ಭಕ್ತಿ-ಜ್ಯೋತಿಷ್ಯ

ಮೂನ್ ಎಫೆಕ್ಟ್

ಗ್ರಹ ಅಥವಾ ಉಪಗ್ರಹಗಳು ತಮ್ಮದೇ ಚಲನಸಿದ್ಧಾಂತ ಮತ್ತು ಗುತ್ವಾಕರ್ಷಣ ಹೊಂದಿದ್ದು, ಸೂರ್ಯನ ಸುತ್ತಲೂ ನಿರ್ದಿಷ್ಟ ಪಥದಲ್ಲಿ ಸುತ್ತುತ್ತಿರುತ್ತವೆ. ಗ್ರಹಗಳಲ್ಲಿ ಸ್ಥಿರಗೊಂಡ ಗುರುತ್ವಾಕರ್ಷಣ ಶಕ್ತಿ ಆಧಾರದ ಮೇರೆಗೆ ಚಂದಿರರ ಚಲನಸಿದ್ಧಾಂತ ಮತ್ತು ಭೌತಿಕ ಗುಣಗಳು ಅವಲಂಬಿಸಿರುತ್ತವೆ ಎಂದು ಹೇಳಬಹುದು. ಎಲ್ಲಾ ಗ್ರಹಳಿಗೂ ಚಂದಿರಗಳು ಹೊಂದಿಕೊಂಡಿರುವುದಿಲ್ಲ. ಕೇವಲ ಏಳು ಗ್ರಹಗಳಿಗೆ ಮಾತ್ರ ಚಂದಿರಗಳು ಇರುತ್ತವೆ.
ಬ್ರಹ್ಮಾಂಡದಲ್ಲಿಯೇ ದೊಡ್ಡದಾದ, ಸೂರ್ಯನಿಂದ 778.3 ಮಿಲಿಯನ್ ಕಿ.ಮೀ. ದೂರದಲ್ಲಿ ಸುತ್ತುತ್ತಿರುವ ಗುರುಗ್ರಹಕ್ಕೆ 16 ಚಂದಿರಗಳು ಸುತ್ತುತ್ತಿದ್ದು, ಅವುಗಳಲ್ಲಿ ಚಂದ್ರಮಂಡಲದಲ್ಲಿಯೇ ದೊಡ್ಡದಾದ 'ಗ್ನ್ಯಾಮೆದೆ' ಕಲ್ಲಿಸ್ತೊ ಮತ್ತು ಯುರೋಪ ಚಂದಿರಗಳು ಖಗೋಳ ವಿಜ್ಞಾನದಲ್ಲಿ ಮಹತ್ತರ ಸ್ಥಾನ ಪಡೆದಿರುತ್ತವೆ.  
ಇವುಗಳು ಚಲನ ಸಿದ್ಧಾಂತದಲ್ಲಿ ಸಂಭವಿಸುವ ಗ್ರಹಣಗಳನ್ನು ಪರಾಮರ್ಶಿಸಿ ಪೃಥ್ವಿಯು ಸೂರ್ಯನ ಸುತ್ತ ಸುತ್ತುತ್ತದೆಯೇ ಹೊರತು ಸೌರ ಮಂಡಲದಲ್ಲಿ ಕೇಂದ್ರ ಬಿಂದುವು ಆಗಿರುವುದಿಲ್ಲ ಎಂದು ಗೆಲಿಲಿಯೊ ಸಾಬೀತು ಪಡಿಸಿದ್ದಾರೆ.
ಸೂರ್ಯನಿಂದ 149.6 ಮಿಲಿಯನ್ ಕಿ.ಮೀ. ದೂರವಿದ್ದು 12,756 ಕಿ.ಮೀ. ವ್ಯಾಸವುಳ್ಳ ಪೃಥ್ವಿಯು 380,000 ಕಿ.ಮೀ. ದೂರದಲ್ಲಿ 3475 ಕಿ.ಮೀ. ವ್ಯಾಸವುಳ್ಳ ಒಂದೇ ಚಂದಿರನನ್ನು ಹೊಂದಿದೆ. ಅಲ್ಲದೆ ಖಗೋಳ, ಅಧ್ಯಾತ್ಮಿಕ ಮತ್ತು ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಮಹತ್ತರ ಸ್ಥಾನವನ್ನು ಪಡೆದಿದೆ.
