ಭಕ್ತಿ-ಜ್ಯೋತಿಷ್ಯ

ರಾಹು ನೋಟ

ನವಗ್ರಹಗಳಲ್ಲಿ ಎಂಟನೇ ಗ್ರಹವಾದ ರಾಹು ಗ್ರಹದ ಉತ್ಪತಿಯ ಪುರಾಣೋಕ್ತ ಹಿನ್ನೆಲೆ ಎಲ್ಲರಿಗೂ ತಿಳಿದಿದ್ದೆ. ಆದರೂ ಆ ಗ್ರಹದ ಪ್ರಭಾವ ಮನುಷ್ಯನ ಮೇಲೆ ಹೇಗೆ ಇರುತ್ತದೆ ಎಂದು ತಿಳಿಯಲು ಜ್ಯೋತಿಷ್ಯ ಶಾಸ್ತ್ರ ಬಹಳ ಸಹಕಾರಿ. ರಾಹು ಗ್ರಹದ ಅಸ್ತಿತ್ವ ಹಾಗೂ ಅದರ ಬಗ್ಗೆ ಪುರಾತನ ಗ್ರಂಥಗಳಲ್ಲಿನ ಉಲ್ಲೇಖ ಈ ಎರಡನ್ನೂ ಸಹ ಕೇವಲ ತಾರ್ಕಿಕ ಮನೋಭಾವದಿಂದ ಅಧ್ಯಯನ ಮಾಡದೇ ಫಲ ಜ್ಯೋತಿಷ್ಯ ಪ್ರಕಾರವಾಗಿ ಪ್ರಸ್ತುತ ಜನರು ಅನುಭವಿಸುತ್ತಿರುವ ನಾನಾ ಕಷ್ಟಗಳಲ್ಲಿ ರಾಹುವಿನ ಪ್ರಭಾವ ಗಮನಿಸಿದಾಗ ರಾಹುದೋಷದ ಸ್ಪಷ್ಟ ಚಿತ್ರಣ ನಮಗೆ ಸಿಗುತ್ತದೆ.

ಅಷ್ಟಮ ವ್ಯತಗೆ ರಾಹೌಪಾಪಯುಕ್ತೆ ತಿಥಿ ವಿಕ್ಷೀತೆ
ಚೌರಾದಿವ್ರಣ ಪೀಡಾಚ ಸರ್ವತ್ರ್ಯೆವಪುಜಾಯತೆ
ರಾಜದ್ವಾರ ಜನದ್ವೇಷ ಇಷ್ಟ ಬಂಧು ವಿನಾಶನಮ್
ದಾರಪುತ್ರಾದಿ ಜಾಪೀಡಾ ಜಾಯತೆ ನಾತ್ರ ಸಂಶಯ


ಎಂದು ಪರಾಶರ ಮಹರ್ಷಿಗಳು ತಮ್ಮ ಹೋರಾ ಗ್ರಂಥದಲ್ಲಿ ಹೇಳಿದಂತೆ ಎಂಟನೇ ಅಥವಾ ಹನ್ನೆರಡನೇ ಮನೆಯಲ್ಲಿ ರಾಹು ಪಾಪಗ್ರಹ ದೃಷ್ಟನಾದರೆ ತನ್ನ ಮಹಾದಶೆ ಅಥವಾ ಅಂತರ ದೆಶೆಯಲ್ಲಿ ಕಳ್ಳತನ ಆಗಿ ನಷ್ಟ, ವೃಣಾದಿ ಆರೋಗ್ಯ ಹಾನಿ ಹಾಗೂ ಸರ್ಕಾರಿ ಕಾರ್ಯಾಲಯಗಳಲ್ಲಿ ಅಧಿಕಾರಿಗಳಿಂದ ವೈರತ್ವ, ನೆಂಟರಿಷ್ಟರು ಹಾಗೂ ಬಂಧುಗಳಿಂದ ಜಗಳ, ಹೆಂಡತಿಯೊಂದಿಗೆ ವಿರಸ, ಮಕ್ಕಳೊಂದಿಗೆ ಮನಸ್ತಾಪ ಇತ್ಯಾದಿ ತೊಂದರೆಗಳನ್ನು ನೀಡುತ್ತಾನೆ. ಇಲ್ಲಿ ಅನುಭವೋಕ್ತಿಯಂತೆ ಗಮನಿಸಲೇಬೇಕಾದ ಅಂಶ ಎಂದರೆ ರಾಹು ದೆಶೆಯಲ್ಲಿ ರಾಹು ಜಾತಕದಲ್ಲಿ ದೋಷ ಪ್ರದನಾಗಿದ್ದರೆ ನ್ಯಾಯಾಲಯಗಳಿಗೆ ಅಲೆದಾಟವನ್ನೂ ಉಂಟುಮಾಡುತ್ತಾನೆ. ಇದೇ ರಾಹು ಪ್ರಯಾಣ ಕಾರಕನೂ ಆಗಿರುವುದರಿಂದ ಜಾತಕದಲ್ಲಿ ಹತ್ತನೇ ಮನೆಯಲ್ಲಿ ಇದ್ದರೆ ಉದ್ಯೋಗ ನಿಮಿತ್ತ ಹತ್ತಾರು ಸ್ಥಳಗಳಿಗೆ ಪ್ರಯಾಣವನ್ನು ನೀಡುತ್ತಾನೆ.

