ಲಾಭ ಭಾವದಲ್ಲಿ ಚಂದ್ರ ಇದ್ದರೆ ಧನ ವಾಹನಗಳನ್ನು ಕನ್ಯಾ ಸಂತತಿ ಅಧಿಕ ಇರುತ್ತದೆ. ದೃಢವಾದ ಕೀರ್ತಿ ಸಾಧ್ಯ.
ಇವರು ಯೋಗದಿಂದ ಕೂಡಿರುತ್ತಾರೆ. ಪ್ರಸಿದ್ಧರೂ, ಭಾಗ ಗುಣಗಳಿಂದ ಕೂಡಿದವರೂ ಆಗಿರುತ್ತಾರೆ. ಬುದ್ಧಿ, ವಿಕಾಸಗುಣ, ಧನ, ಸನ್ಮಾರ್ಗ, ನಿಷ್ಠೆ, ಸಮಾಜದಿಂದ ಗೌರವಿಸಿಕೊಳ್ಳುತ್ತಾರೆ. ಪ್ರಾಜ್ಞ, ಭೋಗ, ಸಂಪತ್ತು, ಬಿಳುಪು ವರ್ಣ, ಮಾನವ ಪ್ರೀತಿಯುಳ್ಳವರೂ ಆಗುತ್ತಾರೆ. ಮಿತ್ರ, ಧನ, ಕೀರ್ತಿ, ಸದ್ಗುಣಗಳಿಂದಲೂ ಉತ್ತಮವಾಗಿದ್ದು, ವಾಹನ, ಸುಖ ಭೋಗಗಳಿಂದಲೂ ಕೂಡಿದವರೂ ಆಗಿರುತ್ತಾರೆ. ಜನತೆಯಲ್ಲಿ ಪ್ರತಿಷ್ಠೆಯ ಅಧಿಕಾರ ಹೊಂದಿದವರಾಗುತ್ತಾರೆ.
ಹನ್ನೊಂದು, ಇಪ್ಪತ್ತೇಳರ ಪ್ರಾಯದಲ್ಲಿ ಇವರಿಗೆ ರಾಜಗೌರವ ಲಭಿಸುತ್ತದೆ. ಈ ಜಾತಕರು ಸಾರ್ವಜನಿಕ ಸಂಸ್ಥೆಯ ಮುಂದಾಳತ್ವ ವಹಿಸುತ್ತಾರೆ. ಶುಭ ಫಲಗಳು ಪುರುಷ ರಾಶಿಯವರಿಗೆ ಅಧಿಕವಾಗಿರುತ್ತದೆ. ಅಂದರೆ ಹನ್ನೊಂದನೇ ಮನೆ ಮೇಷ, ಮಿಥುನ, ಸಿಂಹ, ತುಲಾ, ಧನು ಮತ್ತು ಕುಂಭ ರೋಗ ಫಲ. ಸ್ತ್ರೀ ರಾಶಿಯ ಚಂದ್ರನಲ್ಲಿ ಜಾಸ್ತಿ ಇರುತ್ತದೆ. ಅಂದರೆ ವೃಷಭ, ಕರ್ಕಾಟಕ, ಕನ್ಯಾ, ವೃಶ್ಚಿಕ, ಮಕರ ಮತ್ತು ಮೀನ. ಸ್ತ್ರೀರಾಶಿಯ ಚಂದ್ರನಿರುವವರು ವೈದ್ಯಕೀಯ ವೃತ್ತಿಯನ್ನು ಹೊಂದುತ್ತಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ, ಮೊ. 9611130860.
- ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್