸುಲಭವಾಗಿ ಬೆಳೆಯುವ ಅಂದದ ಎಲೆಗಳುಳ್ಳ ಅಲಂಕಾರಿಕ ಗಿಡ. ಇದನ್ನು ಗುಂಪು ಗುಂಪಾಗಿ ನೆಟ್ಟು ಬೆಳೆಸಿದಲ್ಲಿ ಹೂದೋಟ ಬಹಳ ಅಂದವಾಗಿ ಕಾಣುತ್ತದೆ.

ನಿರ್ಮಲ ಕೆ.ಎಸ್./ ಸುನೀತ ಸಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಸ್ಟಿಂಗ್‌ ಆಪರೇಷನ್‌ ರೂವಾರಿ, ರೌಡಿಶೀಟರ್‌ ಫೋಟೋ ರಿಲೀಸ್‌ ಮಾಡಿದ ಕುಮಾರಸ್ವಾಮಿ!

ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರ? ಮನೆ ಮುಂದೆ ಯುವತಿ ಪ್ರತಿಭಟನೆ!-Video

'ಮೋದಿ ವಿರೋಧಿ ಪ್ರತಿಭಟನೆಗಳಿಗೆ ಅಮೆರಿಕನ್ನರ ಆರ್ಥಿಕ ನೆರವು?'; Mary Millben ಸ್ಫೋಟಕ ಆರೋಪ!