ಚಿತ್ರದುರ್ಗ ಜಿಲ್ಲೆಯ ರೈತರು ಕೇವಲ ಒಂದೇ ಬೆಳೆಗೆ ಜೋತು ಬಿದ್ದು, ಪ್ರತಿಭಾರಿಯೂ ನಷ್ಟವನ್ನೇ ಅನುಭವಿಸುತ್ತಿದ್ಧಾರೆ ಎಂಬ ಆಪಾದನೆಗೆ ಈಗ ಈ ಭಾಗದ ರೈತರು ಉತ್ತರ ನೀಡುತ್ತಿದ್ಧಾರೆ. ಕೇವಲ ಒಂದೇ ಬೆಳೆಯನ್ನು ಬೆಳೆಯದೇ ಪರ್ಯಾಯ ಬೆಳೆಗಳತ್ತ ತಮ್ಮ ಚಿತ್ತ ಹರಿಸಿದ್ಧಾರೆ.
ತಾಲ್ಲೂಕಿಗೆ ಸುಮಾರು 8 ಕಿ.ಮೀ ದೂರವಿರುವ ನನ್ನಿವಾಳ ಗ್ರಾಮದ ರೈತ ತಿಮ್ಮಾರೆಡ್ಡಿ ಪ್ರತಿಭಾರಿಯೂ ಶೇಂಗಾವನ್ನು ಬೆಳೆದು ನಷ್ಟಕೊಳಗಾಗುತ್ತಿದ್ದ, ತಂದೆಯನ್ನು ಅನುಸರಿಸದೆ. ಎಲೆಕೋಸು, ಹೂ ಕೋಸುಗಳನ್ನು ಬೆಳೆದು ಈ ಭಾಗದ ಪ್ರಗತಿಪರ ರೈತರು ಹುಬ್ಬೇರಿಸುವಂತೆ ಮಾಡಿದ್ದಾನೆ. ತನಗೆ ಇರುವ ಮೂರು ಎಕರೆ ಜಮೀನಲ್ಲಿ ಒಂದು ಎಕರೆಗೆ ಹೂಕೋಸು, ಎಲೆಕೋಸು ಹಾಕಿ ಕೇವಲ ಎರಡು ತಿಂಗಳಲ್ಲಿ ಸುಮಾರು 2.50 ಲಕ್ಷ ಲಾಭವನ್ನು ಗಳಿಸಿ ಈ ಭಾಗದ ಚಿಕ್ಕ ವಯಸ್ಸಿನಲ್ಲಿಯೇ ಕೃಷಿಯಲ್ಲಿ ಸಾಧನೆ ಮಾಡಿದ ಕೀರ್ತಿಗೆ ಪಾತ್ರವಾಗಿದ್ದಾನೆ.
ಬಿ.ಎ.ಪದವೀಧರನಾದ ಈತ ಶಿಕ್ಷಣವನ್ನು ಮುಗಿಸಿದ ನಂತರ ಶಿವಮೊಗ್ಗದಲ್ಲಿ ಖಾಸಗಿ ಕಂಪನಿ ಯೊಂದರ ಸೇಲ್ಸ್ ಮ್ಯಾನಾಗಿ ಸುಮಾರು ಎರಡು ವರ್ಷಗಳ ಕಾಲ ಕೆಲಸ ನಿರ್ವಹಿಸಿದ. ತಂದೆಯ ನಿಧನದ ನಂತರ ಮನೆಗೆ ವಾಪಾಸ್ ಬಂದು, ಇರುವ ಮೂರು ಎಕರೆ ಬೀಳು ಜಮೀನಲ್ಲಿ ಕೃಷಿ ಕಾಯಕ ಮಾಡಬೇಕೆಂದುಕೊಂಡ. ಇದಕ್ಕೆ ಸಾಥ್ ನೀಡಿದ್ದು ತಂದೆಯ ಸ್ನೇಹಿತ ರಾಮಚಂದ್ರಪ್ಪ. ಪಕ್ಕದ ಜಮೀನಿನವರಾದ ಇವರು ಬೆಳೆಂiÀiನ್ನು ಬೆಳೆದುಕೊಳ್ಳಲು ಸಾಕಾಗುವಷ್ಟು ನೀರು ನೀಡಿ ಸಹಾಯ ಮಾಡಿದರು. ಇಂದು ಸ್ವಂತ ಬೋರ್‍ನಿಂದ ಈರುಳ್ಳಿ, ಹೂಕೋಸು, ಎಲೆಕೋಸು ಬೆಳೆದು ಎಲ್ಲಾ ಬೆಳೆಯಲ್ಲಿ ಉತ್ತಮ ಲಾಭವನ್ನು ನೋಡುತ್ತಿದ್ಧಾನೆ.
