ನಗರೆಪ್ಪ ಭಜಂತ್ರಿ 
ಕೃಷಿ-ಪರಿಸರ

ಬಿಸಿಲ ನಾಡಿನ ರೈತನ ಚಿತ್ತ ಮಿಶ್ರ ಬೆಳೆಯತ್ತ

ನೀರಿನ ಬರ ಪ್ರಸ್ತುತ ದಿನಗಳಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಅಂತಹ ನೀರಿನ ಬರದಲ್ಲೆ ಈ ರೈತ ಹಲವಾರು ರೀತಿಯ ಮಿಶ್ರ ಬೆಳೆಗಳನ್ನು ಬೆಳೆಯುತ್ತಾ ಒಬ್ಬ ಸಾಹಸಿ...

ನೀರಿನ ಬರ ಪ್ರಸ್ತುತ ದಿನಗಳಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಅಂತಹ ನೀರಿನ ಬರದಲ್ಲೆ ಈ ರೈತ ಹಲವಾರು ರೀತಿಯ ಮಿಶ್ರ ಬೆಳೆಗಳನ್ನು ಬೆಳೆಯುತ್ತಾ ಒಬ್ಬ ಸಾಹಸಿ, ಪ್ರಗತಿಪರ ರೈತ ಎಂದು ಕರೆಸಿಕೊಂಡಿದ್ದಾನೆ. ಇವರ ತೋಟಕ್ಕೆ ಕಾಲಿಟ್ಟರೆ ಸಾಕು ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಬೆಳೆಗಳು ನೋಡುಗರ ಮನಸ್ಸನ್ನು ಮನಸೂರೆಗೊಳಿಸುತ್ತವೆ. ಈ ತೋಟದಲ್ಲಿರುವ ಬೆಳೆ ಹಾಗೂ ಗಿಡ ಮರಗಳ ನೆರಳಿನ ತಂಪು ವಾತವರಣ ಚಿಲಿ ಪಿಲಿ ಹಕ್ಕಿಗಳ ನಿನಾದ ಮನಸ್ಸಿಗೆ ಮುದ ನೀಡುತ್ತದೆ.
ವೃತ್ತಿಯಲ್ಲಿ ಇವರು ಭಜಂತ್ರಿಯಾದರೂ ಕೃಷಿಯಲ್ಲೆನು ಕಡಿಮೆ ಇಲ್ಲಾ ಎಂದೂ ಸಾಭಿತುಪಡಿಸಿದ್ದಾರೆ. ಪೂರ್ತಿ ಮಿಶ್ರಬೆಳೆ ಹಾಕಿ, ಸಮ್ಮಿಶ್ರ ಲಾಭ ಪಡೆಯುತ್ತಿದ್ದಾರೆ. ಶಾಲೆಯಲ್ಲಿ ಎರಡನೆಯ ಕ್ಲಾಸ್ ಆದರೂ ಕೃಷಿ ಇಲಾಖೆಯವರಿಂದ ಮಾಹಿತಿ ತಿಳಿದುಕೊಂಡು ಮತ್ತು ಕೃಷಿಯ ಬಗ್ಗೆ  ಇರುವ ಬೆಳೆಗಳ ಪುಸ್ತಕಗಳನ್ನು ಓದಿ ಇವುರು ಕೃಷಿಯಲ್ಲಿ ನೈಸಗಿರ್ಕವಾಗಿ ಸುಮಾರು 30 ವರ್ಷಗಳಿಂದ ತೋಟಗಾರಿಕೆ ಅನುಭವವನ್ನು ಹೊಂದಿ ವ್ಯವಸಹಾಯ ಮಾಡುತ್ತಾ ಬಂದಿದ್ದಾರೆ. ಅವರೆ ನಗರೆಪ್ಪ ತಂದೆ ದ್ಯಾಮಣ್ಣ ಭಜಂತ್ರಿ ಇವರು ಬಿಸಿಲ ನಾಡು ಸಗರನಾಡಿನ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೊಡೆಕಲ್ ಹೊಬಳಿಯ ವ್ಯಾಪ್ತಿಯಲ್ಲಿ ಬರುವ ಯರಕಿಹಾಳ ಗ್ರಾಮದವರು.
