ಕೃಷಿ-ಪರಿಸರ

2015 ಅತಿ ಹೆಚ್ಚು ತಾಪಮಾನ ದಾಖಲಾದ ವರ್ಷ

Srinivas Rao BV

ನ್ಯೂಯಾರ್ಕ್:ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದು 2015 ಇತಿಹಾಸದ ಅತಿ ಹೆಚ್ಚು ತಾಪಮಾನ ದಾಖಲಾದ ವರ್ಷ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಕ್ರುಸೇಡ್ಸ್ ನಡೆಯುವುದಕ್ಕೂ ಮುನ್ನ ಅಂದರೆ 600 ರಿಂದ ಈ ವರೆಗೆ ದಾಖಲಾದ ಅತಿ ಹೆಚ್ಚು ತಾಪಮಾನದ ವರ್ಷ 2015 ಆಗಿದ್ದು ಜನವರಿ- ಏಪ್ರಿಲ್ ತಿಂಗಳನ್ನು ಹೊರತುಪಡಿಸಿ ವರ್ಷದ ಎಲ್ಲಾ ತಿಂಗಳಲ್ಲೂ ದಾಖಲೆಯ ಪ್ರಮಾಣದಲ್ಲಿ ತಾಪಮಾನ ಉಂಟಾಗಿತ್ತು ಎಂದು ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಆಡಳಿತ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.
ಎಲ್‌ನಿನೋ ಹವಾಮಾನ ಮಾದರಿಯಿಂದ ದಾಖಲೆಯ ಪ್ರಮಾಣದಲ್ಲಿ ತಾಪಮಾನ ಏರಿಕೆಯಾಗಿದೆ ಎಂದು ಹೇಳಲಾಗಿದೆ. ಎಲ್ ನಿನೋ ಪ್ಯಾಟ್ರನ್  ಪೆಸಿಫಿಕ್ ಸಾಗರದಲ್ಲಿ ಹವಾಮಾನ ಆವರ್ತನವಾಗಿದ್ದು ಜಾಗತಿಕ ತಾಪಮಾನದ ಮೇಲೆ ಪರಿಣಾಮ ಬೀರುತ್ತದೆ. ಸಾಗರದ ಆಳದಲ್ಲಿ ಸಂಗ್ರಹವಾಗಿದ್ದ ಉಷ್ಣತೆ ಭೂಮಿಯ ಮೇಲ್ಮೈಗೆ ಸೇರುವುದಕ್ಕೆ ಎಲ್‌ನಿನೋ ಕಾರಣವಾಗಲಿದೆ. ಈ ಹಿನ್ನೆಲೆಯಲ್ಲಿ ಜಾಗತಿಕ ತಾಪಮಾನ ಹೆಚ್ಚಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಪಳೆಯುಳಿಕೆ ಇಂಧನಗಳ ಬಳಕೆ, ಪರಿಸರಕ್ಕೆ ಇಂಗಾಲ ಪರಿಸರಕ್ಕೆ ಅತಿ ಹೆಚ್ಚಾಗಿ ಸೇರುತ್ತಿರುವುದೂ ಜಾಗತಿಕ ತಾಪಮಾನ ಹೆಚ್ಚಲು ಮತೊಂದು ಕಾರಣ ಎನ್ನಲಾಗಿದೆ.

SCROLL FOR NEXT