ಬಹಳ ಪ್ರಾಚೀನ ಕಾಲದಿಂದಲೂ ಭಾರತೀಯ ಆಲೋಚನೆ ಈ ವಿಶ್ವದ ಸೃಷ್ಟಿಯ ಅನೇಕ ಕಾರಣಗಳ ಬಗ್ಗೆ ಆಳವಾದ ಶೋಧನೆ ನಡೆಸಿ ಅದ್ಭುತವಾದ ಒಳನೋಟಗಳನ್ನು ಪಡೆದುಕೊಂಡಿದೆ. ವಿವರಿಸಲಸಾಧ್ಯವಾದ ತಿಳಿವಳಿಕೆಗಳನ್ನು ಸಾಮಾನ್ಯ ಹಂತಕ್ಕೆ ಕಥೆ, ಸಂಕೇತ, ಸಾಂಕೇತಿಕ ವ್ಯಕ್ತಿತ್ವ, ದೇವತೆಗಳ ಮೂಲಕ ಅಭಿವ್ಯಕ್ತಗೊಳಿಸಿದರು.
ಇಂಥ ಒಂದು ಸ್ತ್ರೀ ದೈವವೇ ಲಕ್ಷ್ಮೀ. ಜಗತ್ತು ಉದ್ಭವಿಸಿರುವ ಆಪಸ್ಸಿನಿಂದಲೇ ಉದ್ಭವಿಸಿರುವ ಲಕ್ಷ್ಮೀ ಸಂಪತ್ತಿನ, ಸಮೃದ್ಧಿಯ ದೇವತೆ.
ಲಕ್ಷ್ಮೀ, ಲಕ್ಷ್ಯ- ಗುರಿ, ಉದ್ದೇಶ
ಲಕ್ಷ್ಮೀ ಶಬ್ದದ ವ್ಯುತ್ಪತ್ತಿಯು ಲಕ್ಷ್ ಎಂದರೆ ಗುರಿ, ಉದ್ದೇಶ ಎಂಬ ಪದದಿಂದ ಆಗಿದೆ. ಲಕ್ಷ್ಮಿಯಿಂದ ಲಕ್ಷ್ಯ ಬರುತ್ತದೆ. ಜನರು ತಮ್ಮ ಇಡೀ ಜೀವಮಾನವೆಲ್ಲ, ನಿರಂತರವಾಗಿ ಪಡೆಯಲು ಯತ್ನಿಸುವ ಮೂಲಭೂತ ಸೌಕರ್ಯ, ಸುಖಗಳೇ ಲಕ್ಷ್ಮೀ.
ಎಲ್ಲಾ ಅಕಾಶಗಂಗೆಗಳ, ಸೂರ್ಯ, ಚಂದ್ರರ, ಭೂಮಿಯ, ಗ್ರಹಗಳ, ನಕ್ಷತ್ರಗಳ ಹಾಗೂ ಇನ್ನಿತರ ವಸ್ತುಗಳ ಸೃಷ್ಟಿಯೇ ಈ ಬ್ರಹ್ಮಾಂಡ ವಿಸ್ಫೋಟದ ಗುರಿ. ಇವೆಲ್ಲವನ್ನೂ ಸೃಷ್ಟಿಸುವುದೇ, ವಿಶ್ವದ ಸೃಷ್ಟಿಯೇ ಈ ಸೃಷ್ಟಿಯ ಗುರಿ. ಇದೇ ಆ ಬ್ರಹ್ಮಾಂಡ ವಿಸ್ಫೋಟಕದ ಲಕ್ಷ್ಯ.
