ಕೃಷಿ-ಪರಿಸರ

ಕರ್ನಾಟಕದಲ್ಲೂ ಸಾಧ್ಯ ಕಾಶ್ಮೀರಿ 'ಆ್ಯಪಲ್ ಡೌನ್‌ಲೋಡ್‌'

ದೇಶದ ಉತ್ತರ ತುದಿಯಿಂದ ದಕ್ಷಿಣ ರಾಜ್ಯಕ್ಕೆ ಸೇಬು ಪರಿಚಯಿಸಿದ ಭಗೀರಥ ಪ್ರತಯತ್ನಕ್ಕೀಗ...

ಮಂಗಳೂರು: ದೇಶದ ಉತ್ತರ ತುದಿಯಿಂದ ದಕ್ಷಿಣ ರಾಜ್ಯಕ್ಕೆ ಸೇಬು ಪರಿಚಯಿಸಿದ ಭಗೀರಥ ಪ್ರತಯತ್ನಕ್ಕೀಗ ಕರ್ನಾಟಕದಲ್ಲಿ ಫಲ ದೊರೆತಿದೆ.

ರಾಜ್ಯದಲ್ಲೂ ತಮ್ಮ ತಮ್ಮ ಮನೆಯಂಗಳದಲ್ಲೇ ಬೆಳೆದ ಸೇಬನ್ನು ತಿನ್ನಬಹುದು ಎಂಬುದನ್ನು ತೋರಿಸಿದ್ದಾರೆ ರಾಜ್ಯದ ಕೆಲ ಪ್ರಗತಿಪರ ರೈತರು. ಬೆಳೆಗಾರರ ಈ ಪ್ರಯತ್ನಕ್ಕೆ ನೀರೆರೆದವರು ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿ ಕಾಟುಕುಕ್ಕೆ ಕೃಷ್ಣ ಶೆಟ್ಟಿ. ಇವರ ಪ್ರಯತ್ನದ ಫಲದಿಂದ ಇದೀಗ ದಕ್ಷಿಣ ಭಾರತ ಸೇಬು ಬೆಳೆಗಾರರ ಸಂಘವೂ ಜನ್ಮ ತಳೆದಿದೆ.

ಸ್ವತಃ ಪ್ರಗತಿಪರ ಕೃಷಿಕರಾದ ಕೃಷ್ಣ ಶೆಟ್ಟಿ, ಹಿರೇ ಬಂಡಾಡಿಯಲ್ಲಿರುವ ತಮ್ಮ ಫಾರ್ಮ್‌ಲ್ಲಿ ಮೂಸಂಬಿ, ಕಿತ್ತಳೆ, ಬಾದಾಮಿ ಗಿಡ ನೆಟ್ಟು ಬೆಳೆಸಿದ್ದಾರೆ. ಅಮೆರಿಕಕ್ಕೆ ಒಮ್ಮೆ ಹೋಗಿದ್ದಾಗ ಅಲ್ಲಿ ಸೇಬು ತೋಟ ನೋಡಿ, ತಾವೂ ಬೆಳೆಯಬೇಕೆಂಬ ಕನಸು ಹೊತ್ತರು.

ಅದೇ ಸಂದರ್ಭದಲ್ಲಿ ಕೃಷಿ ಪತ್ರಿಕೆಯಲ್ಲಿ ಹಿಮಾಚಲ ಪ್ರದೇಶದ ಸೇಬು ಪರಿಣತ ವಿಜ್ಞಾನಿಯೊಬ್ಬರ ಸಾಹಸಗಾಥೆಯೊಂದು ಬಂತು. ಇವಿಷ್ಟೇ ಸಾಕಾಯ್ತು ಕರ್ನಾಟಕದಲ್ಲೂ ಸೇಬು ಗಿಡ ಟಿಸಿಲೊಡೆಯಲು.

ಮೊದಲ ಬೆಳೆ

ಅಡಕೆ ಪತ್ರಿಕೆಯ ಶ್ರೀಪಡ್ರೆಯವರು ಸೇಬು ಬೆಳೆ ಬಗ್ಗೆ ಬಿತ್ತಿದ ಕನಸನ್ನು ನನಸು ಮಾಡಲು ಹೊರಟವರು ಕೃಷ್ಣ ಶೆಟ್ಟಿ. ಮೊದಲ ಹಂತದಲ್ಲಿ 2011ರಲ್ಲಿ ಹಿಮಾಚಲದಿಂದ 210 ಗಿಡಗಳು ಪ್ಲೈಟ್‌ಲ್ಲಿ ಬಂದಿಳಿಯಿತು. ಬೆಂಗಳೂರು, ತರಿಕೇರಿ, ಮುಳಬಾಗಿಲು, ಶೃಂಗೇರಿ, ಸೋಮವಾರಪೇಟೆ, ಶಿರಸಿ, ತುಮಕೂರು, ಹೀಗೆ ರಾಜ್ಯದ ಮೂಲೆ ಮೂಲೆ ಹಾಗೂ ಕೇರಳಕ್ಕೂ ರವಾನೆಯಾಯ್ತು. ಅಲ್ಲಿಂದ ಶುರವಾಯ್ತು ಬೆಳೆ ತೆಗೆಯುವ ಕನಸು.

