ಕೇಂದ್ರ ಸರ್ಕಾರವು ಇತ್ತೀಚಿಗಷ್ಟೇ ರೈತರಿಗಾಗಿ ಅಗ್ರಿ ಮಾರ್ಕೆಟ್ ಆ್ಯಪ್ ಅನ್ನು ಪರಿಚಯಿಸಿದ್ದು, ಇದು ರೈತರು ಮತ್ತು ವ್ಯಾಪಾರಿಗಳ ನಡುವೆ ಕೊಂಡಿಯಂತೆ ಕಾರ್ಯನಿರ್ವಹಿಸುತ್ತದೆ.
ಈ ಆ್ಯಪ್ ಮೂಲಕ ಭಾರತದಲ್ಲಿ ಬೆಳೆಯುವ ಬಹುತೇಕ ಎಲ್ಲಾ ಬೆಳಗಳ ಧಾರಣೆ ಲಭ್ಯವಿದೆ. ಇದರಲ್ಲಿ ನಿಮಗೆ ಬೇಕಾದ ಬೆಳೆಗಳ ಮಾಹಿತಿಯನ್ನು ತಳಿಗಳ ಪ್ರಕಾರ ನೋಡಬಹುದಾಗಿದೆ. ಅಲ್ಲದೆ ರಾಜ್ಯವಾರು ಬೆಳೆಗಳ ಮಾಹಿತಿಯನ್ನು ಹಾಕಲಾಗಿದೆ. ಹೀಗಾಗಿ ನಿಮಗೆ ಬೇಕಾದ ರಾಜ್ಯದ ಧಾರಣೆಯನ್ನು ಕ್ಷಣ ಮಾತ್ರದಲ್ಲೇ ಪರಿಶೀಲಿಸಬಹದು.
ಈ ಆ್ಯಪ್ ನಲ್ಲಿ ಪ್ರತಿದಿನ ಮಾಹಿತಿಯನ್ನು ಅಪ್‌ಲೋಡ್ ಮಾಡಲಾಗುತ್ತದೆ. ಅಲ್ಲದೆ ಹಿಂದಿನ ದಿನದ ಮಾಹಿತಿಯನ್ನು ಸಹ ನೋಡಬಹುದಾಗಿದೆ.
ಗೂಗಲ್ ಪ್ಲೇನಿಂದ ಅಗ್ರಿ ಮಾರ್ಕೆಟ್ ಆ್ಯಪ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.