ಭಕ್ತಿ-ಜ್ಯೋತಿಷ್ಯ

ಕಾರಣಿಕೆ ಶ್ರೀಶಾಂತಿಕಾ

ಮೃತ್ತಿಕೆಯಿಂದ ಉದ್ಭವವಾದ ದೇವಿರೂಪ ಶ್ರೀಶಾಂತಿಕಾ ಪರಮೇಶ್ವರಿ. ರಾಷ್ಟ್ರೀಯ ಹೆದ್ದಾರಿ 66 ಕುಮಟಾ- ಹೊನ್ನಾವರ ನಡುವೆ ಹೊಳೆಗದ್ದೆ ಗ್ರಾಮದ ಬಡಗಣಿ ಹೊಳೆ ಬಳಿಯಲ್ಲಿ ನೆಲೆಸಿದ್ದಾಳೆ. ದೇವಿಯ ಹಿಂದೆ ಬೃಹದಾಕಾರದ ಹುತ್ತವಿದೆ. ವಾರ್ಷಿಕವಾಗಿ ದೇವಿಗೆ ನವರಾತ್ರಿ ಉತ್ಸವ, ಭಜನೆ ಸಪ್ತ, ಹಸಿರಾವರಿ ಹೀಗೆ ಹಲವು ಸೇವೆ ಭಜಕರಿಂದ ಅರ್ಪಣೆ.  
15-16 ನೇ ಶತಮಾನದಲ್ಲಿ ನಿರ್ಮಾಣವಾಗಿದೆ. ದೇವಿಯ ಮೂಲ ಸಮೀಪದ ಮೂಡ್ಕೊಳಿಯಲ್ಲಿ ಇತ್ತಂತೆ.  ಹಿಂದೆ ಇಲ್ಲಿ ಶ್ರೀಧರಸ್ವಾಮಿಗಳು ಶಾಂತಿಕಾಂಬಾ ದೇಗುಲದ ಗರ್ಭಗುಡಿಯಲ್ಲಿ ವಾರಗಟ್ಟಲೆ ತಪಸ್ಸನ್ನಾಚರಿಸಿ ದೇವಿಯನ್ನು ಸಾಕ್ಷಾತ್ಕರಿಸಿಕೊಂಡಿದ್ದರಂತೆ.
ದೇವಳದ ಮುಂದೆ ಕಾಣುವ ಪರ್ವತ ಶ್ರೇಣಿಯಲ್ಲಿ ಅರೆಅಂಗಡಿ ಸಮೀಪದ ಕರಿಕಾನ ಪರಮೇಶ್ವರಿ ದೇವಳವಿದೆ. ಶಾಂತಿಕಾ ಪರಮೇಶ್ವರಿ ಮತ್ತು ಕರಿಕಾನ ಪರಮೇಶ್ವರಿ ಇಬ್ಬರೂ ಅಕ್ಕ ತಂಗಿ ಎಂಬ ನಂಬಿಕೆಯಿದೆ. ಕರಿಕಾನ  ದಲ್ಲಿ ದೇವಿ ವಿಗ್ರಹ ಶಿಲೆಯಲ್ಲಿ ಉದ್ಭವಿಸಿದ್ದು, ಅಲ್ಲಿನ ದೇವಿ ಉಗ್ರ ಸ್ವರೂಪಿ. ಹೊಳೆಗದ್ದೆಯ ಶಾಂತಿಕಾಂಬಾ ದೇವಳ ಮಣ್ಣಿನಲ್ಲಿ ಆವಿರ್ಭವಿಸಿದ್ದು, ಶಾಂತರೂಪಿ. ದೇಗುಲದ ಚಂದ್ರಶಾಲೆಗೆ ತಾಗಿಯೇ ದೀಕ್ಷಿತರ ಮನೆತನಕ್ಕೆ ಸೇರಿದ ಈಶ್ವರನ ಗುಡಿಯೂ ಇದೆ.
ಶ್ರೀಶಾಂತಿಕಾ ಪರಮೇಶ್ವರಿ ದೇವಾಳದ ಪ್ರಮುಖ ಉತ್ಸವ ಭಜನೆಸಪ್ತ ಅಥವಾ ಭಜನೆ ಮಂಗಳ. ಉತ್ಸವಕ್ಕೆ 8 ದಿನ ಮುಂಚಿತವಾಗಿಯೇ ಭದ್ರದೀಪ ಸ್ಥಾಪಿಸಿ, ದೇವಳದಲ್ಲಿ ಸಪ್ತಶತಿ ಪಾರಾಯಣ ಆರಂಭ. ಮೂರು ದಿನಗಳ ಕಾಲ ಗ್ರಾಮಸ್ಥರಿಂದ ಅಖಂಡ ಭಜನೆ. ಕೊನೇಯ ದಿನ ಮಂಗಳ, ಶ್ರೀದೇವಿಯ ಉತ್ಸವಮೂರ್ತಿಯ ಮೆರವಣಿಗೆ ಹೊಳೆಗದ್ದೆಯಿಂದ ಪಲ್ಲಕ್ಕಿಯಲ್ಲಿ ಹೊರಟು ಧಾರೇಶ್ವರದ ಧಾರಾನಾಥ ದೇವಳಕ್ಕೆ ತೆರಳುತ್ತದೆ. ಸ್ವಸ್ಥಾನಕ್ಕೆ ಮರಳುವಾಗ, ಮಾರ್ಗ ಮಧ್ಯ ಎಲ್ಲ ಭಕ್ತರು ವಿಶೇಷ ಪೂಜೆ ಸಲ್ಲಿಸುತ್ತಾರೆ.  
ದೇವಿಯ ಮೆರವಣಿಗೆ ಸಂದರ್ಭ ಸ್ಥಳೀಯ ಗುಡಬಳ್ಳಿ ಮತ್ತು ಅಮಲೆಕೇರಿ ಹಾಲಕ್ಕಿ ಒಕ್ಕಲಿಗರಿಂದ ಹಗಣ ಸೇವೆ ಇಲ್ಲಿನ ವಿಶೇಷ. ಹಗಣ ಅಂದರೆ ಬೇರೆ ಬೇರೆ ಪುರಾಣದ ಹಾಗೂ ಆಧುನಿಕ ಶೈಲಿಯ ವೇಷ ಧರಿಸಿಕೊಂಡು 5ರಿಂದ 10 ಅಡಿ ಎತ್ತರದ ಮರಕಾಲು ಕಟ್ಟಿ ಕುಣಿಯುತ್ತಾ ಮೆರವಣಿಗೆಯಲ್ಲಿ ಸಾಗುವುದು. ಹಾಲಕ್ಕಿ ಒಕ್ಕಲಿಗರ ವಿಶಿಷ್ಟ ಶೈಲಿಯ ಜಾನಪದ ಕಲೆಯೂ ಹೌದು. ಹರಕೆ ಹೊತ್ತವರು ಅಥವಾ ಮನೆಗೊಬ್ಬರಂತೆ ಹಗಣದಲ್ಲಿ ವೇಷ ಹಾಕುವುದು ಪದ್ದತಿ. ಹಗಣದವರು ಧಾರೇಶ್ವರದಲ್ಲಿ ವೇಷ ಕಳಚಿ, ಅಲ್ಲಿನ ಪುಷ್ಕರಣಿಯಲ್ಲಿ ಸ್ನಾನ ಮಾಡಿ ಮರಳುತ್ತಾರೆ.