ನಿತ್ಯ ಚಕ್ರ
ನಿರಂತರವಾಗಿ ಸೃಷ್ಟಿಸುವ, ವಿನಾಶ ಮಾಡುವ ಮತ್ತು ಪುನರ್ ನಿರ್ಮಾಣದ ನಿತ್ಯ ಚಕ್ರದಲ್ಲಿ ತಿರುಗುವ ಗುರಿಯನ್ನು ವಿಶ್ವದಲ್ಲಿರುವ ಜೀವ ಹೊಂದಿದೆ. ಈ ಚಕ್ರ ಪರಮಾಣುವಿನ ಮತ್ತು ಅದಕ್ಕಿಂತಲೂ ಚಿಕ್ಕ ಕಣಗಳ, ಕೋಶಗಳ, ಎಲ್ಲಾ ಜೀವಿಗಳ, ನಕ್ಷತ್ರಗಳು ಮತ್ತು ವೈಶ್ವಿಕ ಹಂತದಲ್ಲೂ ನಿರಂತರವಾಗಿ ಸಾಗುತ್ತಿದೆ. ಇಡೀ ವಿಶ್ವ ಗೊಂದಲಮಯವಾಗಿದೆ ಎಂದು ಸಾಮಾನ್ಯರು ಹೊಂದಿರುವ ಅಭಿಪ್ರಾಯಕ್ಕೆ ವಿರುದ್ಧವಾಗಿ ಇಡೀ ವಿಶ್ವವು ಒಂದು ನಿರ್ದಿಷ್ಟ ಕ್ರಮ ಹೊಂದಿದೆ. ಅದಕ್ಕೊಂದು ಉದ್ದೇಶವಿದೆ, ಅದಕ್ಕೊಂದು ಲಕ್ಷ್ಯವಿದೆ. ಈ ಲಕ್ಷ್ಯದ ಸಾಕಾರವೇ ಲಕ್ಷ್ಮೀ. ವಿಶ್ವದ ಲಕ್ಷ್ಯವಾಗಿರುವ ಲಕ್ಷ್ಮೀಯು ವಿಶ್ವದ ಕ್ರಮವನ್ನು ಪಾಲಿಸುತ್ತಿರುವ ವಿಷ್ಣುವಿನ ಪತ್ನಿ.
ಸಮೃದ್ಧಿ
ಸ್ಥೂಲವಾದ ಹಂತದಲ್ಲಿ ಲಕ್ಷ್ಮೀಯು ಎಲ್ಲಾ ಚಲಿಸುವ ಮತ್ತು ಅಚಲವಾದ ಸಂಪತ್ತನ್ನು ಸೂಚಿಸುತ್ತಾಳೆ. ಈ ಸಂಪತ್ತು ಬಂಗಾರ, ಬೆಳ್ಳಿ, ಹಣ, ಆಸ್ತಿ, ಇತ್ಯಾದಿ ರೂಪ ಹೊಂದಿದೆ. ಆದರೆ ಲಕ್ಷ್ಮೀ ಕೇವಲ ಸಂಪತ್ತಲ್ಲ. ಈ ಪೃಥ್ವಿಯಲ್ಲಿ ಜೀವವನ್ನು ಸಂರಕ್ಷಿಸುವ ಸಾಮಗ್ರಿಯಾದ ಆಹಾರ, ಧಾನ್ಯ, ಕರುಗಳು, ನೀರು ಇತ್ಯಾದಿ. ಇಡೀ ವಿಶ್ವವನ್ನು ಸಂರಕ್ಷಿಸುವ ಸಾಮಗ್ರಿಯೇ ಲಕ್ಷ್ಮೀ. ಈಕೆಯ ಮೂಲ ಸ್ವಭಾವವು ಅಶಾಶ್ವತತೆ, ನಶ್ವರತೆ.
ಕಮಲ ಕ್ಷೇತ್ರ
ಭಾರತೀಯ ಪರಂಪರೆಯಲ್ಲಿ ಲಕ್ಷ್ಮೀಯನ್ನು ಒಂದು ಕೊಳದಲ್ಲಿ ಕಮಲದ ಮೇಲೆ ನಿಂತಿರುವಂತೆ ಅಥವಾ ಕುಳಿತಿರುವಂತೆ ಚಿತ್ರಿಸಲಾಗುತ್ತದೆ. ಆ ಕಮಲವು ವಿಶಾಲವಾದ ದಳಗಳನ್ನು ಹೊಂದಿದ್ದು, ಅವುಗಳಿಂದ ನೀರಿನ ಹನಿಗಳು ಉರುಳುತ್ತಿರುತ್ತವೆ.
ತಾವರೆ ಎಲೆಯ ಮೇಲೆ ನೀರಿನ ಹನಿಗಳನ್ನು ಹಾಕಿದರೆ ಆ ನೀರಿನ ಹನಿ ಉರುಳುತ್ತಿರುತ್ತದೆ. ನೀರಿನ ಹನಿಗಳು ತಾವರೆಯ ಎಲೆಗಳಿಗೆ ಅಂಟಿಕೊಳ್ಳುವುದಿಲ್ಲ. ಅದೇ ರೀತಿಯಾಗಿ ಸಂಪತ್ತು ಭೌತಿಕ ವಸ್ತುವು ಜನರಿಗೆ, ಕಾಲಕ್ಕೆ ಅಂಟಿಕೊಳ್ಳುವುದಿಲ್ಲ. ಅದು ನಿರಂತರವಾಗಿ ಉರುಳುತ್ತಲೇ ಇರುತ್ತದೆ. ಲಕ್ಷ್ಮೀಯು ಒಂದೆಡೆ ನಿಲ್ಲುವುದೇ ಇಲ್ಲ. ಅವಳು ಚಲಿಸುತ್ತಲೇ ಇರುತ್ತಾಳೆ. ಅವಳು ಚಲಿಸುತ್ತಿರುವಾಗ ಸಂಪತ್ತನ್ನು ಎಲ್ಲರಿಗೂ ಹಂಚುತ್ತಿರುತ್ತಾಳೆ. ಲಕ್ಷ್ಮೀಯ ಈ ಪಾತ್ರವನ್ನು ಎತ್ತಿಹಿಡಿಯುವ ಒಂದು ವಸ್ತುವೆಂದರೆ ದೇವಕಣ.