ವಿದೇಶ ಪ್ರಯಾಣ ಯೋಗದಲ್ಲಿ ರಾಹು ಬಹಳ ಪ್ರಮುಖ ಪಾತ್ರ ವಹಿಸುತ್ತಾನೆ. ಆದ್ದರಿಂದಲೇ ವಿದೇಶದಲ್ಲಿ ಉದ್ಯೋಗ ಮಾಡುವ ಉತ್ತಮ ವಿದ್ಯಾರ್ಹತೆ ಅನುಭವ ಎರಡೂ ಇದ್ದರೂ ಜಾತಕದಲ್ಲಿ ರಾಹುವಿನ ಬಲದ ಕೊರತೆಯಿಂದಾಗಿ ಎಷ್ಟೋ ಜನ ವಿದೇಶಕ್ಕೆ ಹೊಗಲಾಗದೆ ಇಲ್ಲೇ ಸಿಕ್ಕ ಚಿಕ್ಕ ಕೆಲಸ ಹಾಗೂ ಕಡಿಮೆ ಸಂಬಳಕ್ಕೆ ತೃಪ್ತಿ ಪಡಬೇಕಾಗಿದೆ. ಇನ್ನು ಭೂ ವ್ಯವಹಾರ ಮಾಡುವ ಜನ ಗಮನಿಸಲೇಬೇಕಾದ ಅಂಶ ಎಂದರೆ ಭೂಮಿಯಲ್ಲಿ ರಾಹುನಡೆ ಯಾವ ಜಾಗದಲ್ಲಿ ಇರುತ್ತದೆಯೋ ಅಂಥ ಸ್ಥಳ ವಾಸಕ್ಕೆ ಯೋಗ್ಯ ಇರುವುದಿಲ್ಲ. ಅಷ್ಟೇ ಅಲ್ಲದೆ ಅದನ್ನು ಖರೀದಿಸಿದವರಿಗೆ ಆ ಜಾಗದಲ್ಲಿ ಮನೆ ಕಟ್ಟಲೂ ಆಗುವುದಿಲ್ಲ ಅಥವಾ ಅದನ್ನು ಮಾರುವುದಕ್ಕೂ ಆಗುವುದಿಲ್ಲ ಅದೇ ರಾಹು ನಡೆ ದೋಷ ಹೆಚ್ಚು ಇದ್ದರೆ ಆ ಜಾಗ ವ್ಯಾಜ್ಯದಲ್ಲಿ ಸಿಕ್ಕಿ ಅದನ್ನು ಪಡೆಯಲು ನ್ಯಾಯಾಲಯದ ಕದ ತಟ್ಟುವಂತೆ ಮಾಡುತ್ತದೆ.
ಇನ್ನು ರಾಹು ದೆಶೆ ಮನುಷ್ಯನಿಗೆ ಬರಬೇಕಾದರೆ ಕುಜದೆಶೆ ಮುಗಿದ ನಂತರವೇ. ಆದ್ದರಿಂದ ಅಲ್ಲಿ ಕುಜ-ರಾಹು ಸಂಧಿ ದೋಷ ಉಂಟಾಗುತ್ತದೆ. ಮೊದಲೇ ತಿಳಿದು ಶಾಂತಿ ಹವನ ಕರ್ಮಗಳನ್ನು ಮಾಡಿಸದೇ ಇದ್ದ ಪಕ್ಷದಲ್ಲಿ ರಾಹು ದೆಶೆಯ ಪ್ರಾರಂಭದಲ್ಲಿಯೇ ರಸ್ತೆ ಅಪಘಾತ ಅಥವಾ ಅಗ್ನಿ ಅನಾಹುತ ಆಗುವ ಸಂಭವ ಇರುತ್ತದೆ. ತನ್ನ ದಶಾಕಾಲ ಪ್ರಾರಂಭವಾದ ನಂತರ ಹದಿನೆಂಟು ವರ್ಷ ಇರುವ ರಾಹು ತನ್ನ ದಶಾಕಾಲದ ಆರಂಭದಲ್ಲಿ ನೋಡಲು ತೆಳ್ಳಗೆ ಸಣ್ಣಗೆ ಇರುವವರನ್ನು ಕೇವಲ ಎರಡು ಮೂರು ವರ್ಷಗಳಲ್ಲಿ ದಪ್ಪಗಾಗಿಸಿ ಬಿಡುತ್ತಾನೆ. ನಂತರ ತನ್ನ ದಶಾ ಕಾಲದಲ್ಲಿ ಅತ್ಯಂತ ಹೆಚ್ಚು ಹಣ ಖರ್ಚು ಮಾಡಿಸುವ ರಾಹು, ವೃಥಾ ಪ್ರಯಾಣವನ್ನೂ ಹೆಚ್ಚಿಸುತ್ತಾನೆ. ಇದರಿಂದಾಗಿ ಒಂದೇ ಓಡಾಟದಲ್ಲಿ, ಸ್ವಲ್ಪವೇ ಖರ್ಚಿನಲ್ಲಿ ಮುಗಿಯಬೇಕಾದ ಕೆಲಸಗಳು ರಾಹುದೆಶೆಯಲ್ಲಿ ಇರುವವರು ಮಾಡಲು ಕೈ ಹಾಕಿದರೆ ಹತ್ತಾರು ಓಡಾಟಗಳು, ಸಾವಿರಾರು ಅಥವಾ ಲಕ್ಷಾಂತರ ರುಪಾಯಿ ಖರ್ಚಾದ ನಂತರವೂ ಕೆಲಸ ಆಗದೇ ಚಿಂತಾಕ್ರಾಂತರಾಗಿರುತ್ತಾರೆ.

