ಹರ್ಬಿನ್(ಚೈನಾ): ಚೈನಾದ ಅತಿ ದೊಡ್ಡ ಸೈಬೀರಿಯನ್ ಹುಲಿ ಸಂತತಿ ಕೇಂದ್ರದಲ್ಲಿ ಈ ವರ್ಷ ೭೦ಕ್ಕೂ ಹೆಚ್ಚು ಹುಲಿಮರಿಗಳು ಜನಿಸಿವೆ ಎಂದು ಶನಿವಾರ ತಿಳಿದಿದೆ. ಈ ವಾರ್ಷಿಕ ಈಯುವ ಸಮಯ ಮುಕ್ತಾಯವಾಗುತ್ತ ಬಂದಿದೆ ಎಂದು ಕೇಂದ್ರ ತಿಳಿಸಿದೆ.
ಹೀಲೋಂಗ್ಜಿಯಾಂಗ್ ಸೈಬೀರಿಯನ್ ಹುಲಿ ಸಂರಕ್ಷಣಾ ಅಭಯಾರಣ್ಯದಲ್ಲಿ ೧೦೦೦ಕ್ಕೂ ಹೆಚ್ಚು ಹುಲಿಗಳು ಇದ್ದು, ಪ್ರತಿ ವರ್ಷ ಕೆಲವು ಹುಲಿಗಳನ್ನು ಮುಂದಿನ ಸಂತತಿಗಳನ್ನು ಹಡೆಯುವುದಕ್ಕೆ ಆಯ್ಕೆ ಮಾಡಲಾಗುತ್ತದೆ.
"ಇದು ಈ ಪ್ರಾಣಿವರ್ಗದ ಸಮತೋಲನಕ್ಕೆ ಒಳ್ಳೆಯದು" ಎಂದು ಅಭಯಾರಣ್ಯದ ಮುಖ್ಯಸ್ಥ ಲಿಯೂ ಡ್ಯಾನ್ ತಿಳಿಸಿದ್ದಾರೆ.
ಈ ವರ್ಷದ ಕೊನೆಗೆ ಸುಮಾರು ೧೦೦ ಹುಲಿಮರಿಗಳು ಜನಿಸುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಈ ಮರಿಗಳು ತನ್ನ ತಾಯಿಯ ಜೊತೆ ಮೂರು ತಿಂಗಳವರೆಗೆ ವಾಸವಿದ್ದು ನಂತರ ಅಭಯಾರಣ್ಯದ ಹೊರವಲಯಗಳಲ್ಲಿ ಸ್ವತಂತ್ರವಾಗಿ ವಾಸಿಸಲಿವೆ.
ಸೈಬೀರಿಯನ್ ಹುಲಿಗಳನ್ನು ವಿಶ್ವದ ಅತಿ ಹೆಚ್ಚು ಅಳಿವಿನಂಚಿನ ಪ್ರಾಣಿ ಎಂದು ಗುರುತಿಸಲಾಗಿದ್ದು ಇವು ಸಾಮಾನ್ಯವಾಗಿ ಈಶಾನ್ಯ ಚೀನಾ ಮತ್ತು ಪೂರ್ವ ರಶಿಯಾದಲ್ಲಿ ವಾಸಿಸುತ್ತವೆ.