20 ಎಕರೆ ಭೂಮಿಯಲ್ಲಿ ಏನೆನೂ ಬೆಳೆದಿದ್ದಾರೆ ಅಂದರೆ ನಮಗೆ ಆಶ್ಚರ್ಯವೆನಿಸಬಹುದು. ಇವರ ಜಮೀನನಲ್ಲಿ ಹಲವಾರು ವಿದಧ ಬೆಳೆಗಳು ನಮ್ಮ ಕಣ್ಣಿಗೆ ಬಿಳುತ್ತವೇ ಈ ಎಲ್ಲಾ ಬೆಳೆಗಳಿಗೆ ಸೂಕ್ತವಾಗಿ ನೀರು ಹರಿಸಲು ತಮ್ಮ ಸ್ವಂತ: ತೋಟದಲ್ಲೆ ಎರಡು ಬೋರ್‍ವೆಲ್ ಹಾಕಿಸಿದ್ದಾರೆ. 4 ಎಕರೆ ಕಬ್ಬು , 3 ಎಕರೆ ನಿಂಬೆತೋಟ, 3 ಎಕರೆ ಚಿಕ್ಕು ಹಣ್ಣು (ಸಪೋಟಾ), 1 ಎಕರೆ ಟಮೋಟಾ, 1 ಎಕರೆ ಬದನೆಕಾಯಿ, 1 ಎಕರೆ ಡಬ್ಬು ಮೆಣಸಿನಕಾಯಿ 1 ಎಕರೆ ಈರುಳ್ಳಿ ಮತ್ತು 6 ಎಕರೆ ತೋಗರಿ. ಇವೇಲ್ಲಾ ಬೆಳೆಗಳಿಂದ ವರ್ಷಕ್ಕೆ ಎರಡು ಪಸಲನ್ನು ತೆಗೆಯುತ್ತಾರೆ.
ಇವೇಲ್ಲಾವುಗಳ ಬದುವಿನ ಸಾಲುಗಳಲ್ಲಿ 600 ಸಾಗುವಾನಿ ಗಿಡಗಳು ಮತ್ತು 60 ತೆಂಗಿನ ಮರಗಳು 40 ಮಾವಿನ ಮರಗಳು ತಲೆ ಎತ್ತಿ ನಿಂತಿವೆ. ಗಿಡಗಳ ಟೊಂಗೆಗಳಲ್ಲಿ ಸುಮಾರು 30ಕ್ಕೂ ಹೆಚ್ಚು ಹೆಜ್ಜೆನುಗಳಿವೆ ಅವುಗಳನ್ನು ಸಹ ಬಿಡಿಸಿ ಸಿಹಿ ತುಪ್ಪವನ್ನು ಸಹ ಮಾರಾಟ ಮಾಡುತ್ತಾರೆ. ಈ ಬೆಳೆಗಳಿಗೆ ಯಾವುದೇ ರೀತಿಯ ರಾಸಯನಿಕ ಗೊಬ್ಬರವನ್ನು ಬಳುಸುವುದಿಲ್ಲಾ. ತಿಪ್ಪೆ ಗೊಬ್ಬರವನ್ನು ಹಾಗೂ ಸಾವಯುವ ಗೊಬ್ಬರ (ಕಾಂಪೋಸ್ಟ್) ನ್ನು ವರ್ಷಕ್ಕೆ ಎರಡು ಬಾರಿ 4 ಟ್ರ್ಯಾಕ್ಟರ್‍ನ್ನು ಸಿಂಪಿಡಸಿ ಬೆಳೆಗಳಿಂದ ಉತ್ತಮ ಫಲವತ್ತತೆಯನ್ನು ಪಡೆಯುತ್ತಾರೆ. ಇದೆನ್ನೆಲ್ಲಾ ನಗರೇಪ್ಪನವರು ಶ್ರಮಪಟ್ಟು ದುಡಿದ ಭೂಮಿತಾಯಿ ಫಲ ಹೈತ್ರಿ ಎಂದೂ ತಮ್ಮ ಮನಸ್ಸಿನ ಅಭಿಲಾಷೆಯ ಮಾತುಗಳನ್ನು ನಗು ಮುಖದಲ್ಲೆ ಬಿಚ್ಚಿಟ್ಟರು. ಹಾಗೂ ಇವರ ಮನೆಯಲ್ಲಿರುವ ಎರಡೂ ಎತ್ತುಗಳಿಂದ ಇಡೀ ಜಮೀನನ್ನು ಸಾಗುವಳಿ ಮಾಡುತ್ತೆವೆ. ಮತ್ತು 45 ಕೋಳಿಗಳಿವೆ ಅವುಗಳು ಕ್ರಿಮಿ ಕೀಟಗಳನ್ನು ಆಯ್ದು ತಿನ್ನುತ್ತವೆ ಬೆಳೆಗೆ ಯಾವುದೆ ರೀತಿ ಹಾನಿಯಾಗುವುದಿಲ್ಲಾ ಎನ್ನುತ್ತಾನೆ ಈ ರೈತ.
