ಕೃಷಿ-ಪರಿಸರ

ಮನಸು ಕದ್ದ ಕೇದಿಗೆ

'ಸುತ್ತಿ ಸುತ್ತಿ ಬರಬೇಡ ನೀ ನನಗಾಗಿ ಮೇಲೊಬ್ಬ ಕುಳಿತವನೇ ನಿನಗಾಗಿ...' ಕೇದಿಗೆ ಹೂವು ತನ್ನನ್ನು ಕೀಳಲು ಬಂದವರಿಗೆ ಎಚ್ಚರಿಸುವ ಪರಿ ಇದು! ಈ ಹೂವೆಂದರೆ ನಾಗರಹಾವುಗಳಿಗೆ ಪಂಚಪ್ರಾಣ. ಹೂವು ಅರಳಿ, ಸುವಾಸನೆ ಬೀರುತ್ತಿದ್ದಂತೆ ಸರ್ಪಗಳು ಅದರತ್ತ ಆಕರ್ಷಣೆಗೆ ಒಳಗಾಗುತ್ತವೆ. ಇನ್ನು ಮನುಷ್ಯರಿಗೂ, ಅದರಲ್ಲಿ ಮೊಗ್ಗಿನ ಜಡೆ ಹೆಣೆಯುವ ಹೆಂಗಳೆಯರಿಗೆ, ಮಹಾಶಿವರಾತ್ರಿ ದಿನದೊಂದು ಶಿವನ ಪುಷ್ಪಾರ್ಚನೆಗೆ ಈ ಹೂವೇ ಶ್ರೇಷ್ಠ!

ಅರಿಶಿನ ಬಣ್ಣ ಹೋಲುವ ಈ ಹೂವುಗಳ ತೆನೆ ಸುವಾಸನೆಭರಿತ. ಈ ಘಮಾಡಿಸುವಿಕೆ ನೈಸರ್ಗಿಕ ಸುಗಂಧ! ಗುಲಾಬಿ ವಾಸನೆಗೆ ಸರಿಸಾಟಿ ಇಲ್ಲ. ಗಾಳಿ ಬೀಸುವ ದಿಕ್ಕಿನಲ್ಲಿ ನೂರಾರು ಮೀಟರ್ ದೂರಕ್ಕೂ ತನ್ನ ಪರಿಮಳ ಸೂಸುವಷ್ಟು ಸೌಗಂಧಿಕ ಫ್ಲವರ್. ದಂಡು ದಂಡು ಮುಳ್ಳಿನ ಪೊದೆಯ ನಡುವೆ ಬೆಳೆಯುವ ಈ ಹೂವಿಗೆ ಅದೆಲ್ಲಿಂದ ಆ ಪರಿಯ ಪರಿಮಳವೋ!?

ಎಲ್ಲಿ ಬೆಳೆಯುತ್ತೆ?
ಕೇದಿಗೆಯು ಅತಿ ತಂಪಾದ ಪ್ರದೇಶಗಳಲ್ಲಿ ಬೆಳೆಯುವ ಸಸ್ಯ. ಬರ್ಮಾ ಮತ್ತು ಅಂಡಮಾನ್‌ನಲ್ಲಿ ಯಥೇಚ್ಛಾವಾಗಿ, ನಮ್ಮಲ್ಲಿ ದಕ್ಷಿಣ ಭಾರತದಲ್ಲಿ ಕಂಡುಬರುವ ಅಪರೂಪ ಸಸ್ಯ ಪ್ರಭೇದ. ಇದು ಉಸುಕು ಮತ್ತು ಚೌಗುಳ್ಳ ಹಳ್ಳ-ಕೊಳ್ಳಗಳಲ್ಲಿ ಗುಂಪು ಗುಂಪಾಗಿ, ಕವಲಾಗಿ ಆಲದ ಮರದ ರೀತಿ ಹಬ್ಬಿ, ಹರಿಷ್ಠ 19 ಮೀ. ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳು ಅತ್ಯಂತ ಒರಟಾಗಿದ್ದು, 1 ರಿಂದ 2 ಮೀ. ಉದ್ದದ, ಅಲಗಿನಂಚಿನಲ್ಲಿ ಮುಳ್ಳುಗಳಿದ್ದು, ಥೇಟ್ ಗರಗಸದಂತಿರುತ್ತವೆ. ಗಂಡು ಹೂವು ತೆನೆ ಉದ್ದವಾಗಿದ್ದು 3 ಸಾಲಿನಲ್ಲಿ ಸುವಾಸನೆಯುಳ್ಳ 1 ಮೀ. ಉದ್ದದ ಹಳದಿ ಆಕರ್ಷಕ ಪತ್ರಗಳು ಆವೃತವಾಗಿದ್ದು, ಇದರ ಮಧ್ಯದಲ್ಲಿ ಕೇಸರ ದಂಡುಗಳು ಕೂಡಿಕೊಂಡು, ಚಿಕ್ಕ ಕೇಸರ ಕೊಳವೆ 1 ಸೆಂ ಮೀ. ಉದ್ದ ಬಿಳಿ ಮಿಶ್ರಿತ ಬಣ್ಣ ಹಾಗೂ ಸುವಾಸನೆಯಿಂದ ಕೂಡಿರುತ್ತದೆ. ಒಂಟಿಯಾದ ಸ್ಟೇಡಿಕ್ಸ್ ಹೆಣ್ಣು ಹೂವು ಗೊಂಚಲು 7-8 ಸೆಂ.ಮೀ. ವ್ಯಾಸ, 4 -10 ಕಾರ್ಪೆಲ್ಲುಗಳಿದ್ದು, 7.5 ಸೆಂ.ಮೀ. ಉದ್ಧವಿರುತ್ತವೆ. ಬಲಿತ ಮೇಲೆ ಅನಾನಸಿನಂತಿರುವ ಫಲ ಬಿಡಲಿದ್ದು, ಅವು ಮುಳ್ಳಿನಿಂದ ಕೂಡಿರುತ್ತವೆ.

