ಬಾಳೆಹಣ್ಣು ಮತ್ತು ಪಪ್ಪಾಯಿ ಬೆಳೆಯೊಂದಿಗೆ ರೈತ ಧನಪಾಲ
ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ರಬಕವಿ-ಬನಹಟ್ಟಿ ಜಮೀಪದ ಹಳಿಂಗಳಿಯ ಧನಪಾಲ ಯಲ್ಲಟ್ಟಿ ಮತ್ತು ಸಹೋದರರು ತಮ್ಮ ತೋಟಗಳಲ್ಲಿ ಒಂದಿಲ್ಲ ಒಂದು ವಿಶೇಷ ಬೆಳೆಯನ್ನು ಬೆಳೆದು ಇತರರರಿಗೆ ಮಾದರಿಯಾಗಿದ್ದಾರೆ.
ತಮ್ಮ 1 ಎಕರೆ 30 ಗುಂಟೆ ಜಾಗೆಯಲ್ಲಿ ಬಾಳೆÉಯ ಜೊತೆ ಮಿಶ್ರ ಬೆಳೆಯಾಗಿ ಪಪ್ಪಾಯಿಯನ್ನು ಬೆಳೆದು ಲಕ್ಷಾಂತರ ರೂ ಲಾಭ ಮಾಡಿಕೊಂಡಿದ್ದಾರೆ
ಮೊದಲು ಭೂಮಿಯನ್ನು ಚೆನ್ನಾಗಿ ಹದ ಮಾಡಿಕೊಂಡು ಒಂದುವರೆ ಎಕರೆಯಲ್ಲಿ ಸಾಲಿನಿಂದ ಸಾಲಿಗೆ 6 ಅಡಿ ಸಸಿಯಿಂದ ಸಸಿಗೆ 5 ಅಡಿ ಅಂತರದಲ್ಲಿ ಅಂಗಾಂಶ ಕೃಷಿ ಜಿ-9 ಬಾಳೆ ಸಸಿಗಳನ್ನು ನಾಟಿ ಮಾಡಲಾಗಿದ್ದು, ನಾಟಿ ಮಾಡುವ ಪೂರ್ವದಲ್ಲಿ ಬೆಡ್ ನಿರ್ಮಾಣಕ್ಕೂ ಮುಂಚೆ 1 ಎಕರೆಗೆ 10 ಟನ್ ಕಾಂಪೋಸ್ಟ್ ಗೊಬ್ಬರ್, ಡಿಪಿಎ 75ಕೆಜಿ, ಅಮಿನೋ ಜಿ ಪ್ಲಸ್ 24 ಕೆಜಿ, ಎಸ್.ಎ.ಪಿ 80 ಕೆಜಿ ಹಾಗೂ 2 ಕೆಜಿಯಷ್ಟು ಮಿಕ್ಸ ಮಾಡಿ ಬೋದನಲ್ಲಿ ಹಾಕಿಕೊಂಡು ಹನಿ ನಿರಾವರಿ ಅಳವಡಿಸಿ ಬಾಳೆ ಸಸಿ ಲಾವಣಿ ಮಾಡಿಕೊಂಡು ತದನಂತರ ಅದೇ ಬಾಳೆಯಲ್ಲಿ ಮಿಶ್ರ ಬೆಳೆಯಾಗಿ ಪಪ್ಪಾಯಿ ತೈವಾನ್ ರೆಡ್ ಲೇಡಿ ಬೆಳೆಯನ್ನು ಸಾಲಿನಿಂದ ಸಾಲು 12 ಅಡಿ ಹಾಗೂ ಸಸಿಯಿಂದ ಸಸಿಗೆ 8 ಅಡಿ ಅಂದರೆ 1 ಸಾಲು ಬಿಟ್ಟು 1 ಸಾಲಿನಲ್ಲಿ ಎರಡು ಬಾಳೆ ಸಸಿಯ ಮಧ್ಯ ಪಪ್ಪಾಯಿ ಸಸಿಗಳನ್ನು ನಾಟಿ ಮಾಡಿಕೊಂಡೆವು. ಕಾರಣ ಇಷ್ಟೆ ಇದರಿಂದ ಪಪ್ಪಾಯಿಯಲ್ಲಿ ಕಾಣುವ ಮುಖ್ಯ ರೋಗ ಪಿಆರ್‍ಎಸ್‍ವಿ( ಪಪ್ಪಾಯಿ ರಿಂಗ್ ಸ್ಪಾಟ್ ವೈರಸ್) ತಕ್ಕ ಮಟ್ಟಿಗೆ ಅಂದರೆ 90% ರಷ್ಟು ಹತ್ತೋಟಿ ಆಗಿದೆ. ಅಂದರೆ ಒಂದೇ ಖರ್ಚಿನಲ್ಲಿ ಎರಡು ಬೆಳೆಗಳನ್ನು ಬೆಳೆಯಲು ಸಾಧ್ಯವಾಗಿದೆ. ಅಲ್ಲದೆ ಮುಖ್ಯವಾಗಿ ಕಾಡುವ ರಸಹೀರುವ ಕೀಟ್, ಹೇನುಗಳು ಕೂಡಾ ಹತೋಟಿಯಾಗಿವೆ. ತೋಟದ ಸುತ್ತಲೂ ಚೋಗಚೆಯನ್ನು ಕೂಡಾ ಹಾಕಿದ್ದೇವೆ ಎನ್ನುತ್ತಾರೆ ರೈತ ಧನಪಾಲ ಯಲ್ಲಟ್ಟಿ.