ದೇವ ಕಣ
ದೇವಕಣ ಎಂದೇ ಸಾಮಾನ್ಯವಾಗಿ ಕರೆಯಲ್ಪಡುವ ಹಿಗ್ಸ್- ಬಾಸನ್ ಕಣವು, ಭೌತಿಕವಸ್ತುವು ಅಸ್ತಿತ್ವಕ್ಕೆ ಬರಲು ಕಾರಣವಾಗಿರುವ, ಭೌತಿಕವಸ್ತುಗಳ ಕಣಗಳು ಒಂದಾಗಿ ಸೇರಿ ಭೌತಿಕ ವಸ್ತುವಾಗುವ ಕಾರಣವೆಂದೇ ವಿವರಿಸಲಾಗಿದೆ. ದೇವಕಣದ ಇರುವಿಕೆಯಿಂದಾಗಿ, ಪರಮಾಣುವಿಗಿಂತಲೂ ಚಿಕ್ಕದಾದ ಕ್ವಾಕರ್‌ಗಳು, ಗ್ಲೂ ಆನ್‌ಗಳು ಒಂದಾಗಿ ಸೇರಿ ಸ್ಥಿರವಾದ ಗಾತ್ರವುಳ್ಳ ಕಣಗಳಾಗುತ್ತವೆ.
ದೇವಕಣದ ಅಶಾಶ್ವತತೆ
ಅದು ಅಸ್ತಿತ್ವಕ್ಕೆ ಬಂದ ಕಾರಣವನ್ನು ಸಾಧಿಸಿದ ನಂತರ, ಅದರ ಗುರಿಯನ್ನು ಸಾಧಿಸಿದ ನಂತರ ಹಿಗ್- ಬಾಸನ್ ಕಣವು ತನ್ನನ್ನೇ ತಾನು ನಾಶಗೊಳಿಸಿಕೊಳ್ಳುತ್ತದೆ ಮತ್ತು ನವೀನ ಭೌತಿಕ ವಸ್ತುವನ್ನು ಸೃಷ್ಟಿಸುವ ಸಲುವಾಗಿ ಮತ್ತೊಮ್ಮೆ ಬೇರೆ ಸ್ಥಳದಲ್ಲಿ ಕಾಣಿಸಿಕೊಳ್ಳುತ್ತದೆ.
ಆದ್ದರಿಂದ ದೇವಕಣ ವಿಶ್ವದ ಭೌತಿಕ ವಸ್ತುವಿನ ಸೃಷ್ಟಿಗೆ ಕಾರಣೀಭೂತವಾಗಿದೆ. ಆ ದೇವಕಣಕ್ಕೊಂದು ಲಕ್ಷ್ಯವಿದೆ, ಒಂದು ಗುರಿಯಿದೆ. ತನ್ನ ಲಕ್ಷ್ಯವನ್ನು ಹೊತ್ತುಕೊಂಡು ಒಂದೆಡೆ ನಿಲ್ಲದೇ ನಿರಂತರವಾಗಿ ಸಾಗುತ್ತಿರುವ, ಅಶಾಶ್ವತವಾದ ಪಾತ್ರವನ್ನು ನಿರ್ವಹಿಸುತ್ತಿರುವ ಲಕ್ಷ್ಮೀಯ ನಡುವೆ ಮತ್ತು ದೇವಕಣದ ನಡುವೆ ಸಾಮ್ಯತೆ ಕಾಣಬಹುದು.
- ಡಿ.ಕೆ. ಹರಿ, ಡಿ.ಕೆ. ಹೇಮ ಹರಿ,
ಭಾರತ್ ಗ್ಯಾನ್ ಸಂಸ್ಥಾಪಕರು