ಭಕ್ತಿ-ಜ್ಯೋತಿಷ್ಯ

ಯೋಗ ಕ್ಷೇಮ

ನಾವು ವಿಕೃತಿಯತ್ತ ಸಾಗುತ್ತಿದ್ದೇವೆ. ಜಾಗತಿಕ ತಾಪಮಾನ, ಮಣ್ಣು ಸವಕಳಿ, ತೈಲ ಸೋರಿಕೆ, ಅರಣ್ಯನಾಶ, ಓಝೋನ್ ಪದರದಲ್ಲಿ ರಂಧ್ರ, ಅಂತರ್ಜಲ ಕುಸಿತ, ಸಸ್ಯ-ಪ್ರಾಣಿ ಸಂಕುಲದಲ್ಲಿ ಅಪರೂಪದ ತಳಿಗಳ ನಾಶ ಎಲ್ಲವೂ ಪರಿಸರಕ್ಕೆ ಮಾನವನ 'ಕೊಡುಗೆ'. ಪರಿಸರವಾದಿಗಳ ಪ್ರಯತ್ನವನ್ನೂ ಮೀರಿ ಆಗುತ್ತಿರುವ ಈ ವಿನಾಶ ಕಲುಷಿತಗೊಂಡಿರುವ ನಮ್ಮ ಆಲೋಚನೆಗಳ ಪ್ರತಿಫಲ. ಮಾನವ ನೀರು, ಗಾಳಿ, ಭೂಮಿಯನ್ನು ಮಲಿನಗೊಳಿಸುತ್ತಿದ್ದರೆ, ಆಲೋಚನೆ ಮಾನವನನ್ನೇ ಮಲಿನಗೊಳಿಸುತ್ತಿದೆ.
ಆಲೋಚನೆಯ ಮೂಲಕ ಶಕ್ತಿ ಬರುತ್ತದೆ ಎನ್ನುವುದು ಗೊತ್ತಿರುವಂಥದ್ದೇ. ಹಾಗಾಗಿ ಯಾವುದೇ ಪಿಡುಗಿನ ಮೊದಲ ಲಕ್ಷಣ ಎಂದರೆ ಆಲೋಚನೆ, ಉಳಿದವು ನಂತರ ಬರುವಂಥವು. ಹೀಗಾಗಿ ಆಲೋಚನೆ ಶುರುವಾಗುವ ಹಂತದಲ್ಲಿಯೇ ಈ ಮಾಲಿನ್ಯವನ್ನು ತಡೆಗಟ್ಟಬೇಕಾಗಿದೆ.
ಆಲೋಚನೆಗಳಲ್ಲಿ ಉತ್ಕೃಷ್ಟತೆ ಸಾಧಿಸುವುದು ಎಂದರೆ ಪಂಚಪ್ರಜ್ಞೆಗಳ ಮೇಲೆ ಹಿಡಿತ ಸಾಧಿಸುವುದೇ ಆಗಿದೆ. ಕಣ್ಣಿನ ಸ್ನಾಯುಗಳೂ ವಿಶ್ರಾಂತ ಸ್ಥಿತಿ ತಲುಪಿ, ಆಲೋಚನೆಯಲ್ಲಿ ಸ್ಥಿರತೆ ಸಾಧಿಸಿದಾಗ ಮಾತ್ರ ಉತ್ಕೃಷ್ಟತೆ ತಲುಪಲು ಸಾಧ್ಯವಾಗುತ್ತದೆ. ಕಣ್ಣು ಗುಡ್ಡೆ ಪ್ರತಿ ಸಲ ಚಲಿಸಿದಾಗಲೂ ಒಂದು ಆಲೋಚನೆ ಹುಟ್ಟಿಕೊಳ್ಳುತ್ತದೆ. ರಾತ್ರಿ ಮಲಗಿದ್ದಾಗ ಇಡೀ ದೇಹ ವಿಶ್ರಾಂತಿ ಪಡೆಯುತ್ತಿದ್ದರೂ ಕಣ್ಣಿನ ಸ್ನಾಯುಗಳು ಮಾತ್ರ ನಿರಂತರವಾಗಿ ಚಲನಶೀಲವಾಗಿಯೇ ಇರುತ್ತವೆ. ಅಂದರೆ ಪ್ರಜ್ಞೆ ಅಥವಾ ಮನಸ್ಸು ನಿರಂತರವಾಗಿ ಕೆಲಸ ಮಾಡುತ್ತಲೇ ಇರುತ್ತದೆ. ಯಾವಾಗ ಪ್ರಜ್ಞೆ ಸ್ಥಿರವಾಗಿರುತ್ತದೆಯೋ, ಆಗ ಮನಸ್ಸೂ ಸ್ಥಿರವಾಗಿರುತ್ತದೆ. ಅದುವೇ ಧ್ಯಾನ.