ಕಲ್ಪತರನಾಡು ತುಮಕೂರಿನ ಗಂಗಾಧರಮೂರ್ತಿ ಬೆಳೆದ ಗಿಡದಲ್ಲಿ ಬಿಟ್ಟ ಮೂರು ಹೂವುಗಳು, ಕಾಯಾಗಿ, ಹಣ್ಣಾದವು. ಜನವರಿಯಲ್ಲಿ ಮೊದಲ ಬೆಳೆ ಬಂದರೆ, ಜೂನ್‌ನಲ್ಲಿ ಅದೇ ಗಿಡದಲ್ಲಿ ಎರಡನೇ ಬೆಳೆಯೂ ಕೈಗೆ ಬಂತು. ಹೀಗೆ ಒಬ್ಬೊಬ್ಬ ರೈತರ ಒಂದೊಂದು ಯಶೋಗಾಥೆಯೊಂದಿಗೆ ಸೇಬು ಬೆಳೆ ಕರ್ನಾಟಕದ ಹಲವೆಡೆ ತಳವೂರಿಯಾಗಿದೆ.

ಚಿರಂಜಿತ್ ಪರ್‌ಮಾರ್ ಹಿಮಾಚಲದ ಮಂಡಿಯವರು. ಅಲ್ಲಿನ ತೋಟಗಾರಿಕೆ ಇಲಾಖೆಯ ವಿಜ್ಞಾನಿಯಾಗಿದ್ದು, ಎರಡು ಬಾರಿ ಕರ್ನಾಟಕ್ಕೆ ಆಗಮಿಸಿ ರೈತರಿಗೆ ಮಾಹಿತಿ, ತರಬೇತಿ ನೀಡಿದ್ದಾರೆ. ಗಿಡ ಹೇಗಿರಬೇಕು, ಗೊಬ್ಬರ ಏನು ಯಾವಾಗ ಕೊಡಬೇಕು, ಹೇಗೆ ಟ್ರಿಮ್ ಮಾಡಬೇಕು ಎಂದು ಬೆಳೆಗಾರರಿಗೆ ಮಾಹಿತಿ ನೀಡಿದ್ದರು.

ಟೆರೇಸ್ ಮೇಲೂ

ಕೊಡಗಿನ ಸೋಮವಾರಪೇಟೆಯ ಕಾಲಿಸ್ತಾ ಡಿಸಿಲ್ವಾ ಗಿಡ ನೆಟ್ಟು ಮೂರೇ ವರ್ಷಗಳಲ್ಲಿ ಸೇಬು ಬೆಳೆಯುವ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದಾರಿ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ನಾಗಾನಂದ, ಮನೆಯ ಟೆರೇಸ್‌ನಲ್ಲೇ ಬೆಳೆ ಪಡೆದಿದ್ದಾರೆ. ಕೇವಲ ಸಾವಯವಗೊಬ್ಬರ ಬಳಸಿ ಸುಮಾರು 25 ಸೇಬು ಗಿಡ ಬೆಳೆದಿದ್ದಾರೆ.

ಆದರೆ ಇತ್ತೀಚೆಗೆ ಮಂಗನ ಕಾಟದಿಂದ ಬೆಳೆ ಪಡೆಯಲಾಗದೇ ಪರಿತಪಿಸುತ್ತಿದ್ದಾರೆ. ಹಾಗಾಗಿ ಈಗ ರಾಮನಗರದಲ್ಲಿರುವ ತೋಟದಲ್ಲಿ ಗಿಡ ನೆಟ್ಟಿದ್ದು, ಬೆಳೆಯ ನಿರೀಕ್ಷೆಯಲ್ಲಿದ್ದಾರೆ.

2011ರಲ್ಲಿ 210 ಗಿಡಗಳು, 12ರಲ್ಲಿ 450 ಗಿಡಗಳು, 13ರಲ್ಲಿ 850, 14ರಲ್ಲಿ 2000 ಗಿಡಗಳು ಹಿಮಾಚಲದಿಂದ ಕೃಷ್ಣ ಶೆಟ್ಟಿ ತರಿಸಿದ್ದು, ಈ ಬಾರಿ ಜನ.25ರೊಳಗೆ ಇನ್ನೂ 2000 ಗಿಡಗಳು ಕರ್ನಾಟಕಕ್ಕೆ ಬರಲಿವೆ. ಬೆಳೆಯಲು ಪ್ರಾರಂಭಿಸಿಲ್ಲ. ಮುಂದೊಂದು ದಿನ ರಾಜ್ಯದಲ್ಲಿ ಆ್ಯಪಲ್ ಕ್ರಾಂತಿ ಆದರೆ ಆಶ್ಚರ್ಯವಿಲ್ಲ.

10 ಡಿಗ್ರಿಗೆ ಮೇಲ್ಬಟ್ಟು ಮತ್ತು 35 ಡಿಗ್ರಿಯೊಳಗಿನ ತಾಪಮಾನದ ಯಾವ ಪ್ರದೇಶದಲ್ಲಾದರೂ ಸೇಬು ಬೆಳೆಯಬಹುದು ಎಂದು ತಜ್ಞರು ಭರವಸೆ ನೀಡಿದ್ದರಿಂದ ರಾಜ್ಯದಲ್ಲೂ ಅದೃಷ್ಟ ಪರೀಕ್ಷಿಸಲು ಮುಂದಾದೆವು. ಅದರಲ್ಲಿ ಯಶಸ್ಸೂ ಲಭಿಸಿದೆ. ದಕ್ಷಿಣ ಕನ್ನಡದ ಹಿರೇಬಂಡಾಡಿಯಲ್ಲಿ ಮಳೆಯಿಂದಾಗಿ ಯಶಸ್ಸು ಸಿಕ್ಕಿಲ್ಲ. ಆದರೆ ಪ್ರಯತ್ನ ಕೈಬಿಟ್ಟಿಲ್ಲ.
-ಕೃಷ್ಣ ಶೆಟ್ಟಿ (ದೂ. 9448484198)




-ರಾಘವೇಂದ್ರ ಅಗ್ನಿಹೋತ್ರಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

SCROLL FOR NEXT