ಕೇದಿಗೆಯ ಉಪಯುಕ್ತತೆ
ಹೀಗೆ ಸಕಲ ಜೀವರಾಶಿಗಳ ಮನಸ್ಸು ಕದಿಯುವ ಕೇದಿಗೆಗೆ ಅಳಿವಿನ ಹಂಚಿನಲ್ಲಿರುವ ಸಸ್ಯ ಸಂಕುಲ. ಕೇತಕೆ, ತಾಳೇ ಹೂ ಇದಕ್ಕಿರುವ ಮತ್ತಷ್ಟು ಹೆಸರುಗಳು. ಇದರ ಸುವಾಸನೆಯ ಪುಷ್ಪ ಪತ್ರಕಗಳನ್ನು ಬಾಷ್ಟೀಕರಿಸಿದರೆ 'ಕಿವಡಾ' ಸುಗಂಧ ತೈಲ ಲಭ್ಯ. ಇದನ್ನು ಸುಗಂಧ ತೈಲಗಳಲ್ಲಿ, ಸಾಬೂನು ತಯಾರಿಕೆಯಲ್ಲಿ, ಕೇಶಾಲಂಕಾರಕಗಳನ್ನು ಸುವಾಸನೆಗೊಳಿಸಲು ಬಳಸುತ್ತಾರೆ. ಪುಷ್ಪ ಪತ್ರಕಗಳನ್ನು ಪೂಜೆಗೆ, ಹೆಂಗಸರು ಮುಡಿಯಲು, ಎಲೆಗಳನ್ನು ಚಾಪೆ, ಸಕ್ಕರೆ, ಚೀಲ, ಕುಂಚ ಮತ್ತು ಟೋಸಿ ತಯಾರಿಗೆ ಬಳಸುತ್ತಾರೆ. ಎಳೆಯ ಕಾಯನ್ನು ತರಕಾರಿಯಾಗಿ ಅಡುಗೆಗೆ ಬಳಸಬಹುದು. ಎಲೆಗಳು ಖಾರವಾಗಿರುವುದರಿಂದ, ಕುಷ್ಠರೋಗ, ನಿದ್ರಾ ಜನಕವಾಗಿ ಮತ್ತು ಕಫದ ನಿವಾರಣೆ, ಅಂಟು ರೋಗಗಳಿಗೆ ರಾಮಬಾಣ. ಪತ್ರದ ತೈಲವನ್ನು ಪಾಂಡು ರೋಗ, ಹೃದ್ರೋಗ, ಮೆದುಳು ರೋಗ ಮತ್ತು ತಂಪಿಗೆ ಬಳಸುತ್ತಾರೆ.

ಪತ್ರಕದ ತೈಲವನ್ನು ಸ್ನಾಯು ಸೆಳೆತ, ತಲೆ ನೋವು, ನರಗಳ ದೌರ್ಬಲ್ಯತೆಗೆ ಮದ್ದಾಗಿದೆ. ಬೇರಿನ ತೈಲವನ್ನು ಕೆಲವು ಔಷಧಿಯುಕ್ತ ಎಣ್ಣೆಗಳಲ್ಲಿ ಬಳಸುತ್ತಾರೆ. ದನ-ಕರುಗಳ ಬಾವಿ, ಮೂಗು ಬೆವರಿ ಮೇವು ಕಡಿಮೆ ತಿನ್ನುತ್ತಿದ್ದರೆ ಇದರ ತೆನೆಯನ್ನು ನೀರಿನಲ್ಲಿ ಕಲಸಿ ಕುಡಿಸಿದರೆ ವಾಸಿಯಾಗುತ್ತವೆ. ರೈತರು ಮೆಕ್ಕೆಜೋಳ, ಜೋಳ... ಸೊಪ್ಪೆಯನ್ನು ಕಟ್ಟಲು ಕೇದಿಗೆ ಬಳಸುತ್ತಾರೆ. ಇಂಥಹ ಹಲವು ವಿಶೇಷತೆಯಿಂದ ಕೂಡಿದ ಕೇದಿಗೆ ಹೂವನ್ನು ಎಲ್ಲ ಧರ್ಮೀಯರೂ ಪೂಜೆಗೆ ಬಳಸುತ್ತಾರೆ. ಆದರೆ, ಈ ಹೂವಿಗೆ ಮಹಾಶಿವರಾತ್ರಿ ದಿನ ಬಿಟ್ಟರೆ ಮತ್ತೆಂದೂ ಪರಮಾತ್ಮನ ಪಾದದಡಿಯಲ್ಲಿ ಪವಡಿಸಿ ಪಾವನವಾಗುವ ಭಾಗ್ಯವಿಲ್ಲ!

-ಸ್ವರೂಪಾನಂದ ಎಂ.ಕೊಟ್ಟೂರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!