ಬಟನ್ ರೋಸ್ 
ಕೃಷಿ-ಪರಿಸರ

ಸಾಂಪ್ರದಾಯಿಕ ಬೆಳೆ ಬಿಟ್ಟು ‘ಬಟನ್ ರೋಸ್’ ನಿಂದ ಜೀವನ ಸುಧಾರಣೆ

ಉದ್ಯಾನನಗರಿಯ ಹೊರವಲಯದ ರೈತರು ಸಾಂಪ್ರದಾಯಿಕ ಬೆಳೆಗಳನ್ನು ಕೈಬಿಟ್ಟಿದ್ದು ಇನ್ನಿತರ ವಾಣಿಜ್ಯ ಬೆಲೆಗಳ ಉತ್ಪಾದನೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.

ಉದ್ಯಾನನಗರಿಯ ಹೊರವಲಯದ ರೈತರು ಸಾಂಪ್ರದಾಯಿಕಬೆಳೆಗಳನ್ನು ಕೈಬಿಟ್ಟಿದ್ದು ಇನ್ನಿತರ ವಾಣಿಜ್ಯ ಬೆಲೆಗಳ ಉತ್ಪಾದನೆಗೆ ಹೆಚ್ಚು ಆಸಕ್ತಿತೋರುತ್ತಿದ್ದಾರೆ. ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಬರುವ ವಿವಿಧ ರೀತಿಯ ಹೂಗಳನ್ನು ಬೆಳೆಯಲು ಗಮನಹರಿಸುತ್ತಿದ್ದಾರೆ.

ಬೆಂಗಳೂರು ಹೊರವಲಯದ ಸಮೀಪದ ಹೊಸಕೋಟೆ ಯುವ ರೈತ ಸತೀಶ್ ತಮ್ಮಗಿರುವ ಎರಡು ಎಕರೆಯಲ್ಲಿ ಬಟನ್ರೋಸ್ ಎಂಬ ಗುಲಾಬಿ ತಳಿಯನ್ನು ಬೆಳೆಯುತ್ತಿದ್ದಾರೆ.ಗುಲಾಬಿ ಹೂಗಿಂತಲು ಸಣ್ಣದಾಗಿರುವ ಬಟನ್ ರೋಸ್ ನೋಡಲು ಆಕರ್ಷಕವಾಗಿವೆ. ಇದರಿಂದಾಗಿ ಜನರುಅಲಂಕಾರಕ್ಕೆ ಈ ಹೂಗಳನ್ನು ಹೆಚ್ಚು ಬೆಳೆಯುತ್ತಾರೆ. ದೇವಸ್ಥಾನಗಳಲ್ಲಿ ದಿನ ನಿತ್ಯದ ಪೂಜೆಕೈಂಕರ್ಯದಲ್ಲಿ ಬಟನ್ ರೋಸ್ ಹೂಗಳನ್ನು ಬಳಸುವುದರಿಂದ ಗುಲಾಬಿ ಹೂಗಿಂತಲು ಬಟನ್ ರೋಸ್ ಗೆ ಹೆಚ್ಚುಬೇಡಿಕೆಯಿದೆ ಎನ್ನುತ್ತಾರೆ ಸತೀಶ್.

ಹೊಸಕೋಟೆ ಸುತ್ತಮುತ್ತಲಿನ ರೈತರು ಇದೀಗಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುವತ್ತ ತೀರ ನಿರಾಸಕ್ತರಾಗಿದ್ದು, ಸಾಂಪ್ರದಾಯಿಕಬೆಳೆಗಳೊಂದಿಗೆ ದಿನನಿತ್ಯ ಆದಾಯ ತಂದುಕೊಡಬಲ್ಲ ಬೆಳೆಗಳನ್ನು ಅಳವಡಿಸಿಕೊಂಡುಆದಾಯ ಪಡೆಯುವಲ್ಲಿ ಕೈಸುಟ್ಟುಕೊಳ್ಳುವ ಪ್ರಮೇಯಕಡಿಮೆಯಾಗ ಬಲ್ಲದು. ಹೀಗೆ ಅಲ್ಪಾವಧಿಯಲ್ಲಿ ಆದಾಯ ತಂದುಕೊಡಬಲ್ಲ ಕಷಿ ಅಳವಡಿಸಿಕೊಂಡು ಉತ್ತಮ ಆದಾಯ ಪಡೆಯುತ್ತಿರುವ ಹಲವುರೈತರು ಬಟನ್ ರೋಸ್ ಬೆಳೆಯತ್ತ ಗಮನ ಹರಿಸಿದ್ದಾರೆ.

