ಮಾನವ ಧರಿಸುವ ಪ್ರತಿಯೊಂದು ಆಭರಣಗಳು ಕೇವಲ ಸೌಂದರ್ಯ ವರ್ಧನೆಗೆ ಮಾತ್ರವಲ್ಲದೆ, ಮಾನಸಿಕ ಉತ್ಸಾಹ ಹೆಚ್ಚಿಸಲೂ ಕಾರಣವಾಗುತ್ತವಂತೆ. ಹಾಗಾಗಿಯೇ ಹಿಂದೆ ಗಂಡು, ಹೆಣ್ಣು ಇಬ್ಬರೂ ಕರ್ಣಾಭರಣ ಸೇರಿದಂತೆ ಹಲವು ಆಭರಣಗಳನ್ನು ಧರಿಸುತ್ತಿದ್ದರು.
ಪ್ರಸ್ತುತ ಮೂಗಿಗೆ ಧರಿಸುವ ಮೂಗುತಿಯ ಬಗ್ಗೆ ಕೆಲವು ವಿಚಾರಗಳು ಇಲ್ಲಿವೆ...
ಮೂಗುತಿ ಧರಿಸುವುದರಿಂದ ಮೂಗಿನ ಬಿಂದುವಿನ ಮೇಲೆ ಒತ್ತಡ ನಿರ್ಮಾಣವಾಗಿ 'ಬಿಂದು ಒತ್ತಡ' (ಆಕ್ಯುಫ್ರೆಶರ್) ಉಂಟಾಗುವುದರಿಂದ ಅಲ್ಲಿ ಕೆಟ್ಟ ಶಕ್ತಿ ಕುಗ್ಗಿ ಒಳ್ಳೆಯ ಶಕ್ತಿ ಹೆಚ್ಚುವುದರೊಂದಿಗೆ ಮನೋಲ್ಲಾಸ ಉಂಟಾಗುತ್ತದೆ.
ಉಸಿರಾಟದ ಮಾರ್ಗದಲ್ಲಿ ಕೆಟ್ಟ ಶಕ್ತಿಗಳಿಂದ ಹಲ್ಲೆಯಾಗದಂತೆ ಮೂಗುತಿಯು ಮೂಗು ಮತ್ತು ಶ್ವಾಸಕೋಶವನ್ನು ರಕ್ಷಿಸುತ್ತದೆ.
ಮೂಗುತಿಯಲ್ಲಿರುವ ಸಾತ್ವಿಕತೆ ಮತ್ತು ಚೈತನ್ಯದಿಂದ ಮೂಗಿನ ಸುತ್ತಲೂ ಚೈತನ್ಯ ವಲಯ ನಿರ್ಮಾಣವಾಗುತ್ತದೆ. ಮತ್ತು ಮೂಗಿನ ಸುತ್ತಲಿನ ವಾಯುಮಂಡಲ ಶುದ್ಧವಾಗುತ್ತದೆ. ಇದರಿಂದ ಶ್ವಾಸಮಾರ್ಗದಿಂದ ಶುದ್ಧಗಾಳಿ ದೇಹವನ್ನು ಪ್ರವೇಶಿಸಬಲ್ಲದು.
-ಮೋಹನ ಗೌಡ