ಬೆಳೆಗಳನ್ನು ಬೆಳೆಯುವದು ಹೇಗೆ?
ಕಬ್ಬಿನ ಸಣ್ಣ ಸಣ್ಣ ಗಣಕೆಯನ್ನು ಕೊಂಡು ತಂದು ಮಣ್ಣನ್ನು ಅದುಗೊಳಿಸಿ ಮಡಿಯನ್ನು ಮಾಡಿ ಹಲವಾರು ಸಾಲುಗಳನ್ನು ಕಟ್ಟಿ ನೀರುನ್ನು ಬಿಟ್ಟು ಸಂಪೂರ್ಣ ಮೃದುಗೊಳಿಸಿ ತಿಪ್ಪೆ ಗೊಬ್ಬರವನ್ನು ಹಾಕುತ್ತಾರೆ ಒಂದೊಂದು ಮಾರಿಗೆ ಗಣಕೆಯನ್ನು ನೆಟ್ಟು ಒಂದು ವಾರದವರೆಗೆ ನೀರನ್ನು ಹರಿಸದೆ ಬಿಡುತ್ತಾರೆ ತದ ನಂತರ. ಗಣಕಿಯ ಬುಡದಲ್ಲಿ ಹಸಿರು ರವದೆಯಂತೆ ಚಿಗುರುತ್ತದೆ. ಮುಂದೆ ಏಳೆಂಟು ಗಣಕೆಗಳಿಂದ ಎತ್ತರವಾಗಿ ಹಸಿರಿನಿಂದ ನಿಂತು ಬಿಡುತ್ತದೆ. ಇದನ್ನು ಕಟಾವು ಮಾಡಿ ಟನ್ ಗಟ್ಟಲೇ ಮಾರಟಮಾಡಲಾಗುತ್ತದೆ.
ಟಮೋಟಾ ಬೆಳೆಯಲು ಭೂಮಿಯನ್ನು ಅದಗೊಳಿಸಿ ಮಡಿಗಳನ್ನು ಮಾಡಿ ನೀರನ್ನು ಹಾಯಿಸಿ ಬೀಜಗಳನ್ನು ಚೆಲ್ಲುತ್ತಾರೆ. ಒಂದು ತಿಂಗಳ ನಂತರ ಸಸಿಗಳಾಗಿ ಬೆಳೆದು ನಿಲ್ಲುತ್ತವೆ ಅವುಗಳನ್ನು ಕಿತ್ತಿ ನಾಟಿ ಮಾಡುವ ಭೂಮಿಗೆ ಸಾಲುಗಳನ್ನು ಬಿಟ್ಟು ಸಸಿಗಳನ್ನು ನೇಡಲಾಗುತ್ತದೆ. ಇಗೇ ಬೆಳದ ಟಮೋಟಾ ಸಸಿಗಳಿಗೆ ಯಾವುದೆ ವಿಷಕಾರಿ ಹುಳುಗಳು ರೋಗಬಾದೆ ಹರತಡದಂತೆ ಕ್ರಿಮಿನಾಶಕ ಎಣ್ಣೆಯನ್ನು ಸಿಂಪೆಡೆಸುತ್ತಾರೆ. ಎರಡೂ ಮೂರು ತಿಂಗಳ ನಂತರ ಫಲವನ್ನು ನೀಡುತ್ತದೆ. ಇದಕ್ಕೆ ಸುಮಾರು 15000 ರೂ. ಖರ್ಚು ತಗಲುತ್ತದೆ. ಇದೆ ರೀತಿಂiÀiಲ್ಲಿ ಮೇಣಸಿನಕಾಯಿಯು ಕೂಡಾ ಆರೈಕೆ ಮಾಡಿ ಅದರಿಂದ ಉತ್ತಮ ಫಲವನ್ನು ಪಡೆಯುತ್ತಾರೆ.