ಪ್ರತಿ 10-12 ದಿನಕ್ಕೊಮ್ಮೆ ಡ್ರಿಪ್ ಮೂಕಾಂತರ ಎನ್.ಪಿ.ಕೆ ಜೊತೆಗೆ ಉಪಮ್, ಮಿಂಗಲ್ ಹಾಗೂ ಲಿಯೋನಾರ ನಂತಹ ಉತ್ಪನ್ನಗಳನ್ನು ಕೊಡುತ್ತೇವೆ. ಅಲ್ಲದೇ ಎಕ್ಸಿಡ್ ಮತ್ತು ಆ್ಯಂಪಲ್‍ಗಳನ್ನು ಸಿಂಪರಣೆಗಾಗಿ ಬಳಸುತ್ತಿದ್ದೇವೆ. ಒಟ್ಟಾರೆಯಾಗಿ ತೋಟಗಾರಿಕೆ ಹಾಗೂ ಕೃಷಿ ವಿಶ್ವವಿದ್ಯಾಲಯಗಳ ಅಕಾರಿಗಳ ಸಲಹೆ ಮತ್ತು ಮಾರ್ಗದರ್ಶನದ ಮೂಲಕ ಸಮತೋಲನ ಗೊಬ್ಬರ ಆಹಾರವನ್ನು ಓದಗಿಸಿ ಉತ್ತಮ ಆದಾಯ ಗಳಿಸಿದ್ದೇವೆ ಎಂದು ಯಲ್ಲಟ್ಟಿ ಹೇಳುತ್ತಾರೆ.
ಬಾಳೆ 1550 ಸಸಿಗಳು 45 ಸರಾಸರಿ ತೂಕ ಒಟ್ಟು 45 ಟನ್ ಇಳುವರಿ ಪಡೆದು ಸುಮಾರು ರೂ. 6 ಲಕ್ಷ 7 ಸಾವಿರ 500 ಲಾಭ ಬಂದರೆ, ಪಪ್ಪಾಯಿಸಿಂದ 400 ಸಸಿಗಳು, ಪ್ರತಿ ಸಸಿಗೆ 50 ಹಣ್ಣುಗಳು ಒಂದು ಹಣ್ಣು ಸರಾಸರಿ 1ವರೆ ಕೆಜಿ ಬಂದಿದ್ದು ರೂ. 6 ರಂತೆ ಮಾರಾಟವಾಗಿ ಸುಮಾರು 1 ಲಕ್ಷ 80 ಸಾವಿರ ಆದಾಯ ಬಂದಿದ್ದು, ಒಟ್ಟು ಅಂದಾಜು 80 ಸಾವಿರ ಖರ್ಚು ಬಂದಿದೆ. ಆದ್ದರಿಂದ ಒಟ್ಟು ಖರ್ಚು ತೆಗೆದು ಒಂದು ವರ್ಷಕ್ಕೆ 7 ಲಕ್ಷಕ್ಕಿಂತಲೂ ಹೆಚ್ಚು ಆದಾಯ ಬಂದಿದೆ.
ಹೀಗೆ ಮೀಶ್ರ ಬೆಳೆ ಬೆಳೆಯುವುದರಿಂದÀ ಒಂದು ಬೆಳೆ ಕೈಕೊಟ್ಟರು ಇನ್ನೊಂದು ಬೆಳೆಯಲ್ಲಿ ನಾವು ಆದಾಯವನ್ನು ಪಡೆಯಬಹುದು ಅಂತ ಮನಗಂಡು ಮಿಶ್ರಬೆಳೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಡುತ್ತಿದ್ದೇವೆ. ಅಲ್ಲದೇ ಬಾಳೆ ಬೆಳೆಯಲ್ಲಿ ಪಪ್ಪಾಯಿ ಬೆಳೆ ಬೆಳೆದಿರುವುದರಿಂದ ಪಪ್ಪಾಯಿಗೆ ಯಾವುದೇ ರೀತಿಯ ಹೆಚ್ಚಿನ ಖರ್ಚು ಆಗಿಲ್ಲ ಎನ್ನುತ್ತಾರೆ ಧನಪಾಲ.
ಹೆಚ್ಚಿನ ಮಾಹಿತಿಗಾಗಿ ಧನಪಾಲ ಎನ್. ಯಲ್ಲಟ್ಟಿ, ಹಳಿಂಗಳಿ ಗ್ರಾಮ, ತಾ. ಜಮಖಂಡಿ ಜಿ. ಬಾಗಲಕೋಟ ಮೊ: 9900030678ಗೆ ಸಂಪರ್ಕಿಸಬಹುದು.