ಕೃಷಿ-ಪರಿಸರ

ಕಾಂಗರೂಗಳನ್ನು ಬೇಟೆಯಾಡಲು ಆಸ್ಟ್ರೇಲಿಯಾ ನಿವಾಸಿಗಳ ಮನವಿ

Guruprasad Narayana

ಮೆಲ್ಬರ್ನ್: ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ ಕಾಂಗರೂಗಳ ಸಂಖ್ಯೆಯನ್ನು ನಿಗ್ರಹಿಸಲು, ಅವುಗಳನ್ನು ಬೇಟೆಯಾಡಿ ಕೊಲ್ಲಲು 'ತೆರೆದ ಮಾಸ'ದ ಅವಕಾಶ ನೀಡುವಂತೆ ಅಲ್ಲಿನ ನಿವಾಸಿಗಳು ಮನವಿ ಮಾಡಿದ್ದಾರೆ.,

ವಿಕ್ಟೋರಿಯನ್ ಶೂಟರ್ಸ್ ಮತ್ತು ಫಿಶರ್ಸ್ ಪಾರ್ಟಿ ನೀಡಿರುವ ಪ್ರಸ್ತಾವನೆಯಲ್ಲಿ ದಕ್ಷಿಣ ರಾಜ್ಯದಲ್ಲಿ ಹೆಚ್ಚುತ್ತಿರುವ ಕಾಂಗರೂಗಳಿಂದ ಮೋಟಾರ್ ವಾಹನದಾರರಿಗೆ ತೊಂದರೆಯಾಗುತ್ತಿದೆ ಆದುದರಿಂದ ಬೇಟೆಯಾಡಲು ಅವಕಾಶ ನಿಡಬೇಕು ಎಂದು ಕೋರಲಾಗಿದೆ.

ಕಾಂಗರೂಗಳ ಸಂಖ್ಯೆ ವೃದ್ಧಿಸಿರುವುದರಿಂದ ರಸ್ತೆಗಳಲ್ಲಿ ಹೆಚ್ಹು ಅಪಘಾತಗಳು ಸಂಭವಿಸಿ ತಲೆನೋವಾಗಿ ಪರಿಣಮಿಸಿದೆ ಎಂದು ಪಾರ್ಟಿಯ ಪ್ರತಿನಿಧಿ ಡೇನಿಯಲ್ ಯಂಗ್ ತಿಳಿಸಿದ್ದಾರೆ. ಪಕ್ಷಿಗಳನ್ನು ಹಬ್ಬದ ದಿನಗಳಲ್ಲಿ ಬೇಟೆಯಾಡಲು ಅವಕಾಶ ನೀಡುವಂತೆ ಕಾಂಗರೂಗಳನ್ನು ಬೇಟೆಯಾಡಲು 'ತೆರೆದ ಮಾಸ'ಕ್ಕೆ ಆಗ್ರಹಿಸಿದ್ದಾರೆ.

ಇದು ವನ್ಯ ಜೀವಿ ಸಂರಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. ವಿಕ್ಟೋರಿಯಾದಲ್ಲಿ ಕಾಂಗರೂಗಳು ಸಂರಕ್ಷಕ ಪ್ರಾಣಿಗಳ ವರ್ಗಕ್ಕೆ ಸೇರುತ್ತವೆ. ಅವುಗಳನ್ನು ಕೊಲ್ಲಲು ಬೇಟೆಗಾರರು ಪರವಾನಗಿ ಪಡೆದುಕೊಳ್ಳಬೇಕಾಗುತ್ತದೆ. 

SCROLL FOR NEXT