ಭಕ್ತಿ-ಜ್ಯೋತಿಷ್ಯ

ಸಾವುಧಾನ!

ಜಗದ್ಗುರು ಶಂಕರಾಚಾರ್ಯರು 'ಪುನರಪಿ ಜನನಂ, ಪುನರಪಿ ಮರಣಂ ಪುನರಪಿ ಜನನೀ ಜಠರೇ ಶಯನಂ' ಎಂದು ಹುಟ್ಟು ಸಾವಿನ ಬಗ್ಗೆ ಹೇಳಿದ್ದಾರೆ.
ಭಾರತೀಯ ಸಂಸ್ಕೃತಿಯಲ್ಲಿ ಸಾವೂ ಜನನದ ಹಾಗೆಯೇ ಒಂದು ಉತ್ಸವ. ಜನ್ಮವಿಡೀ ತಾನು ಆಚರಿಸಿದ ಪುಣ್ಯ ಕೆಲಸಗಳಿಂದ ಮೋಕ್ಷ ಪಡೆಯುವ ಅವಕಾಶ. ತಾನು ಸಾಯಬೇಕು, ಮೋಕ್ಷ ಪಡೆಯಬೇಕು ಎಂಬ ಮಾತಿದೆ. 'ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ' ಇದು ನಮ್ಮ ನಿತ್ಯದ ಪ್ರಾರ್ಥನೆ. 'ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಾ' ಇದು ನಾವು ತೀರ್ಥ ತೆಗೆದುಕೊಳ್ಳುವಾಗ ದೇವರಲ್ಲಿ ಪ್ರಾರ್ಥಿಸುತ್ತೇವೆ.
ಮೃತ್ಯು ಜೀವನವೆಂಬ ವೃಕ್ಷದಲ್ಲಿ ಬೆಳೆಯುವ ಸವಿಯಾದ ಹಣ್ಣು. ಜೀವನ ಮರಣಗಳೆರಡು ಮಂಗಲ ಭಾವಗಳು. ಜೀವನ ಮರಣದ ಹಣ್ಣು- ಮರಣ ಜೀವನದ ಹಣ್ಣು. 'ಪರಿವರ್ತಿನಿ ಸಂಸಾರೇ ಮೃತಃ ಕೋವಾ ನ ಜಾ ಯತೇ೤ ಸಜಾತೋ ಯೇನ ಜಾತೇನ ಯಾತಿ ವಂಶಃ ಸಮುನ್ನತಿಂ'. ಚಕ್ರದಂತೆ ತಿರುಗುತ್ತಿರುವ ಈ ಜಗದ ಸಂಸಾರದಲ್ಲಿ ಹುಟ್ಟು ಸಾವು ಖಚಿತ. ಆದರೆ, ಯಾರಿಂದ ವಂಶವು ಉದ್ಧಾರವಾಗುವುದೋ ಅವನ ಜನ್ಮವೇ ಸಾರ್ಥಕ.
ಮಂಕುತಿಮ್ಮ ಹೇಳುತ್ತಾನೆ 'ಹುಟ್ಟಿದವರೆಲ್ಲರೂ ಇಲ್ಲಿಯೇ ಇರಲು ಬರುವವರೆಲ್ಲರಿಗೆ ಸ್ಥಳವೆಲ್ಲಿ?'. ಸಾವು ಎಂದರೆ ಧರಿಸಿದ ಉಡುಪನ್ನು ಕಳಚಿದಂತೆ' ಎನ್ನುತ್ತದೆ ಭಗವದ್ಗೀತೆ. ವಾಸಾಂಸಿ ಜೀರ್ಣಾಯ ಯಥಾ ವಿಹಾಯ' 'ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ' ಅಂದರೆ ಆತ್ಮನನ್ನು ಶಸ್ತ್ರಗಳು ಛೇದಿಸಲಾರವು. ಬೆಂಕಿ ಸುಡಲಾರದು ಆತ್ಮವೇ ಬೇರೆ. ದೇಹವೇ ಬೇರೆ.
ಸತ್ತ ನಂತರ ನಿಮ್ಮನ್ನು ಮರೆಯಬಾರದೆಂದು ನೀವು ಬಯಸುವುದಾದರೆ, ಈ ಎರಡರಲ್ಲಿ ಯಾವುದಾದರೂ ಒಂದು ಕೆಲಸ ಅವಶ್ಯವಾಗಿ ಮಾಡಿ ಓದಲು ಅರ್ಹವಾಗಿರುವ ಏನನ್ನಾದರೂ ಬರೆದಿಡಿ. ಇಲ್ಲವೇ ಬರೆಯಲು ಅರ್ಹವಾದುದನ್ನು ಏನಾದರೂ ಮಾಡಿ' ಹೀಗೆ ಹುಟ್ಟಿದವನಿಗೆ ಸಾವು ತಪ್ಪಿದ್ದಲ್ಲ, ಸತ್ತವನಿಗೆ ಹುಟ್ಟು ತಪ್ಪಿದ್ದಲ್ಲ. ಹುಟ್ಟಿನಿಂದ ಸಾಯುವವರೆಗಿನ ಅವಧಿಯೇ ಜೀವನ.
