ʻರಾಮಾಯಣʼಕ್ಕೆ ಜೊತೆಯಾದ ಅನುಪಮ್ ಖೇರ್: 'ಜಟಾಯು'ಗೆ ಧ್ವನಿ ನೀಡಿದ ಹಿರಿಯ ನಟ!

ಪೋಸ್ಟರ್ ಹಂಚಿಕೊಂಡಿರುವ ಸಿನಿಮಾ ಟೀಮ್, “ದುಷ್ಟತನವು ಹಾರಾಡಿದಾಗ, ಅದನ್ನ ಎದುರಿಸಲು ಧೈರ್ಯ ಬಂದಿತು. ಅವನು ವಿಜಯಕ್ಕಾಗಿ ಹೋರಾಡಲಿಲ್ಲ, ಬದಲಾಗಿ ಸತ್ಯ ಮತ್ತು ಧರ್ಮಕ್ಕಾಗಿ ಹೋರಾಡಿದನು.
Anupam kher
ಅನುಪಮ್ ಖೇರ್
Updated on: 

ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ಹಾಗೂ ಬಹುಕೋಟಿ ವೆಚ್ಚದ ಮಹಾಕಾವ್ಯ ಆಧಾರಿತ ‘ರಾಮಾಯಣ’ ಸಿನಿಮಾ ದಿನದಿಂದ ದಿನಕ್ಕೆ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸುತ್ತಿದೆ.

ನಿತೇಶ್ ತಿವಾರಿ ನಿರ್ದೇಶನದಲ್ಲಿ ಹಾಗೂ ರಣಬೀರ್ ಕಪೂರ್ ಪ್ರಮುಖ ಪಾತ್ರದಲ್ಲಿ ಮೂಡಿಬರುತ್ತಿರುವ ಈ ಸಿನಿಮಾಗೆ ಸಂಬಂಧಿಸಿದಂತೆ ಚಿತ್ರತಂಡವು ಇದೀಗ ಮತ್ತೊಂದು ಪ್ರಮುಖ ಮಾಹಿತಿ ರಿಲೀಸ್ ಮಾಡಿದೆ.

ಚಿತ್ರತಂಡ ಇದೀಗ ʻರಾಮಾಯಣʼ ಸಿನಿಮಾದ ಹೊಸ ಪೋಸ್ಟರ್‌ ಅನಾವರಣಗೊಳಿಸಿದ್ದು, ಇದರಲ್ಲಿ ಧರ್ಮ ಮತ್ತು ಧೈರ್ಯದ ಸಂಕೇತವಾಗಿರುವ ಪೌರಾಣಿಕ ಪಾತ್ರ ‘ಜಟಾಯು’ಗೆ ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ ತಮ್ಮ ಧ್ವನಿ ನೀಡಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.

ಪೋಸ್ಟರ್ ಹಂಚಿಕೊಂಡಿರುವ ಸಿನಿಮಾ ಟೀಮ್, “ದುಷ್ಟತನವು ಹಾರಾಡಿದಾಗ, ಅದನ್ನ ಎದುರಿಸಲು ಧೈರ್ಯ ಬಂದಿತು. ಅವನು ವಿಜಯಕ್ಕಾಗಿ ಹೋರಾಡಲಿಲ್ಲ, ಬದಲಾಗಿ ಸತ್ಯ ಮತ್ತು ಧರ್ಮಕ್ಕಾಗಿ ಹೋರಾಡಿದನು.

Anupam kher
ವಿಶ್ವದಾದ್ಯಂತ ಏಕಕಾಲಕ್ಕೆ 'ರಾಮಾಯಣ ಭಾಗ 1' ಬಿಡುಗಡೆ: ದಸರಾ ಹಬ್ಬದಿಂದಲೇ ಮುಂಗಡ ಬುಕಿಂಗ್‌ ಆರಂಭ!

ʻಜಟಾಯುʼ, ಧರ್ಮದ ರೆಕ್ಕೆಗಳು. ʻರಾಮಾಯಣʼದಲ್ಲಿ ʻಜಟಾಯುʼ ಪಾತ್ರಕ್ಕೆ ಅನುಪಮ್ ಖೇರ್ ಅವರ ಧ್ವನಿ” ಎಂದು ವಿಶೇಷ ಸಾಲುಗಳನ್ನ ಬರೆದುಕೊಂಡಿದೆ.

ʻರಾಮಾಯಣʼ ಮಹಾಕಾವ್ಯದಲ್ಲಿ ʻಜಟಾಯುʼವಿನ ಪಾತ್ರಕ್ಕೆ ಅತ್ಯುನ್ನತ ಸ್ಥಾನವಿದೆ. ರಾವಣನು ಸೀತಾದೇವಿಯನ್ನ ಅಪಹರಿಸಿ ಲಂಕೆಗೆ ಒಯ್ಯುತ್ತಿದ್ದಾಗ, ತನ್ನ ಪ್ರಾಣದ ಹದನೆನ್ನದೆ ಆಕೆಯನ್ನ ರಕ್ಷಿಸಲು ಧೈರ್ಯದಿಂದ ಹೋರಾಡಿದ ಮಹಾನ್ ವೀರ ಜಟಾಯು.

ರಾವಣನ ಶಕ್ತಿಗೆ ಹೋಲಿಸಿದರೆ, ತಾನು ಎಷ್ಟೇ ಚಿಕ್ಕವನಾಗಿದ್ರೂ, ಧರ್ಮದ ಪರವಾಗಿ ನಿಂತು ಹೋರಾಡಿದ ಆತನ ಶೌರ್ಯಕ್ಕೆ ಅನುಪಮ್ ಖೇರ್ ಅವರ ಧ್ವನಿ ಮೆರಗು ನೀಡಲಿದೆ. ಚಿತ್ರತಂಡದ ಮಾಹಿತಿಯಂತೆ, ʻರಾಮಾಯಣʼ ಪಾರ್ಟ್‌ 1 ಬಿಡುಗಡೆಗೆ ಎಂಟು ದಿನಗಳ ಮುಂಚಿತವಾಗಿ ಅಂದರೆ, ಅಕ್ಟೋಬರ್ 20 ರಿಂದ ಮುಂಗಡ ಬುಕಿಂಗ್ ಪ್ರಾರಂಭವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com