ಕಣ್ಮಿಚ್ಚಿ ಗಂಟೆಗಟ್ಟಲೇ ಕೂತರೂ ಕೇವಲ ಹತ್ತಾರು ನಿಮಿಷಗಳಂತೆ ಭಾಸವಾಗುತ್ತದಲ್ಲ, ಅದು ಆಶ್ಚರ್ಯ ಉಂಟುಮಾಡಬಹುದು. ಹಾಗಾದರೆ ಸಮಯ ಅಂದರೇನು? ಸರಳವಾಗಿ ಹೇಳಬೇಕೆಂದರೆ ಅದು ಎರಡು ಆಲೋಚನೆಗಳ ನಡುವಿನ ಅಂತರ. ಹೆಚ್ಚುಹೆಚ್ಚು ಆಲೋಚನೆಗಳನ್ನು ಆವಾಹಿಸಿಕೊಂಡಷ್ಟೂ ಮನಸ್ಸಿಗೆ ಹೆಚ್ಚು ತೊಂದರೆಯಾಗುತ್ತದೆ ಮತ್ತು ದೇಹ ಮುಪ್ಪಿನತ್ತ ಸಾಗುವ ಪ್ರಕ್ರಿಯೆಯೂ ತೀವ್ರಗೊಳ್ಳುತ್ತದೆ. ಯಾರು ಧ್ಯಾನದಲ್ಲಿ ಶೂನ್ಯವನ್ನು ಅನುಭವಿಸುತ್ತಾರೊ, ಯಾರು ಆಲೋಚನಾರಹಿತ ಸ್ಥಿತಿ ತಲುಪುತ್ತಾರೊ ಅವರು ಸಮಯವನ್ನೂ ಮೀರಿ ನಿಲ್ಲುವರು.
ಪುರಾಣಗಳ ಪ್ರಕಾರ ಬ್ರಹ್ಮನ ಒಂದು ದಿನ ಅಂದರೆ ಅನೇಕ ಸಾವಿರ ಮಾನವ ದಿನಗಳು. ವಿಷ್ಣು ಒಮ್ಮೆ ಕಣ್ರೆಪ್ಪೆ ಮಿಟುಕಿಸಿದರೆ ಅದು ಒಂದು ಮಹಾಯುಗ. ಇದರಿಂದ ತಿಳಿಯುವುದೇನೆಂದರೆ ನಾವು ವಿಕಸನದ ಹಾದಿಯಲ್ಲಿ ಉನ್ನತಿಗೆ ಏರುತ್ತಿದ್ದರೆ, ಸಮಯ ನಮ್ಮಿಂದ ದೂರವಾಗುತ್ತ ಸಾಗುತ್ತದೆ.
ಧ್ಯಾನ್ ಫೌಂಡೇಷನ್‌ನಲ್ಲಿ ಎರಡು ಗಂಟೆ ಕಣ್ಣುಗಳನ್ನು ನಿಶ್ಚಲ ಸ್ಥಿತಿಯಲ್ಲಿಟ್ಟುಕೊಂಡು ಧ್ಯಾನಸ್ಥರಾಗಿದ್ದವರ ಮೇಲೆ ಒಂದು ಪ್ರಯೋಗ ಮಾಡಲಾಯಿತು. ಅವರ ಹೃದಯ ಬಡಿತ ಶೂನ್ಯ ತೋರಿಸುತ್ತಿತ್ತು. ಉಸಿರಾಟ ಸ್ತಬ್ಧವಾಗಿತ್ತು. ಆದರೆ ಮಿದುಳು ಸಂಪೂರ್ಣ ಕ್ರಿಯಾಶೀಲವಾಗಿತ್ತು (ಆಲ್ಫಾ ಲೆವೆಲ್). ಆ ಸ್ಥಿತಿಯಲ್ಲಿದ್ದವರು ಅಧ್ಯಾತ್ಮದ ಉತ್ತುಂಗಕ್ಕೆ ಏರಬಲ್ಲರು.
= ಯೋಗಿ ಅಶ್ವಿನಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!