ಕೃಷಿ-ಪರಿಸರ

ಕೀಟನಾಶಕ ಸಿಂಪಡಿಸಲು ಬರಲಿದೆ ಚೀನಾ ನಿರ್ಮಿತ ಡ್ರೋಣ್

Lingaraj Badiger

ಹಲವು ದೇಶಗಳಲ್ಲಿ ಪಿಜ್ಜಾ, ಬರ್ಗರ್ ಹಾಗೂ ಇನ್ನಿತರ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುತ್ತಿದ್ದ ಡ್ರೋಣ್ ಸದ್ಯದಲ್ಲೇ ರೈತರ ಹೊಲಗಳಲ್ಲೂ ಹಾರಾಟ ನಡೆಸಲಿದೆ.

ವಿಶ್ವದ ಪ್ರಸಿದ್ಧ ಡ್ರೋಣ್ ನಿರ್ಮಾಣ ಸಂಸ್ಥೆಯಾದ ಚೀನಾದ ಎಸ್‌ಝಡ್ ಡಿಜೆಐ ತಂತ್ರಜ್ಞಾನ ಸಂಸ್ಥೆ ಇದೀಗ ಕೃಷಿ ವಲಯಕ್ಕೆ ಕಾಲಿಡಲು ಸಿದ್ಧತೆ ನಡೆಸಿದ್ದು, ಕೀಟನಾಶಕ ಸಿಂಪಡಿಸುವ ಕಾರ್ಯದಲ್ಲಿ ರೈತರಿಗೆ ನೆರವಾಗಲು ವಿನೂತನ ಡ್ರೋಣ್ ಸಿದ್ಧಪಡಿಸಿದೆ.

15 ಸಾವಿರ ಡಾಲರ್ ಬೆಲೆಯ ಈ ಡ್ರೋಣ್ 2.6 ಗ್ಯಾಲನ್ ಸ್ಪ್ರೇ ಟ್ಯಾಂಕ್‌ನ್ನು ಹೊಂದಿದ್ದು, ಸುಮಾರು 12 ನಿಮಿಷಿಗಳ ಕಾಲ ನಿರಂತರ ಹಾರಾಟ ನಡೆಸಲಿದೆ.

ಈ ಡ್ರೋಣ್ ಒಂದು ಗಂಟೆಗೆ ಸುಮಾರು 7ರಿಂದ 10 ಎಕರೆ ಭೂಮಿಗೆ ಕೀಟ ನಾಶಕವನ್ನು ಸಿಂಪಡಿಸಲಿದೆ.

ಬ್ಯಾಟರಿ ಚಾಲಿತ ಈ ಡಿಜೆಐ ಅಗ್ರಾಸ್ ಎಂಜಿ-1 ಡ್ರೋಣ್ ಮೊದಲು ಚೀನಾ ಹಾಗೂ ದಕ್ಷಿಣ ಕೋರಿಯಾ ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಭಾರತಕ್ಕೆ ಯಾವಾಗ ಬರಲಿದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ನೀಡಿಲ್ಲ. ಆದರೆ ಸದ್ಯದಲ್ಲೇ ಇತರೆ ದೇಶಗಳ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.

SCROLL FOR NEXT