ಕೃಷಿ-ಪರಿಸರ

ಸಕ್ಕರೆ ಆಮದು ತೆರಿಗೆಯನ್ನು ೪೦%ಗೆ ಹೆಚ್ಚಿಸಿದ ಕೇಂದ್ರ ಸಂಪುಟ

Guruprasad Narayana

ನವದೆಹಲಿ: ಇಳಿಯುತ್ತಿರುವ ಸಕ್ಕರೆಯ ಬೆಲೆಯನ್ನು ನಿಯಂತ್ರಿಸಲು ಹಾಗೂ ನಷ್ಟದಲ್ಲಿರುವ ಸಕ್ಕರೆ ಉತ್ಪಾದನಾ ಮಿಲ್ಲುಗಳು ಬಾಕಿ ಹಣವನ್ನು ಬಿಡುಗಡೆ ಮಾಡಲು ಸಹಕಾರಿಯಾಗುವಂತೆ ಕೇಂದ್ರ ಸಂಪುಟ ಬುಧವಾರ ಸಕ್ಕರೆ ಆಮದು ತೆರಿಗೆಯನ್ನು ಶೇಕಡಾ ೨೫ ರಿಂದ ಶೇಕಡಾ ೪೦ಕ್ಕೆ ಏರಿಸಿದೆ.

ಅಲ್ಲದೆ ರಫ್ತುದಾರರಿಗೆ ಇದ್ದ 'ಡ್ಯೂಟಿ ಫ್ರೀ' ಸೌಲಭ್ಯವನ್ನು ಹಿಂದೆಗೆದುಕೊಂಡಿದೆ.

'ಎಥನಾಲ್' ಗೆ ಇದ್ದ ಅಬಕಾರಿ ಶುಲ್ಕವನ್ನು ರದ್ದುಪಡಿಸುವಂತೆ ಕೋರಿದ್ದ ಮಿಲ್ ಮಾಲೀಕರ ಬೇಡಿಕೆಗೆ ಒಪ್ಪಿಗೆ ನೀಡುವುದಕ್ಕೂ ಮುಂಚೆ ಈ ಕ್ರಮಗಳನ್ನು ಕೈಗೊಂಡಿದೆ.

"ಸಕ್ಕರ್ ಮಿಲ್ ಗಳಲ್ಲಿ ಉತ್ಪಾದನೆಯಾಗುವ ಎಥನಾಲ್ ರಫ್ತಿನ ಮೇಲಿದ್ದ ಅಬಕಾರಿ ತೆರಿಗೆಯನ್ನು ರದ್ದುಗೊಳಿಸಿ ಇದರಿಂದ ಬರುವ ಲಾಭಾಂಶವನ್ನು ಸಕ್ಕರ್ ಮಿಲ್ ಗಳಿಗೆ ಸಿಗುವಂತೆ ಕ್ರಮ ಕೈಗೊಳ್ಳಲಾಗಿದೆ" ಎಂದು ಕೇಂದ್ರ ಆಹಾರ ಇಲಾಖೆ ತಿಳಿಸಿದೆ.

"ಇದರಿಂದ ಸಕ್ಕರೆ ಬೆಲೆಯ ಏರುಪೇರಿನ ವೈಪರೀತ್ಯಗಳು ಕಡಿಮೆಯಾಗಲಿದ್ದು, ಮಿಲ್ ಗಳಿಗೂ ಹೆಚ್ಹಿನ ಲಾಭವಾಗಲಿದ್ದು ಕಬ್ಬು ಬೆಳೆಯುವ ರೈತರಿಗೆ ನೀಡಬೇಕಿದ್ದ ಬಾಕಿಯನ್ನು ಮಿಲ್ ಗಳು ಕೊಡುವುದಕ್ಕೆ ಸಹಕಾರಿಯಾಗಲಿದೆ" ಎಂದು ಸಚಿವಾಲಯ ತಿಳಿಸಿದೆ.

ಕಬ್ಬಿನ ಬೆಲೆ ಏರಿಕೆ ಮತ್ತು ಹೆಚ್ಚಿದ ದಾಸ್ತಾನಿನಿಂದ ಮಿಲ್ಲುಗಳಿಗೆ ನಷ್ಟವಾಗದೆ ಇರಲು ಕಳೆದ ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರ ಸಕ್ಕರೆ ಆಮದು ತೆರಿಗೆಯನ್ನು ೧೫% ನಿಂದ ೨೫% ಏರಿಕೆ ಮಾಡಿತ್ತು.

ಕೆಲವು ರಾಜ್ಯಗಳಲ್ಲಿ ಹೆಚ್ಚಿನ ಸಕ್ಕರೆ ಉತ್ಪಾದನೆಯಿಂದ, ಉತ್ಪಾದನೆಗೆ ತಗಲುವ ಖರ್ಚಿಗೂ ಸಕ್ಕರೆಯ ಬೆಲೆ ಇಳಿಮುಖ ಕಂಡಿತ್ತು. ಉದಾಹರಣೆಗೆ ಉತ್ತರಪ್ರದೇಶದಲ್ಲಿ ಸಕ್ಕರೆಯ ಬೆಲೆ ಕೆಜಿಗೆ ೨೫ ರೂ ಇದ್ದು, ಉತ್ಪಾದನಾ ಬೆಲೆ ಕೆಜಿಗೆ ೩೭ ರೂಗಳಿಗೆ ಹೆಚ್ಚಿತ್ತು.

SCROLL FOR NEXT