ಎಲೆ, ಹೂಕೋಸು ಬೆಳೆಯುವ ವಿಧಾನ;- ಎಲ್ಲ ಬೆಳೆಯಂತೆ ಈ ಬೆಳೆಗೂ ಸಹ ಸಾವಯವ ಗೊಬ್ಬರ ನೀಡಲಾಗಿದೆ. ನಾಟಿ ಮಾಡುವ ಮುನ್ನ ಭೂಮಿಗೆ ಎರಡು ಬಾರಿ ಕೊಟ್ಟಿಗೆ, ಕುರಿಗೊಬ್ಬರ ನೀಡಿ ಒಮ್ಮೆ ಕುಂಟೆ ಹೊಡೆಯಲಾಗಿದೆ. ಸಸಿ ನಾಟಿ ಮಾಡುವವರೆಗೂ ತೇವಾಂಶವ ಕಡಿಮೆಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಅತಿ ಕಡಿಮೆ ನೀಡಿನಲ್ಲಿ ಬೆಳೆಯ ಬಹುದಾದ ಬೆಳೆಗಳಲ್ಲಿ ಈ ಕೋಸುಗಳಾಗಿವೆ. ಆಂದ್ರ ಪ್ರದೇಶದ ಮದನಪಲ್ಲಿ, ಚಳ್ಳಕೆರೆಯ ನರ್ಸರಿಗಳಿಂದ 15 ಸಾವಿರ ವೆಚ್ಚದಲ್ಲಿ 17 ಸಾವಿರ ಸಸಿಗಳನ್ನು ತಂದು ನಾಟಲಾಗಿದೆ. ನಾಟಿನ ಮಾಡಿದ ಎರಡ್ಮೂರು ದಿನಗಳ ಕಾಲ ಔಷಧಿಯನ್ನು ಪ್ರತಿ ದಿನ ಸಿಂಪಡಿಸಲೇ ಬೇಕು. ನಂತರದ ದಿನಗಳಲ್ಲಿ ವಾರಕೊಮ್ಮೆ ಔಷಧಿಯನ್ನು ನೀಡಿದರೆ ಸಾಕು. 65 ದಿನಗಳಲ್ಲಿ ಉತ್ತಮವಾದ ಬೆಳೆ ನಮ್ಮ ಕೈಸೇರುತ್ತದೆ. ಈ ಬೆಳೆ ಸೂಕ್ಷ್ಮತೆಯಿಂದ ಕೂಡಿದ್ದು, ಔಷಧಿ ಅತ್ಯಂತ ಮುಖ್ಯವಾಗಿರುತ್ತದೆ. ಕೃಷಿ ಇಲಾಖೆಯ ಕಿಸಾನ್ ಕಾಲ್ ಸೆಂಟರ್ ಹಾಗೂ ಕೃಷಿ ಕ್ಷೇತ್ರ ಸಹಾಯಕ ಅನಿಲ್‍ಕುಮಾರ್ ರವರ ಪ್ರತಿಬಾರಿಯ ಮಾರ್ಗದರ್ಶನದಲ್ಲಿ ಉತ್ತಮ ಫಸಲು ಬಂದಿದೆ ಎನ್ನುತ್ತಾರೆ ತಿಮ್ಮಾರೆಡ್ಡಿ ತಾಯಿ ರತ್ನಮ್ಮ.
