ಬೀಜಿಂಗ್: ಚೈನಾದ ಲೊಂಗ್ನಾನ್ ನಗರದಲ್ಲಿ, ಪಾಂಡಾದಿಂದ ಕಚ್ಚಿಸಿಕೊಂಡ ಗ್ರಾಮಸ್ಥನೊಬ್ಬನಿಗೆ ೪೦೦೦೦೦ ಯಾನ್ (ಸುಮಾರು ೬೨೫೦೦ ಡಾಲರ್) ಪರಿಹಾರ ನೀಡಲಾಗಿದೆ.
ಮಾರ್ಚ್ ೧ ೨೦೧೪ ರಲ್ಲಿ ತನ್ನ ಗ್ರಾಮಕ್ಕೆ ನುಗ್ಗಿದ್ದ ಪಾಂಡಾವನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ ಗ್ವಾನ್ ಕ್ವಾಂಝಿಗೆ ಪಾಂಡ ಕಚಿದ್ದರ ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡಿದ.
ತನ್ನ ಚಿಕಿತ್ಸೆಗಾಗಿ ಕೌಂಟಿ ಫಾರೆಸ್ಟ್ರಿ ಬ್ಯೂರೋ ಮತ್ತು ಗಾನ್ಸು ಬೈಶ್ಯುಜಿಯಾಂಗ್ ರಾಷ್ಟ್ರೀಯ ಅಭಯಾರಣ್ಯ ಸಂಸ್ಥೆಗಳ ಜೊತೆ ನಡೆಸಿದ ಮಾತುಕತೆಗಳು ಮುರಿದುಬಿದ್ದಾಗ ಗ್ವಾನ್ ಕುಟುಂಬ ಸದಸ್ಯರು ಮೇಲಿನ ಸಂಸ್ಥೆಗಳ ಮೇಲೆ ಕಾನೂನು ದ್ಯಾವೆ ಹೂಡಿದ್ದರು.