ಈ ಸಾವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲವೆಂದಾದ ಮೇಲೆ ಅದರ ಬಗ್ಗೆ ಚಿಂತಿಸಿ ಫಲವೇನು? ಹುಟ್ಟು ಸಾವುಗಳೆರಡು ಒಂದೇ ನಾಣ್ಯದ ಎರಡು ಮುಖಗಳು. ಶರೀರ ಮಣ್ಣಿನ ಪಾತ್ರೆಯಂತೆ- ಅದನ್ನು ಮೃಣ್ಮಯ ಎನ್ನುತ್ತಾರೆ. ಸಾವೆಂದರೆ ಒಡೆದ ಮಣ್ಣಿನ ಮಡಕೆ, ಒಂದು ಮಡಕೆ ಒಡೆದರೇನಾಯಿತು ಇನ್ನೊಂದು ಹುಟ್ಟುತ್ತದೆ.
ಸೃಷ್ಟಿಕರ್ತ ಎಲ್ಲಿಯೋ ಅಡಗಿಕೊಂಡು ಹೊಸ ಹೊಸ ಬಣ್ಣ ಬಣ್ಣದ ಗಾಳಿಪಟವನ್ನು ಹಾರಿಸುವಂತೆ ಮನುಷ್ಯನ ಜನನ-ಮರಣ. ಕೆಲವು ಗಾಳಿಪಟಗಳು ಹರಿದು ನಾಶವಾಗುತ್ತವೆ. ಮತ್ತೆ ಹೊಸ ಗಾಳಿಪಟಗಳು ಹುಟ್ಟುತ್ತವೆ. ಮನುಷ್ಯ ದಿನವಿಡೀ ದುಡಿದು ರಾತ್ರಿ ನಿದ್ರೆಗೆ ಜಾರುವಂತೆ ಈ ಮರಣ. ಮರುದಿನ ಹೊಸ ಉತ್ಸಾಹದೊಂದಿಗೆ ಮನುಷ್ಯ ಏಳುವಂತೆ ಮತ್ತೆ ಜೀವ ಹೊಸ ಶರೀರ ಸೇರುತ್ತದೆ.
ಸಾವು ಎಂದರೆ ತಾಯಿಯ ಮಗ್ಗುಲಲ್ಲಿ ದಿನವಿಡೀ, ರಾತ್ರೀ ಇಡೀ ಅತ್ತು ಮಲಗಿದಂತೆ ಸಮುದ್ರ ರಾತ್ರಿ ಇಡೀ ಭೋರ್ಗರೆದು ಬೆಳಗಿನ ಜಾವ ಪ್ರಶಾಂತತೆಗೆ ಜಾರಿದಂತೆ. ಬೆಳಕು ಕತ್ತಲೆಯಂತೆ ಒಂದನ್ನೊಂದು ಅಟ್ಟಿಸಿಕೊಂಡು ಬರುತ್ತದೆ. ಇದೇ ಜೀವನ ಯಾತ್ರೆ. ಚಿರಂತನ ಯಾತ್ರೆ. ಸಾವು ಎಂದರೆ ಮಗಳು ತವರಿಗೆ ಹೋಗಿ ಬಂದಂತೆ, ಅತ್ತೆಯ ಮನೆಯಿಂದ ತವರಿಗೆ, ತವರಿನಿಂದ ಮತ್ತೆ ಅತ್ತೆ ಮನೆಗೆ, ಅದೇ ರೀತಿ ಜಗನ್ಮಾತೆಯ ಮನೆಗೆ ಹೋಗಿ ಬರುವುದೇ ಮೃತ್ಯು. ಮರಣವೆಂದರೆ ಆಯಾಸದ ಪಹಾರ. ಮರಣವೆಂದರೆ ಜೀವನವೆಂಬ ಸಮುದ್ರದಲ್ಲಿ ಮುಳುಗಿ ಏಳುವುದು ಮುಳುಗುವುದೇ ಮರಣ. ಎದ್ದೇಳುವುದೇ ಜೀವನ.
ಸಾವಿನಿಂದ ಯಾರಿಗಾದರೂ ಬಿಡುಗಡೆ ಇದೆಯೇ, ಖಂಡಿತವಾಗಿಯೂ ಇಲ್ಲ, ಆದುದರಿಂದ ಜೀವನದಲ್ಲಿ ಉತ್ತಮ ಕಾರ್ಯಗಳನ್ನು ಮಾಡಿ ಸಾಯುವುದೇ ಲೇಸಲ್ಲವೇ? 

-ಕೆ. ಸುಬ್ರಹ್ಮಣ್ಯ ಆಚಾರ್ಯ ಹಿರಿಯಂಗಡಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್

ಬೆಂಗಳೂರಿನಲ್ಲಿ CJP ಪ್ರತಿಭಟನೆ: ಪ್ರಕಾಶ್ ರಾಜ್, YouTuber ಧ್ರುವ್ ರಾಠಿ ಭಾಗಿ; CEC ರಾಜೀನಾಮೆಗೆ ಬಿಗಿಪಟ್ಟು..!

ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