ಕೃಷಿ-ಪರಿಸರ

‘ಮೋದಿ ಬ್ರಾಂಡ್‘ನ ಈ ಮೂಲಂಗಿ ತೂಕ ಬರೋಬ್ಬರಿ 7.5 ಕೆ.ಜಿ!

Vishwanath S

ಇಂದೋರ್: ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ಬಳಿಕ ದೇಶದಲ್ಲಿ 'ನಮೋ' ಕ್ರಾಂತಿ ಮೊಳಗಿತ್ತು. ಅದರಂತೆ ಅಭಿಮಾನಿಗಳು ಮೋದಿ ಹೆಸರಲ್ಲಿ ಪುಸ್ತಕ, ಪೆನ್ನು, ಮಾವು ಹೀಗೆ ಹಲವು ಪದಾರ್ಥಗಳಿಗೆ ಮೋದಿ ಹೆಸರಿಟ್ಟು ಹೆಚ್ಚು ಲಾಭಗಳಿಸಿದ್ದರು.

ಅದೇ ರೀತಿ ಇಂದೋರ್ ನ ರೈತನೊಬ್ಬ ಮೂಲಂಗಿ ತಳಿಯನ್ನು ಅಭಿವೃದ್ಧಿಪಡಿಸಿದ್ದು, ಅದಕ್ಕೆ ಮೋದಿ ಬ್ರಾಂಡ್ ಹೆಸರಿಟ್ಟಿದ್ದ. ಮೋದಿ ದೇಶದಲ್ಲಿ ಮಾಡಿದ ಮೋಡಿ ರೀತಿಯೇ ಈ ಮೂಲಂಗಿ ತಳಿ ಮೋಡಿ ಮಾಡಿದೆ. ಈ ತಳಿಯಿಂದ ಬೆಳೆದ ಮೂಲಂಗಿಯೊಂದು ಬರೋಬ್ಬರಿ 2.5 ಅಡಿ ಉದ್ದ ಮತ್ತು 7.5 ಕೆ.ಜಿ ತೂಗುತ್ತಿದೆ.

ಈ ಬೃಹತ್ ಮೂಲಂಗಿಯನ್ನು ಬೆಳೆದಿದ್ದು ಮತ್ಯಾರು ಅಲ್ಲ ಇಂದೋರ್ ನ ರೈತ ಮುನ್ನಾಭಾಯ್, ಈ ಬೃಹತ್ ಮೂಲಂಗಿಯನ್ನ ಮಾರುಕಟ್ಟೆಗೆ ತಂದಾಗ ವ್ಯಾಪಾರಸ್ಥರು ಅಕ್ಷರಶಃ ದಂಗಾಗಿದ್ದಾರೆ.  ಅಂದಹಾಗೆ, ಯಾವುದೇ ರಸಗೊಬ್ಬರ ಬಳಸದೇ ಕೇವಲ ಹಸುವಿನ ಸಗಣಿಯಿಂದ ತಯಾರಾದ ಗೊಬ್ಬರ ಬಳಸಿ ಈ ಫಸಲನ್ನು ಪಡೆದಿರುವುದಾಗಿ ಮುನ್ನಾಭಾಯ್ ಹೇಳುತ್ತಾರೆ.

SCROLL FOR NEXT