ಬಟನ್ ರೋಸ್ ಗಿಡಗಳ ಪೋಷಣೆ

ಬಟನ್ ರೋಸ್ ಗಿಡಗಳಲ್ಲಿ ಹೂಕಾಣಿಸಿಕೊಳ್ಳುವವರೆಗೂ ಮುತುವರ್ಜಿವಹಿಸಬೇಕು. ಸಕಾಲಕ್ಕೆ ನೀರು ಬಿಡಬೇಕು. ಗೊಬ್ಬರ ಹಾಗೂ ಔಷಧಿಸಿಂಪಡಿಸಬೇಕು. ಹೀಗೆ ಮಾಡುವುದರಿಂದ ಗುಲಾಬಿ ಗಿಡಗಳು ಹತ್ತು ವರ್ಷಗಳವರೆಗೆ ಸತತವಾಗಿ ಹೂಬಿಡುತ್ತವೆ. ಗುಲಾಬಿ ಕಡ್ಡಿಗಳನ್ನು ಐದು ಅಡಿಗಳ ಅಂತರದ ಸಾಲುಗಳಲ್ಲಿ ನಾಟಿ ಮಾಡಬೇಕು. ಸಾಲುಗಳನಡುವೆ ಒಂದು ಅಡಿ ಆಳದಲ್ಲಿ ಕೊಟ್ಟಿಗೆ ಗೊಬ್ಬರ ಹಾಕಿ ಮಣ್ಣು ಮುಚ್ಚಬೇಕು. ಬಳಿಕ ಸಾಲುಗಳಿಗೆಮೂರು ದಿನಕ್ಕೊಮ್ಮೆ ನೀರು ಬಿಡಬೇಕು. ಎರಡು ಸಲ ನೀರು ಬಿಟ್ಟ ಬಳಿಕ ಕಡ್ಡಿಗಳನ್ನು ನಾಟಿಮಾಡಬೇಕು.

ಒಂದು ಎಕರೆಗೆ  ಹತ್ತು ಟನ್ ಕೊಟ್ಟಿಗೆ ಗೊಬ್ಬರ ಬೇಕಾಗುತ್ತದೆ. ಸುಮಾರು2250 ಬಟನ್ ರೋಸ್ ಗಿಡದ  ಕಡ್ಡಿಗಳು ನಾಟಿಗೆ ಬೇಕಾಗುತ್ತವೆ. ನಾಟಿ ಮಾಡಿದಹದಿನೈದು ದಿನಗಳ ನಂತರ ಗಿಡಕ್ಕೆ ಎಲೆ ರೋಗ ಹಾಗೂ ನುಸಿ ರೋಗ ಬರುವ ಸಂಭವ ಹೆಚ್ಚಾಗಿರುತ್ತದೆ.ಹೀಗಾಗಿ ಹದಿನೈದು ದಿನಕ್ಕೊಮ್ಮೆ ಸಾಫ್ ಮತ್ತು ಮೊನೊಕ್ರೊಟೊಫಸ್ ದ್ರಾವಣವನ್ನು ಗಿಡಗಳಿಗೆಸಿಂಪಡಿಸಬೇಕು.

ಗಿಡ ನೆಟ್ಟ ಎರಡು ತಿಂಗಳ ಬಳಿಕ ಗಿಡದಲ್ಲಿ ಮೊಗ್ಗುಗಳುಕಾಣಿಸಿಕೊಳ್ಳತ್ತವೆ. ಒಂದು ಎಕರೆಯಲ್ಲಿ ಬೆಳೆ ಇದ್ದರೆ ದಿನ ನಿತ್ಯ 15 ರಿಂದ 20 ಕೆಜಿಯಷ್ಟು ಹೂ ಸಿಗುತ್ತದೆ. ಗಿಡಗಳನಿರ್ವಹಣೆಗೆ 1500 ರು. ಖರ್ಚು ಬರುತ್ತದೆ. ಒಟ್ಟಾರೆ ಎಕರೆಗೆ ರಿಂದ 6 ಸಾವಿರದಿಂದ 9 ಸಾವಿರ ಆದಾಯ ಪಡೆಯಬಹುದು ಎನ್ನುತ್ತಾರೆ ಸತೀಶ್.

- ವಿಶ್ವನಾಥ್. ಎಸ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್