ಭಕ್ತಿ-ಜ್ಯೋತಿಷ್ಯ

ವಾಸ್ತು

ಪ್ರಕೃತಿ ಪಂಚತತ್ವಗಳ ಸಮ್ಮಿಲನ. ಇಲ್ಲಿನ ಜಲ, ಅಗ್ನಿ, ವಾಯು, ಪೃಥ್ವಿ, ಆಕಾಶ ತತ್ವಗಳು ಒಂದೊಂದು ದಿಕ್ಕಿನ ಜತೆ ಗುರುತಿಸಿಕೊಂಡಿವೆ. ನಾಡಿ ಶಾಸ್ತ್ರಾನುಸಾರ ಮಾನವ ಶರೀರದಲ್ಲಿರುವ ಷಟ್ ಚಕ್ರಗಳು ಹಾಗೂ ಪಂಚತತ್ವಗಳು ಅವಿನಾಭಾವ ಸಂಬಂಧ ಹೊಂದಿವೆ.
ಈಶಾನ್ಯ ಮೂಲೆಗೆ ಜಲತತ್ವ, ಆಗ್ನೇಯಕ್ಕೆ ಅಗ್ನಿ, ವಾಯುವ್ಯಕ್ಕೆ ವಾಯು, ನೈರುತ್ಯಕ್ಕೆ ಪೃಥ್ವಿ ಹಾಗೂ ಬ್ರಹ್ಮಸ್ಥಾನಕ್ಕೆ ಆಕಾಶತತ್ವ ಎಂದು ನಿಗದಿಪಡಿಸಲಾಗಿದೆ. ಇವು ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರ, ಅನಾಹತ, ವಿಶುದ್ಧ, ಸಹಸ್ರಾರವೆಂಬ ಆರು ಚಕ್ರಗಳ ಜತೆ ಸೇರಿದಾಗ ಅನೇಕ ಫಲಗಳನ್ನು ಕೊಡುತ್ತವೆ.
ಜಲತತ್ವ
ಜಲ ಸಕಲ ಜೀವರಾಶಿಯ ತಾಯಿ. ಭೂಮಿಗಿಂತ ನೀರಿನ ಸೆಲೆ ಈಶಾನ್ಯ ಕೋನಕ್ಕೆ ಸಂಬಂಧಿಸಿದ್ದಾಗಿದೆ. ಪ್ರಾತಃಕಾಲದಲ್ಲಿ ಬೀಳುವ ಪ್ರಥಮ ಸೂರ್ಯಕಿರಣಗಳಿಂದ ಜಲ ಶುದ್ಧಿಯಾಗುತ್ತದೆ. ಇದೇ ಕಾರಣಕ್ಕೆ ಉದಯಕಾಲದ ನದಿ ಸ್ಥಾನ ಪಹತ್ವ ಪಡೆದಿರುವುದು. ಈಶಾನ್ಯ ಮೂಲೆಗೆ ಸಂಪು, ಅಡುಗೆ ಮನೆಯಲ್ಲಿ ಸಿಂಕ್‌ಗಳನ್ನು ಇಡುವುದು ಉಚಿತ.
ಅಗ್ನಿ ತತ್ವ
ಸೂರ್ಯ ಸೃಷ್ಟಿಯ ಸಂಚಾಲಕ. ಸೂರ್ಯನಿಂದ ದೊರೆಯುವ ಅಗ್ನಿ ಇಂಧನವೇ ಈ ಪೃಥ್ವಿಯ ಮೇಲೆ ಬೆಳವಣಿಗೆ, ಮಳೆ, ಗಾಳಿ, ಮಿಟಮಿನ್ 'ಡಿ' ಎಲ್ಲದರ ಮೂಲ ಶಕ್ತಿ ಕೇಂದ್ರ. ರವಿಯಿಂದ ಹೊರಹೊಮ್ಮುವ ಅಗ್ನಿ ಶಕ್ತಿ ಅಷ್ಟ ದಿಕ್ಕುಗಳಿಗೆ ನಿರಂತರವಾಗಿ ಪ್ರವಹಿಸುತ್ತಲೇ ಇರುತ್ತದೆ. ಈ ನಿರಂತರ ಧನಶಕ್ತಿಯ ಶುಭ ಪರಿಣಾಮ ಪಡೆಯಬೇಕಿದ್ದರೆ ಮನೆಯ ಸೂತ್ತಲೂ ಖಾಲಿ ಜಾಗ ಬಿಡಬೇಕು.