ಪರಿಹಾರವುಂಟು
ಯಾವುದೇ ರಾಹು ಗ್ರಹದ ದೋಷದಿಂದಾಗಿ ಕಷ್ಟ ಪಡುವ ಜನರು ಪರಿಹಾರಕ್ಕೆ ರಾಹು ಮಂತ್ರ ಜಪ ತರ್ಪಣ ಹಾಗೂ ಶಾಂತಿ ಹವನ ಮಾಡಿಸಬಹುದು. ಜಾತಕದಲ್ಲಿ ರಾಹು ಉತ್ತಮ ಸ್ಥಿತಿಯಲ್ಲಿ ಇದ್ದು ರಾಹು ದೆಶೆ ನಡೆಯುತ್ತಿದ್ದರೆ ಉತ್ತಮ ಗುಣಮಟ್ಟದ ಗೋಮೆಧಕ ರತ್ನವನ್ನು ಬೆಳ್ಳಿಯಲ್ಲಿ ಉಂಗುರ ಮಾಡಿಸಿ ಕ್ರಮವಾಗಿ ಅದನ್ನು ಬುಧವಾರ ಜಲ ಗುರುವಾರ ಹಾಲು ಹಾಗೂ ಶುಕ್ರವಾರ ಉದ್ದಿನ ಬೇಳೆಯಲ್ಲಿ ಇರಿಸಿ ಸಂಸ್ಕಾರ ಆದ ನಂತರ ಶನಿವಾರದಂದು ಸೂರ್ಯೋದಯಕ್ಕೆ ಸರಿಯಾಗಿ ಅದನ್ನು ಪೂಜಿಸಿ ಧರಿಸುವುದು ಅಥವಾ ದುರ್ಗಾ ಸಪ್ತಶತೀ ಪಾರಾಯಣ, ಉದ್ದಿನ ಬೇಳೆ ದಾನ, ರಾಹು ಕಾಲದಲ್ಲಿ ದುರ್ಗಾದೇವಿಗೆ ನಿಂಬೆ ದೀಪ ಹಚ್ಚುವುದು ಮಾಡಬಹುದು. ಇನ್ನು ಮಠಗಳಲ್ಲಿ ವೇದ ವ್ಯಾಸಂಗ ಮಾಡುತ್ತಿರುವ ಬ್ರಹ್ಮಚಾರಿಗಳ ಆರಾಧನೆ, ಅರಿಶಿನದಿಂದ ನಾಗನಿಗೆ ಅರ್ಚನೆ, ನಾಗಪ್ರತಿಷ್ಠೆ ಇತ್ಯಾದಿಗಳಿಂದಲ್ಲೂ ಸಹ ತಕ್ಕ ಮಟ್ಟಿಗೆ ರಾಹು ದೋಷದಿಂದ ಮುಕ್ತವಾಗಬಹುದು. ಆದರೆ, ಒದಗಿ ಬಂದಿರುವ ಸಮಸ್ಯೆಗೆ ಸರಿಯಾದ ಪರಿಹಾರ ತಿಳಿಯಲು ಜಾತಕದ ಪರಿಶೀಲನೆ ಅಥವಾ ಸ್ಥಳದಲ್ಲಿ ರಾಹು ನಡೆ ಇದ್ದಾಗ ಸ್ಥಳ ಪರೀಕ್ಷೆ ಅತ್ಯಗತ್ಯ.

- ವಿಠ್ಠಲ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಯೋಗೀಶ್ ಗೌಡ ಕೊಲೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್‌ ಕುಲಕರ್ಣಿಗೆ ತಾತ್ಕಾಲಿಕ ರಿಲೀಫ್‌; ಅ.27ಕ್ಕೆ ವಿಚಾರಣೆ ಮುಂದೂಡಿಕೆ