ಭಕ್ತಿ-ಜ್ಯೋತಿಷ್ಯ

ಮುದ್ರಾ ಮಾಂತ್ರಿಕ

ಇಂದಿನ ವಿಶ್ರಾಂತ ರಹಿತ ಜೀವನದಿಂದ ಆಗುತ್ತಿರುವ ಮಾನಸಿಕ ಖಿನ್ನತೆ, ಒತ್ತಡ ಹಾಗೂ ಉದ್ವೇಗಗಳನ್ನು ನಿಯಂತ್ರಿಸಲು ಜನರು ಯೋಗ, ಧ್ಯಾನ, ಪ್ರಾಣಾಯಾಮ ಇನ್ನಿತರ ವಿಧಾನಗಳ ಮೊರೆ ಹೋಗುತ್ತಾರೆ. ಜನರಿಗೆ ಈ ರೀತಿಯ ಹಲವು ವಿಷಯಗಳನ್ನು ಹೇಳಿಕೊಡುವ ಹೊಸಹೊಸ ವಿಧಾನಗಳು ಬರುತ್ತಲೇ ಇವೆ. ಅದರಂತೆ ಇಲ್ಲೊಂದು ವಿಶೇಷವಾದ ಧ್ಯಾನ ವಿಧಾನವಿದೆ. ಅದರ ಹೆಸರು ಮುದ್ರಾ ಹೀಲಿಂಗ್.  
ಯೋಗ ವಿಧಾನದಲ್ಲಿ ಮುದ್ರೆಗಳ ಪ್ರಾಮುಖ್ಯತೆ  ಅತ್ಯಂತ ಮಹತ್ವದ್ದು. ಹಲವಾರು ಮುದ್ರೆಗಳನ್ನು ಚಿಕಿತ್ಸೆ ಉದ್ದೇಶದಿಂದ ಬಳಸಲಾಗುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಟು ಮುದ್ರಾ ಹೀಲಿಂಗ್‌ನಲ್ಲಿ ಹಲವಾರು ರೀತಿಯ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುವುದಷ್ಟೇ ಅಲ್ಲ, ಹಲವಾರು ದೈಹಿಕ ವ್ಯಾಧಿಗಳನ್ನೂ ನಿವಾರಿಸಬಹುದು. ಮುಖ್ಯವಾಗಿ, ಪಂಚಭೂತಗಳನ್ನು ಆಧಾರವಾಗಿಟ್ಟುಕೊಂಡು ಮನಸ್ಸಿನ ಸುಪ್ತಶಕ್ತಿಯನ್ನು ಜಾಗೃತಗೊಳಿಸುವ ಚಿಕಿತ್ಸಾ ವಿಧಾನವಿದು.

ಬಾಚ್ ರೆಮೆಡಿ
ಮುದ್ರಾ ಹೀಲಿಂಗ್ ಜೊತೆಗೆ ಬಾಚ್ ಫ್ಲವರ್ ರೆಮಿಡಿ ಎಂಬ ಮತ್ತೊಂದು ಚಿಕಿತ್ಸಾ ವಿಧಾನವನ್ನೂ ನೀಡಲಾಗುತ್ತದೆ. ಡಾ. ಎಡ್ವರ್ಡ್ ಎನ್ನುವವರು ಹಲವಾರು ವರ್ಷಗಳ ಹಿಂದೆ ಈ ಚಿಕಿತ್ಸಾ ವಿಧಾನವನ್ನು ಕಂಡುಕೊಂಡಿದ್ದರು. ಬಾಚ್ ರೆಮೆಡಿಯಲ್ಲಿ ಹಲವಾರು ಸಂಶೋಧನೆಗಳನ್ನು ಕೈಗೊಂಡಿದ್ದ ಅವರು, ಒಟ್ಟು 38 ರೀತಿಯ ಚಿಕಿತ್ಸಾ ವಿಧಾನಗಳನ್ನು ಕಂಡುಕೊಂಡಿದ್ದರು.
ಮನುಷ್ಯನ ದೇಹದ ಕಂಪನಗಳನ್ನು ವಿಸ್ತರಿಸುವ ಮೂಲಕ, ಆತನಲ್ಲಿನ ಚೈತನ್ಯವನ್ನು ಹೆಚ್ಚಿಸಿ, ವಿಷಾದ, ನೋವುಗಳನ್ನು ದೂರ ಮಾಡಿ, ದೈಹಿಕ ಅಸ್ವಾಸ್ಥ್ಯವನ್ನು ನಿವಾರಿಸಿ, ಉಲ್ಲಾಸಭರಿತ ಜೀವನವನ್ನು ನೀಡಲಾಗುತ್ತದೆ. ಇದೇ ಈ ಚಿಕಿತ್ಸಾ ವಿಧಾನದ ಮೂಲತತ್ವ.

ಯಾವುದೇ ಅಡ್ಡಪರಿಣಾಮಗಳಿಲ್ಲ. ರೋಗ ನಿವಾರಕ ಶಕ್ತಿಯ ಜಾಗೃತಿ, ಮನೋಲ್ಲಾಸ, ಸರಳ ರೀತಿಯಲ್ಲಿ ಅಭ್ಯಾಸ ಮಾಡಲು ಅನುಕೂಲ.
ಎಲ್ಲಾ ರೀತಿಯ ಮಾನಸಿಕ, ದೈಹಿಕ ಹಾಗೂ ಆಧ್ಯಾತ್ಮಿಕ ನೋವುಗಳ ನಿವಾರಣೆ. ಕಾಯಿಲೆಗಳನ್ನು ಎದುರಿಸುವ ಹಾಗೂ ಹಿಮ್ಮೆಟ್ಟಿಸುವ ಶಕ್ತಿ.
ದುರಭ್ಯಾಸಗಳಿಂದ, ಮಾನಸಿಕ ಖಿನ್ನತೆ ಹಾಗೂ ಒತ್ತಡಗಳಿಂದ ಬೇಗನೇ ಹೊರಬರಲು ಅನುಕೂಲ.
ಜೀವನದ ಬಗ್ಗೆ ಹೆಚ್ಚುವ ಸಕಾರಾತ್ಮಕ ಧೋರಣೆ, ಸುಖ, ದುಃಖಗಳನ್ನು ಸಮವಾಗಿ ತೆಗೆದುಕೊಳ್ಳಲು ಅಗತ್ಯವಾದ ಸ್ಥಿತಪ್ರಜ್ಞೆಯನ್ನು ಈ ಚಿಕಿತ್ಸೆ ತಂದುಕೊಡುತ್ತದೆ.
ನೀವೂ ಬನ್ನಿ
ಡಿ. 14 ಹಾಗೂ 15ರಂದು ಮುದ್ರಾ ಹೀಲಿಂಗ್ ಹಾಗೂ ಬಾಚ್ ಫ್ಲವರ್ ರೆಮೆಡಿ ವಿಶೇಷ ಕಾರ್ಯಾಗಾರವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಸಂಪರ್ಕಿಸಿ: 9164350777, 9164350999.

- ಚೇತನ್ .ಓ.ಆರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video