ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ಜಗತ್ತಿನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ರಾಮಾಯಾಣ: ರೈಸ್ ಆಫ್ ಎ ಲೆಜೆಂಡ್ ಚಿತ್ರದ ಪ್ರಚಾರ ಕಾರ್ಯ ಶುರುವಾಗಿದೆ. ಇಂದು ಬೆಂಗಳೂರಿನಲ್ಲಿ ದೊಡ್ಡ ಸಮಾರಂಭ ನಡೆದಿದ್ದು ಚಿತ್ರದಲ್ಲಿನ ದಿಗ್ಗಜರೆಲ್ಲಾ ಭಾಗಿಯಾಗಿದ್ದರು.
AR Rahman, Yash
ಎಆರ್ ರೆಹಮಾನ್, ಯಶ್
Updated on: 

ಜಗತ್ತಿನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ರಾಮಾಯಾಣ: ರೈಸ್ ಆಫ್ ಎ ಲೆಜೆಂಡ್ (Ramanaya) ಚಿತ್ರದ ಪ್ರಚಾರ ಕಾರ್ಯ ಶುರುವಾಗಿದೆ. ಇಂದು ಬೆಂಗಳೂರಿನಲ್ಲಿ ದೊಡ್ಡ ಸಮಾರಂಭ ನಡೆದಿದ್ದು ಚಿತ್ರದಲ್ಲಿನ ದಿಗ್ಗಜರೆಲ್ಲಾ ಭಾಗಿಯಾಗಿದ್ದರು.

ಇನ್ನು ರಾಮಾಯಣದಲ್ಲಿ ಕನ್ನಡ ಸ್ಟಾರ್ ನಟ ಯಶ್ (Yash) ರಾವಣನ ಪಾತ್ರದಲ್ಲಿ ನಡೆಸಿದ್ದಾರೆ. ಕಾರ್ಯಕ್ರಮದಲ್ಲಿ ಕನ್ನಡದಲ್ಲೇ ಮಾತನಾಡಿದ ಯಶ್, ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರನ್ನು ಹೊಗಳಿದರು. ನಾವು ಚಿಕ್ಕ ವಯಸ್ಸಿನಲ್ಲಿ ರೆಹಮಾನ್ ಅವರ ಹಾಡುಗಳಿಗೆ ಹೆಜ್ಜೆ ಹಾಕಿದ್ದೆ. ಇಂದು ನನ್ನ ಚಿತ್ರಕ್ಕೆ ರೆಹಮಾನ್ ಅವರೇ ಸಂಗೀತ ನಿರ್ದೇಶಿಸಿದ್ದಾರೆ. ಯಾರೇ ಆಗಲಿ ದೊಡ್ಡ ಕನಸುಗಳನ್ನು ಕಾಣಬೇಕು ಎಂದು ಯಶ್ ಹೇಳಿದ್ದಾರೆ.

AR Rahman, Yash
'ರಾಮಾಯಣ'ಕ್ಕೆ ಜೊತೆಯಾದ ಅನುಪಮ್ ಖೇರ್: 'ಜಟಾಯು'ಗೆ ಧ್ವನಿ ನೀಡಿದ ಹಿರಿಯ ನಟ!

ರಾಮಾಯಣ ಚಿತ್ರಕ್ಕೆ ಇಬ್ಬರು ಖ್ಯಾತ ಸಂಗೀತ ನಿರ್ದೇಶಕರು ಸಂಗೀತ ಸಂಯೋಜಿಸಿದ್ದಾರೆ. ಒಬ್ಬರು ಎಆರ್ ರೆಹಮಾನ್ (AR Rahman) ಆದರೇ ಮತ್ತೊಬ್ಬರು ಹಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ಹ್ಯಾನ್ಸ್ ಝಿಮ್ಮರ್. ಎರಡು ಜಗತ್ತನ್ನು ಒಟ್ಟಿಗೆ ಸೇರಿಸುವ ಪ್ರಯತ್ನ. ನಮ್ಮಲ್ಲಿರುವ ಅದ್ಭುತಗಳನ್ನು ಅವರಿಗೆ ತೋರಿಸಬೇಕು. ಅವರದಲ್ಲಿನ ಮಹತ್ವಗಳನ್ನು ನಮ್ಮವರಿಗೆ ತೋರಿಸುವ ಪ್ರಯತ್ನ ಇದಾಗಿದೆ.

ರಾಮಾಯಾಣ ಚಿತ್ರದ ವೇಳೆ ಕೆಲಸ ಮಾಡುವಾಗ ರೆಹಮಾನ್ ಅವರು ಹೇಳಿದ್ರೂ ನಾನು ಫಸ್ಟ್ ಸ್ಟುಡಿಯೋ ಕಟ್ಟಿದ್ದು ಕನ್ನಡಿಗರು ಕೊಟ್ಟ ದುಡ್ಡಿಂದಲೇ. ನಾನು ಇಲ್ಲಿಗೆ ಪಾರ್ಟ್ ಟೈಂನಲ್ಲಿ ಬಂದು ಕೆಲಸ ಮಾಡುತ್ತಿದ್ದೆ ಆ ದುಡ್ಡಿಂದಲೇ ನಾನು ಸ್ಟುಡಿಯೋ ಕಟ್ಟಿದ್ದು ಅಂತ ಹೇಳಿದರು ಎಂದು ಯಶ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com