ವಾಯುತತ್ವ
ಪ್ರಾಣವಾಯು ಆಮ್ಲಜನಕವಿಲ್ಲದೆ ಸೃಷ್ಟಿಯಿಲ್ಲ. ಇದಿಲ್ಲದೇ ಅಗ್ನಿ ದಹಿಸದು. ಸಕಲ ಜೀವ ಸಂಕುಲಕ್ಕೆ ವಾಯುವೇ ಮೂಲಾಧಾರ. ವಾಯು ಇಲ್ಲದೆ ಸೃಷ್ಟಿಯ ಪ್ರಕ್ರಿಯವೇ ಅಸಂಭವ. ಮನೆ, ಮಹಲುಗಳಿಗೆ ಹೇರಳವಾಗಿ ಶುದ್ಧ, ಸ್ವಚ್ಛ ಗಾಳಿ ಬರುತ್ತಿರಬೇಕೆಂಬುದು ವಾಸ್ತು ನಿಯಮ. ಶುದ್ಧ ಗಾಳಿ ಸೇವನೆಯಿಂದ ಮಾನವ ದೀರ್ಘಾಯುವೂ, ಆರೋಗ್ಯವಂತನೂ ಆಗುತ್ತಾನೆ. ದೂಷಿತ ವಾಯು ಖಾಯಿಲೆಗಳ ಮೂಲ.
ವಾಯುಮೂಲ ಉತ್ತರ ಪಶ್ಚಿಮವಾಗಿದ್ದು, ವಾಯುತತ್ವ ಸಂಚಲನ ಮುಖ್ಯವಾಗಿರುವುದು ಇದೇ ಮೂಲೆಯಲ್ಲಿ. ಈ ಭಾಗದಿಂದ ಹೆಚ್ಚು ವಾಯು ಪ್ರಾಪ್ತವಾದರೆ ಆರೋಗ್ಯಕ್ಕೂ, ದೀರ್ಘಾಯುಸ್ಸಿಗೂ ಒಳ್ಳೆಯದು.
ಪೃಥ್ವಿತತ್ವ
ಸಮಸ್ತ ಜೀವಸಂಕುಲ ಪರಸ್ಪರ ಆಕರ್ಷಣೆ ಮತ್ತು ವಿಕರ್ಷಣೆಗಳಿಂದ ಪ್ರಭಾವಿತ. ಪೃಥ್ವಿಯ ಗರ್ಭದಲ್ಲಿ ಉತ್ತರ ಧೃವದಿಂದ ದಕ್ಷಿಣ ಧೃವಕ್ಕೆ ಅಯಸ್ಕಾಂತೀಯ ಶಕ್ತಿ ಪ್ರವಹಿಸುತ್ತದೆ. ಪೃಥ್ವಿಯಲ್ಲಿನ ಈ ಚುಂಬಕ ಶಕ್ತಿಯೇ ಗುರುತ್ವಾಕರ್ಷಣ ಶಕ್ತಿಯಾಗಿ ಪರಿವರ್ತಿತವಾಗಿದೆ. ಈ ಅಯಸ್ಕಾಂತೀಯ ಶಕ್ತಿ ಎಲ್ಲ ಜೀವ ಸಂಕುಲದ ಮೇಲೂ ಸಮಾನವಾಗಿ ಪ್ರವಹಿಸುತ್ತಿದೆ, ಅದೂ ನಮಗೆ ತಿಳಿಯದಂತೆ.  