ಲಾಭ ಲೆಕ್ಕಾಚಾರ;-ಮಾರುಕಟ್ಟೆಯಲ್ಲಿ ಹೂಕೋಸುಗೆ ಹೆಚ್ಚಿನ ಬೇಡಿಕೆ ಇರುವ ಬೆಳೆಯಾಗಿದೆ. ಒಂದು ಪೀಸ್‍ಗೆ 17 ರಿಂದ 20 ರೂಪಾಯಿಯ ವರೆಗೂ ಬೇಡಿಕೆ ಇದೆ. ಎಲೆ ಕೋಸುಗೆ ಕೆ.ಜಿ.ಗೆ 12 ರಿಂದ 15 ರೂಪಾಯಿಗಳು ಸಿಗುತ್ತದೆ. ಈಗಾಗಲೇ 25 ಕ್ವಿಂಟಲ್‍ನ ಒಂದು ಲೋಡ್ ಮಾರುಕಟ್ಟೆಗೆ ಕಳುಹಿಸಿದ್ದು ಉತ್ತಮ ಲಾಭವೂ ಸಿಕ್ಕಿದೆ. ಈ ಒಂದು ಎಕರೆಗೆ ನಮ್ಮ ಎಲ್ಲಾ ಖರ್ಚು 60 ರಿಂದ 70 ಸಾವಿರ ರೂಪಾಯಿ ಆಗಿದೆ. ಚಳ್ಳಕೆರೆ, ಚಿತ್ರದುರ್ಗ, ಆಂದ್ರ ಪ್ರದೇಶ, ಶಿವಮೊಗ್ಗ, ಬಳ್ಳಾರಿ, ದಾವಣೆಗೆರೆಗಳಿಂದ ಖರೀದಿಸಲು ಇಲ್ಲಿಗೆ ಬರುತ್ತಿದ್ಧಾರೆ. ಹೂಕೋಸು ಸುಮಾರು 14 ಸಾವಿರ ಪೀಸ್‍ಗಳಾಗುವ ನಿರೀಕ್ಷೆ ಇದ್ದು ಸುಮಾರು 2.5 ರಿಂದ 3 ಲಕ್ಷ, ಎಲೆ ಕೋಸುನಲ್ಲಿ 1.50 ಲಕ್ಷ ಲಾಭಸಿಗುವ ನಿರೀಕ್ಷೆ ಇದೆ ಎಂದು ತಮ್ಮ ಆತ್ಮವಿಶ್ವಾಸವನ್ನು ವ್ಯಕ್ತ ಪಡಿಸುತ್ತಾರೆ. ರೈತ ತಿಮ್ಮಾರೆಡ್ಡಿ ಸಂಪರ್ಕಕ್ಕೆ 9945814634
ಬೇರೆ ಕಡೆಯಿಂದ ಬಂದ ರೈತ ಗ್ರಾಮದ ಎಸ್‍ಬಿಎಂ ಬ್ಯಾಂಕ್‍ಗೆ ಬಂದು ಕೃಷಿ ಮಾಡಲು ಚಿನ್ನ ಅಡವಿಟ್ಟು 1.50 ಲಕ್ಷ ಸಾಲವನ್ನು ಪಡೆದು ಪ್ರಸ್ತುತ ಬ್ಯಾಂಕ್ ಸಾಲವನ್ನು ತೀರಿಸಿ ಠೇವಣೆಯಾಗಿ 1 ಲಕ್ಷವನ್ನು ಹೂಡಿಕೆ ಮಾಡಿದ್ದಾರೆ. ಇಂತಹ ರೈತರಿಗೆ ನಮ್ಮದೊಂದು ಸಲಾಮ್ ವಿನೋದ್ ವಿ.ಜೋಶಿ ಎಸ್‍ಬಿಎಂ ಬ್ಯಾಂಕ್ ವ್ಯವಸ್ಥಾಪಕರು.
ಶಿವಮೊಗ್ಗದಲ್ಲಿ ಖಾಸಗಿ ಕಂಪನಿ ಯೊಂದರ ಸೇಲ್ಸ್ ಮ್ಯಾನಾಗಿ ಕಾರ್ಯನಿರ್ವಹಿಸುತ್ತಿದ್ದ ತಿಮ್ಮಾರೆಡ್ಡಿ ನನ್ನ ಸ್ನೇಹಿತ ನಿಧನದ ನಂತರ ಮನೆಗೆ ವಾಪಾಸ್ ಬಂದ ಅಸಹಯಕನಾಗಿದ್ದ ಈತನಿಗೆ ನಮ್ಮ ಪಕ್ಕದ ಜಮೀನಿಂದ ನೀರು ಕೊಟ್ಟೆ ಉತ್ತಮ ಶ್ರಮಪಟ್ಟು ದುಡಿದು ಈಗ ತಿಮ್ಮಾರೆಡ್ಡಿಯೇ ಸ್ವಂತ ಬೋರ್ ಕೊರೆಸಿಕೊಂಡು ನೀರು ಸಹ ಬಂದು ಈ ಭಾಗದ ರೈತರ ಹೆಬ್ಬೇರಿಸುವಂತಹ ಲಾಭ ಪಡೆಯುತ್ತಿರುವುದು ಸಂತಸದ ಸಂಗತಿ.
- ರಾಮಚಂದ್ರಪ್ಪ ತಂದೆಯ ಸ್ನೇಹಿತ.
ವಿಳಾಸ;- ಎನ್.ವೀರೇಶ್ ಸಂಪಿಗೆ ಬೀದಿ ಹಿಂಭಾಗದ ರಸ್ತೆ ಗಾಂಧಿನಗರ ಚಳ್ಳಕೆರೆ-577522
ಚಿತ್ರದುರ್ಗ ಜಿಲ್ಲೆ. ಮೊಬೈಲ್;-9980173050
(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/ಗೆ ಭೇಟಿನೀಡಿ.