ಕೃಷಿ-ಪರಿಸರ

ಆರ್ಕ್ಟಿಕ್ ಸಮುದ್ರದ ಮಂಜುಗಡ್ಡೆ ಈ ಶತಮಾನದಲ್ಲಿಯೇ ಕರಗಬಹುದು: ವಿಜ್ಞಾನಿಗಳು ಮುನ್ನೆಚ್ಚರಿಕೆ

Sumana Upadhyaya
ನವದೆಹಲಿ: ಜಾಗತಿಕ ತಾಪಮಾನವನ್ನು ತಡೆಗಟ್ಟಲು ಅನೇಕ ದೇಶಗಳು ಪ್ರಯತ್ನಿಸುತ್ತಿದ್ದರೂ ಕೂಡ ಆರ್ಕ್ಟಿಕ್ ಸಮುದ್ರದ ಮಂಜುಗಡ್ಡೆ ಈ ಶತಮಾನದಲ್ಲಿ ಬೇಸಿಗೆ ಕಾಲದಲ್ಲಿ ಕರಗುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
2015ರ ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ, ವಿಶ್ವದ ತಾಪಮಾನವನ್ನು ಸರಾಸರಿ 2 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಇರುವಂತೆ ಕಾಪಾಡಿಕೊಳ್ಳಬೇಕೆಂದು ಗುರಿಯನ್ನಿರಿಸಲಾಗಿತ್ತು. ಆದರೆ 2 ಡಿಗ್ರಿ ಸೆಲ್ಸಿಯಸ್ ಗುರಿಯಿಟ್ಟುಕೊಂಡಿರುವುದು ಆರ್ಕ್ಟಿಕ್ ಸಮುದ್ರದ ಮಂಜುಗಡ್ಡೆಯನ್ನು ಕಾಪಾಡಲು ನೆರವಾಗುತ್ತದೆ ಎಂದು ವಿಜ್ಞಾನಿಗಳಿಗೆ ನಂಬಿಕೆಯಿಲ್ಲ.
ಆರ್ಕಿಟಿಕ್ ಸಮುದ್ರದಲ್ಲಿ ಮಂಜುಗಡ್ಡೆಯನ್ನು ತಡೆಯಲು 2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ನಿರ್ವಹಿಸಿದರೂ ಕಷ್ಟ ಎಂದು ಬ್ರಿಟನ್ ನ ಎಕ್ಸೆಟರ್ ವಿಶ್ವವಿದ್ಯಾಲಯದ ಡೇನಿಯಲ್ ವಿಲಿಯಮ್ಸನ್ ಮತ್ತು ಜೇಮ್ಸ್ ಸ್ಕ್ರೀನ್ ಹೇಳಿದ್ದಾರೆ. ಇವರ ಬರಹ ನೇಚರ್ ಕ್ಲೇಮೆಟ್ ಚೇಂಜ್ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಆರ್ಕ್ಟಿಕ್ ಸಮುದ್ರದ ಮಂಜುಗಡ್ಡೆ ಇತ್ತೀಚಿನ ವರ್ಷಗಳಲ್ಲಿ ಕುಗ್ಗುತ್ತಿದೆ. ಇದರಿಂದ ಹಿಮಕರಡಿ ಮತ್ತು ಸಮುದ್ರ,ಮಂಜುಗಡ್ಡೆ ಪಕ್ಕ ಬದುಕುತ್ತಿರುವ ಪ್ರಾಣಿಗಳಿಗೆ ಮತ್ತು ಮಾನವರಿಗೆ ತೊಂದರೆಯಾಗುತ್ತದೆ.
ಇದುವರೆಗೆ ಆರ್ಕ್ಟಿಕ್ ಸಮುದ್ರದ ಮೇಲ್ಮೈ ಉಷ್ಣಾಂಶ 2 ಡಿಗ್ರಿ ಸೆಲ್ಸಿಯಸ್ ಗಿಂತ ಜಾಸ್ತಿಯಾಗಿದೆ. ವಿಜ್ಞಾನಿಗಳು ಹೇಳುವ ಪ್ರಕಾರ 2 ಡಿಗ್ರಿ ಸೆಲ್ಸಿಯಸ್ ಗಿಂತ ತಾಪಮಾನ ಏರಿಕೆಯಾಗುವುದೆಂದರೆ   ಬೇಸಿಗೆಯಲ್ಲಿ ಆರ್ಕಿಟಿಕ್ ಸಮುದ್ರದಲ್ಲಿ ಮಂಜುಗಡ್ಡೆ ಕರಗಿ ಹೋಗುತ್ತದೆ. ಅಪಾಯದ ಪ್ರಮಾಣ ಜಾಸ್ತಿಯಾಗಿರುತ್ತದೆ. ಮಂಜುಗಡ್ಡೆ ಅಲ್ಲಿನ ವಾತಾವರಣದಲ್ಲಿ ಪ್ರಾಣಿ, ಪಕ್ಷಿಗಳಿಗೆ ಬದುಕಲು ಖಂಡಿತಾ ಬೇಕು. ತಾಪಮಾನದ ಮಟ್ಟ 1.5 ಡಿಗ್ರಿ ಸೆಲ್ಸಿಯಸ್ ನಷ್ಟು ಇದ್ದರೆ ಸಹಜವಾಗಿರುತ್ತದೆ.
ಸುತ್ತಮುತ್ತಲ ಪ್ರದೇಶಗಳಲ್ಲಿ ಹಡಗು, ತೈಲ ಮತ್ತು ಅನಿಲಕ್ಕೆ ಸಂಬಂಧಪಟ್ಟ ಕೆಲಸ ಮಾಡುವುದರಿಂದ ಉಷ್ಣಾಂಶ ಏರಿಕೆಯಾಗಿ ಸಮುದ್ರದ ಮಂಜುಗಡ್ಡೆ ಕರಗುತ್ತದೆ.ಇದೇ ಪ್ರವೃತ್ತಿ ಮುಂದುವರಿದರೆ ಇನ್ನು 40 ವರ್ಷಗಳಲ್ಲಿ ಮಂಜುಗಡ್ಡೆ ಕರಗಿ ಹೋಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
SCROLL FOR NEXT