ಮಾನವನ ಶರೀರದಲ್ಲಿ ಶಿರಸ್ಸು ಉತ್ತರ, ಪಾದಗಳು ದಕ್ಷಿಣ, ಉತ್ತರ ಧನಾತ್ಮಕವಾದರೆ ದಕ್ಷಿಣ ಋಣಾತ್ಮಕ. ಶಿರಸ್ಸನ್ನು ಉತ್ತರಕ್ಕೆ ಮಾಡಿ ಮಲಗಿದಾಗ ಎರಡೂ ಧನಾತ್ಮಕ ಅಂಶಗಳಾಗುವುದರಿಂದ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ತಲೆಯನ್ನು ದಕ್ಷಿಣಕ್ಕೂ, ಕಾಲನ್ನು ಉತ್ತರಕ್ಕೂ ಮಾಡಿ ಮಲಗಬೇಕು. ಇದರಿಂದ ದೇಹದಲ್ಲಿ ವಿದ್ಯುತ್ ಪ್ರವಾಹ ಏರುಪೇರಿಲ್ಲದೇ ಸಮತೋಲನ ಕಾಯ್ದುಕೊಳ್ಳುತ್ತದೆ.
ವಾಸಸ್ಥಾನದಲ್ಲಿ ಉತ್ತಮ ಚುಂಬಕೀಯ ಶಕ್ತಿಯ ಏರ್ಪಾಡಿಗೆ ಈಶಾನ್ಯ ಮೂಲೆಯಲ್ಲಿ ಖಾಲಿ ಸ್ಥಳ ಬಿಡಬೇಕು. ಹಾಗೆಯೇ ನೈರುತ್ಯ ಮೂಲೆಯನ್ನು ಎತ್ತರಿಸಬೇಕು.
ಆಕಾಶತತ್ವ
ವಾಸ್ತುಶಾಸ್ತ್ರದಲ್ಲಿ ಆಕಾಶತತ್ವವನ್ನು ಬ್ರಹ್ಮಸ್ಥಳ ಎನ್ನುವರು. ಇದು ಮನೆಯ ಮಧ್ಯಭಾಗ. ಈ ತತ್ವದ ಅಭಿಪ್ರಾಯವೆಂದರೆ ಮನೆಯ ನಿರ್ಮಾಣದಲ್ಲಿ ವಿಶಾಲತೆಗೆ ಒತ್ತು ನೀಡುವುದು. ಇಲ್ಲಿ ಗೋಡೆ, ಕಂಬಗಳು ಬರಕೂಡದು. ಅದಕ್ಕಾಗಿಯೇ ಹಿಂದಿನ ಕಾಲದಲ್ಲಿ ಮನೆಯ ಮಧ್ಯಭಾಗವನ್ನು ಖಾಲಿ ಬಿಡುತ್ತಿದ್ದರು.
ಕೋಣೆಗಳ ಗೋಡೆ ಎತ್ತರಿಸಿ ಕಟ್ಟುವುದು, ತಾರಸಿ ಆದಷ್ಟು ಮೇಲೆ ಇರುವಂತೆ ನೋಡಿಕೊಂಡರೆ, ಆಕಾಶತತ್ವದ ಪಾಲನೆಯಾಗುತ್ತದೆ.
ಗೃಹನಿರ್ಮಾಣದಲ್ಲಿ ಪ್ರಾಕೃತಿಕ ಇಂಧನವಾದ ಸೂರ್ಯರಶ್ಮಿ (ಅಗ್ನಿ), ಗುರುತ್ವಾಕರ್ಷಣ ಬಲ ಹಾಗೂ ಚುಂಬಕೀಯ ಶಕ್ತಿ (ಪೃಥ್ವಿ), ಜಲತತ್ವ (ಜಲ), ವಾಯುತತ್ವ (ವಾಯು), ಆಕಾಶತತ್ವ (ಆಕಾಶ) ಗಳ ಬಗ್ಗೆ ವಿಶೇಷ ಗಮನ ಹರಿಸಿದರೆ, ಅಂಥ ಮನೆಯಲ್ಲಿ ವಾಸಿಸುವವರ ಜೀವನ ಸ್ವಸ್ಥ ಸುಖಮಯವಾಗಿರುತ್ತದೆ. ಇದೇ ವಾಸ್ತುವಿನ ಮೂಲ ಉದ್ದೇಶ.

-ವಿ. ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