ಕೃಷಿ-ಪರಿಸರ

ಸರ್ಜಿಕಲ್ ಕಾಟನ್

ಇದ್ಯಾವ ಬಗೆಯ ಹತ್ತಿ ಸ್ವಾಮಿ ಅಂದ್ಕೊಂಡ್ರಾ? ಹೌದು, ಇದೊಂದು ಬಗೆಯ ಹತ್ತಿಯ ತಳಿ. ಹತ್ತಿಯಲ್ಲಿ ಹಲವು ವೆರೈಟಿಗಳಿವೆ. ಆ ಪೈಕಿ ಸರ್ಜಿಕಲ್ ಕಾಟನ್ ಕೂಡ ಒಂದು. ಇದನ್ನು ವೈದ್ಯಕೀಯ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ. ಹಾಗಾಗಿ ಇದಕ್ಕೆ ಸರ್ಜಿಕಲ್ ಕಾಟನ್ ಎಂದು ಕರೆಯುತ್ತಾರೆ. ಇದನ್ನು ಉತ್ತರ ಕರ್ನಾಟಕದ ಹಲವೆಡೆ ಬೆಳೆಯಲಾಗುತ್ತಿದೆ. ಇದಕ್ಕೆ ಮಾರುಕಟ್ಟೆಯಲ್ಲೂ ಭಾರಿ ಬೇಡಿಕೆ. ಅಂದಹಾಗೆ ಹತ್ತಿಯ ವೈಜ್ಞಾನಿಕ ಹೆಸರು Gossyium hirsutum.

ಬೆಳೆಯುವ ವಿಧಾನ
ಸಾಮಾನ್ಯ ಹತ್ತಿ ಬೀಜಗಳನ್ನು ಯಾವ ರೀತಿ ಬಿತ್ತುತ್ತವೆಯೋ ಅದೇ ರೀತಿ ಸರ್ಜಿಕಲ್ ಕಾಟನ್ ಬೀಜಗಳನ್ನು ಬಿತ್ತಬೇಕು. ಅಂದರೆ ಬೀಜದಿಂದ ಬೀಜಕ್ಕೆ 8-12 ಇಂಚು ಅಂತರ ಮತ್ತು ಸಾಲಿನಿಂದ ಸಾಲಿಗೆ ನಿಯಂತ್ರಿಸಬೇಕು. ಬೀಜ ಬಿತ್ತಿದ ಬಳಿಕ ಒಂದೆರಡು ಬಾರಿ ಯಡೆ(ಸಾಲು ಮಾಡುವುದು) ಹೊಡೆಯಬೇಕು. ನಾಲ್ಕೂವರೆ ತಿಂಗಳಿಗೆ ಫಸಲು ಕೈಗೆ ಬರುತ್ತದೆ. ಬೀಜ ನಾಟಿಗೆ ಜೂನ್‌ದಿಂದ ಆಗಸ್ಟ್ ಸೂಕ್ತ. ಇದನ್ನು ಮಳೆ ಮತ್ತು ನೀರಾವರಿಯಾಶ್ರಿತವಾಗಿಯೂ ಬೆಳೆಯಬಹುದು. ಎಕರೆಗೆ ಬಿತ್ತಲು ಎರಡೂವರೆ ಕೆಜೆ ಬೀಜ ಬೇಕಾಗುತ್ತದೆ. ಸಾಮಾನ್ಯವಾಗಿ ಹತ್ತಿಗೆ ಬರುವ ರೋಗಗಳೇ ಇದಕ್ಕೂ ಬರುತ್ತವೆ. ಆದರೆ, ಸಾಮಾನ್ಯ ಹತ್ತಿಗೆ ಹೋಲಿಸಿದರೆ ಸರ್ಜಿಕಲ್ ಕಾಟನ್‌ಗೆ ರೋಗಗಳ ಹಾವಳಿ ಕಡಿಮೆ.

ಮಣ್ಣು
ಕಪ್ಪು ಮಣ್ಣು ಇದಕ್ಕೆ ಅತಿ ಸೂಕ್ತ. ಮರಳು ಮತ್ತು ಕಲ್ಲು ಮಿಶ್ರಿತ ಮಣ್ಣು ಹೊರತುಪಡಿಸಿ ಇತರ ಮಣ್ಣುಗಳಲ್ಲಿ ಇದನ್ನು ಬೆಳೆಯಬಹುದು.

ಮಾರುಕಟ್ಟೆ
ಸರ್ಜಿಕಲ್ ಕಾಟನ್‌ಗೆ ಮಾರುಕಟ್ಟೆ ಸಮಸ್ಯೆಯಿಲ್ಲ. ಯಾಕೆಂದರೆ ಮೊದಲೇ ಕಂಪನಿಯವರ ಜತೆ ಒಪ್ಪಂದ ಮಾಡಿಕೊಂಡು ಬೆಳೆಯಹುದು ಅಥವಾ ರೈತರೇ ತಮಗೆ ಅನುಕೂಲವಾಗುವ ಕಂಪನಿಗೆ ಮಾರಾಟ ಮಾಡಬಹುದು. ಅದು ರೈತರ ವಿವೇಚನೆಗೆ ಬಿಟ್ಟ ವಿಚಾರ. ರಾಜ್ಯದಲ್ಲಿ ಆರ್.ಜೆ.-8 ತಳಿಯ ಸರ್ಜಿಕಲ್ ಕಾಟನ್ ಅನ್ನು ಉತ್ತರ ಕರ್ನಾಟಕದ ಹಲವೆಡೆ ಬೆಳೆಯಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತ್ಲಿಹೊರಿನ ರೈತ ಚನ್ನಬಸಪ್ಪ ಬೂದಿಹಾಳ್ (ಮೊ. 9480127714) ಅವರನ್ನು ಸಂಪರ್ಕಿಸಬಹುದು.

-ಮಹೇಶ್ ಅರಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!