ಮತ್ತು ಚಿಕ್ಕು ಹಣ್ಣಿನ ಗಿಡದ ಸಸಿ ಇರುವಾಗಲೇ ತಂದು ಭೂಮಿಯ ಮಣ್ಣನ್ನು ಗೊಲಾಕರದಲ್ಲಿ ಹೊಂಡವನ್ನು ಸಿದ್ದಗೊಳಿಸಿ ಅದರಲ್ಲಿ ನೇಟ್ಟು ಹಾಗೇಯೆ ಬೆಳೆದೆಂತೆಲ್ಲಾ ಈ ಸಾವಯುವ ಗೊಬ್ಬರವನ್ನು ಸಿಂಪೆಡಿಸುತ್ತಾ ನೀರನ್ನು ಹರಿಸುತ್ತಾ  ಬರಲಾಗುತ್ತದೆ. ಮುಂದೆ ಏಳರಿಂದ ಎಂಟು ಪೀಟು ಬೆಳೆದು  ಹೂವನ್ನು ಬಿಟ್ಟು ಹಣ್ಣಿನ ಫಲ ಬೀಡುತ್ತದೆ. ಇದು ವರ್ಷಕ್ಕೆ ಎರಡು ಬಾರಿ ಫಲ ಕೊಡುತ್ತದೆ.  ನಿಂಬೆ ಹಣ್ಣು ಸಹ ಈ ಗಿಡದಷ್ಟೇ ಎತ್ತರ ಬೆಳೆದು ವರ್ಷದಲ್ಲಿ ನಿರಂತರ ಫಲವನ್ನು ನೀಡುತ್ತದೆ. ಎಂದೂ ನಗರೆಪ್ಪನವರು ಹೇಗೆ ಬೆಳೆಯಬೆಕೆಂಬ ಸಲಹೆವನ್ನು ಖುಷಿಯಿಂದ ನೀಡಿದರು...
ಯಾವ ಬೆಳೆಗೆ ಎಷ್ಟು ಲಾಭ?
ಯಾವ ಬೆಳೆಗೆ ಎಷ್ಟು ಲಾಭವನ್ನು ಪಡೆಯಬಹುದೆಂದು ತಿಳಿಸುತ್ತಾರೆ. ಟಮೋಟಾ ಒಂದು ಬುಟ್ಟಿಗೆ 200ರಿಂದ 250 ರು. ಸಿಗಹಬಹುದು. ಚಿಕ್ಕು (ಸಪೋಟಾ) ಹಣ್ಣಿನಿಂದ ಕೇಜಿಗೆ 16 ರು. ದೊರೆಯುತ್ತದೆ. ನಿಂಬೆಹಣ್ಣು ಒಂದು ಚೀಲಕ್ಕೆ 100 ದಿಂದ 1500 ರು. ವರೆಗೆ ಮಾರುತ್ತೆವೆ. ಕಳೆದ ವರ್ಷದಲ್ಲಿ ನಿಂಬೆಹಣ್ಣಿಗೆ 3 ಲಕ್ಷ ರು. ಲಾಭ ದೊರೆಕಿದೆ. ಚಿಕ್ಕು ಹಣ್ಣಿನಿಂದ ಸುಮಾರು ಎರಡೂವರೆ ಲಕ್ಷ ಸಿಕ್ಕಿದೆ. ಹಾಗೆಯೆ 30 ಸಾಗುವನಿ ಗಿಡಗಳಿಗೆ  2 ಲಕ್ಷ ರು. ಮತ್ತು ಮಾವಿನ ಮರಗಳನ್ನು ಬೇರೆಯವರಿಗೆ ಲಿಜ್ ರೂಪದಲ್ಲಿ ಕೊಟ್ಟಾಗ 25 ಸಾವಿರ ರು. ದೊರೆತಿದೆ. ಸದ್ಯದ ಮಟ್ಟಿನಲ್ಲಿಯು ಕೂಡಾ ಬದನೆಕಾಯಿ, ಈರುಳ್ಳಿ ಯಿಂದಲೂ ಸುಗಮವಾದ ಲಾಭವನ್ನು ಪಡೆಯುತ್ತಿದ್ದೇನೆ ಎಂದೂ ಉತ್ಸಾಹದಿಂದ ಹೇಳುತ್ತಾರೆ ನಗರೆಪ್ಪ ಭಜಂತ್ರಿ.
ಮುಂದಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರ ಸಂಪೂರ್ಣ ಬಳಸದೆ ಇರುವುದಕ್ಕೆ ನಮ್ಮ ತೋಟದ ಜಾಗದಲ್ಲೆ ಎರೆಹುಳು ತೊಟ್ಟೆಯನ್ನು ನಿರ್ಮಿಸಲು ಏರ್ಪಾಡು ಮಾಡುತ್ತಿದ್ದೆವೆ ಇದಕ್ಕೆ ಸರ್ಕಾರದಿಂದ 15000 ಸಾವಿರ ರುಪಾಯಿ ಸಹಾಯ ಧನ ನೀಡಿದೆ. ನಮ್ಮ ಸ್ವಂತ: ಕೈಯಿಂದ 40 ಸಾವಿರ ರು.ಯನ್ನು ಹಾಕಿ ಈ ತೊಟ್ಟಿಯನ್ನು ನಿರ್ಮಿಸಲು ಮುಂದಾಗಿದ್ದೆವೆ. ಈ ಗೊಬ್ಬರವನ್ನು ಮಾಡಿಕೊಳ್ಳುವುದಕ್ಕೆ ತುಂಬಾ ಅನುಕೂಲಾವಾಗಿದೆ ಎನ್ನುತ್ತಾರೆ ರೈತ. ಅಲ್ಲದೆ ಮಿಶ್ರ ಬೆಳೆ ಬೆಳೆಯಲು ಮುಂದಾಗುವ ಹಲವಾರು ರೈತರಿಗೆ ಮಾರ್ಗದರ್ಶನ ನೀಡತ್ತಿದ್ದಾರೆ. ಇವರ ಸಂಪರ್ಕ ಸಂಖ್ಯೆ 9591062719.
ರೈತನ ಅನಿಸಿಕೆ
ನನಗೆ ಇವೇಲ್ಲಾ ಮಿಶ್ರ ಬೆಳೆ ಬೆಳೆಯುದಕ್ಕೆ ಕೃಷಿ ಇಲಾಖೆದವ್ರು ಮಾಹಿತಿ ನೀಡಿದರು ಅವರ ಮಾರ್ಗದಲ್ಲೆ ನಾನು ಇಷ್ಟೆಲ್ಲಾ ಬೆಳಿ ಬೆಳಯಲಿಕ್ಕೆ ಅನುಕೂಲ ಆಯಿತು. ನೀರು ಇಲ್ಲದೆ ಬರಗಾಲ ಬಂದಿದೆ ಆದರೂ ಕೂಡಾ ನೀವು ನೇಲ ಬೋರವೆಲ್‍ಗಳನ್ನು ಹಾಕಿ ಬೆಳೆಯಿರಿ. ಒಂದೆ ಬೆಳೆಯನ್ನು ನಂಬಿಕೊಂಡು ಕುತುಕೊಳ್ಳಬೇಡಿ ಆದಷ್ಟು ಸರ್ಕಾರದಿಂದ ಸಹಾಧನ ಪಡೆದು ಮಿಶ್ರ ಬೆಳೆಗಳತ್ತ ಗಮನವಹಿಸ್ರಿ ಯಾರು ರೈತರು ಸಾವಿಗೆ ಇಡಾಗಬಾರದು.
-ನಗರೆಪ್ಪ ಭಜಂತ್ರಿ. ಯರಕಿಹಾಳ
-ಮೌನೇಶ ಬಿ. ಮಂಗಿಹಾಳ (ಸುರಪುರ)
ದ್ವಿತಿಯ ವರ್ಷದ ಪತ್ರಿಕೋದ್ಯಮ ವಿಧ್ಯಾರ್ಥಿ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ.
ಮೋ, ನಂ: 9663722362.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

SCROLL FOR NEXT