ರೋಗಗಳು ಮಾಯ!
ಊರಲ್ಲಿ ಜನರಿಗೆ ಚಿಕನ್‌ಪಾಕ್ಸ್, ಜಾನುವಾರುಗಳಿಗೆ ಕಾಲು ಬಾಯಿ ಬೇನೆ ಬಂದಲ್ಲಿ ಹತ್ತು ಸಮಸ್ತರು ಸೇರಿ ದೇವಳದಲ್ಲಿ ಹರಕೆ ಹೇಳಿಕೊಳ್ಳುತ್ತಾರೆ. ಕೆಲವೇ ದಿನಗಳ ನಂತರ ಸಾಂಕ್ರಮಿಕ ರೋಗಗಳು ಹರಡದೇ ಗುಣಮುಖರಾಗಿದ್ದನ್ನು ಗ್ರಾಮಸ್ಥರು ಸ್ಮರಿಸುತ್ತಾರೆ. ಹರಕೆಗೆ ಸ್ಪಂದಿಸಿ ಕಷ್ಟನಿವಾರಿಸುವ ದೇವಿ ಎಂಬ ಪ್ರತೀತಿಯಿದೆ.

- ರಾಘವೇಂದ್ರ ಅಗ್ನಿಹೋತ್ರಿಚಿತ್ರ: ಎಂ.ಎನ್. ಹನುಮಂತ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!

ಬೇಕಾದರೆ ನನ್ನ ವಿರುದ್ಧವೂ ಫಾರ್ಮ್‌ - 7 ಸಲ್ಲಿಸಿ: ಕಾಂಗ್ರೆಸ್'ಗೆ BJP ಸಂಸದ ಯದುವೀರ್ ಒಡೆಯರ್ ಸವಾಲು