ಚಂದಿರ ಪೃಥ್ವಿಗೆ ಹತ್ತಿರ ಬಂದರೂ ಯಾವುದೇ ಅವಘಡ ಮತ್ತು ಜೀವರಾಶಿಯ ಮೇಲೆ ಯಾವುದೇ ಪ್ರಭಾವ ಬೀರಲಾರದೆಂದು ನೀಲ್ ಆರ್ಮಸ್ಟ್ರಾಂಗ್ ಚಂದ್ರನ ಮೇಲೆ ಇಳಿದಾಗಲೇ ತಿಳಿದು ಬಂತು. ಬ್ರಹ್ಮಾಂಡದಲ್ಲಿ ಎರಡನೇ ಅತಿ ದೊಡ್ಡದಾದ ಶನಿ ಗ್ರಹದ ಸುತ್ತಲೂ 18ರಿಂದ 20 ಚಂದಿರಗಳಿವೆ. ಇವುಗಳಲ್ಲಿ ಟೈಟಾನ್ ಬುಧಗ್ರಹಕ್ಕಿಂತಲೂ ದೊಡ್ಡದಾದ ಚಂದ್ರ 1977ರಲ್ಲಿ ವಾಯೇಜ್ ಎಂಬ ಉಪಗ್ರಹ ಉಡಾವಣೆಯ ನಂತರ 1981ರಲ್ಲಿ ಶನಿ ಗ್ರಹಕ್ಕೆ 101,3000 ಕಿ.ಮೀ ಅಂತರದಲ್ಲಿ ಹಾದು ಹೋಗಿ ಶನಿ ಗ್ರಹಕ್ಕೆ ಹೊಂದಿಕೊಂಡಿರುವ ಚಂದಿರಗಳ ಬಗ್ಗೆ ಹೆಚ್ಚಿನದಾಗಿ ತಿಳಿಯಲಾಯಿತು.
ಯುರೇನಸ್, ನೆಪ್ಚೂನ್ ಮತ್ತು ಪ್ಲೋಟೋ ಗ್ರಹಗಳನ್ನು ಪತ್ತೆಹಚ್ಚಿದ ನಂತರ ಇವುಗಳನ್ನು ಹೊಂದಿಕೊಂಡು 24 ಚಂದಿರಗಳಿವೆ ಎಂದು ತಿಳಿಯಲಾಯಿತು. ಹಸಿರು ಮತ್ತು ನೀಲಿ ಬಣ್ಣ ವುಳ್ಳ ಯುರೇನಸ್ ಗ್ರಹಕ್ಕೆ 15 ಚಂದಿರಗಳು, ನೀಲಿ ಬಣ್ಣದ ನೆಪ್ಚೂನ್ಗೆ ಎಂಟು ಮತ್ತು ಕಪ್ಪು ಬಣ್ಣದ ಪ್ಲೋಟೋಗೆ ಒಂದು ಚಂದಿರಗಳು ಇರುತ್ತದೆ ಎಂದು ತಿಳಿಯಲಾಯಿತು. ಮಂಗಳ ಗ್ರಹಕ್ಕೆ ಎರಡು ಪುಟ್ಟ ಚಂದಿರಗಳಿವೆ.
ನಭೋಮಂಡಲದ ಚಿದಂಬರ ರಹಸ್ಯವನ್ನು ಬಗೆದರೆ, ಯಾವುದೋ ಒಂದು ಗ್ರಹದ ಬೃಹತ್ ಗುರುತ್ವಾಕರ್ಷಣ ಶಕ್ತಿಯು ಎಲ್ಲಾ ಗ್ರಹ ಮತ್ತು ಉಪಗ್ರಹಗಳ ಚಲನ ಸಿದ್ಧಾಂತ ಮತ್ತು ಭೌತಿಕ ಗುಣಗಳನ್ನು ನಿಗ್ರಹಿಸುತ್ತಿದೆ ಎಂದು ತಿಳಿಯಬಹುದು.
ಪೃಥ್ವಿಗೆ ಹೊಂದಿಕೊಂಡಿರುವ ಚಂದ್ರ ಒಂದು ಪೌರ್ಣಮಿಯಿಂದ ಇನ್ನೊಂದು ಪೌರ್ಣಮಿವರೆಗೆ ಕ್ರಮಿಸುವ ವೇಳೆ 29 ದಿನ, 12 ಗಂಟೆ, 44 ನಿಮಿಷ 3 ಸೆಕೆಂಡ್ಗಳು. ಮನೋವೈಜ್ಞಾನಿಕ ಶಾಸ್ತ್ರದಿಂದ ಪೌರ್ಣಮಿಗಳ ಅಂತರದಲ್ಲಿ ಕಾಲಗಣನಾ ಚಕ್ರವನ್ನು ಭೇದಿಸಿದರೆ ಚಂದ್ರ, ಶುಕ್ರ ಮತ್ತು ಗುರುಮಹಾದೆಸೆಗಳನ್ನು ಕರಾರುವಕ್ಕು ತಿಳಿಯಬಹುದು.

 ವಿ. ನಾರಾಯಣ ಶೆಟ್ಟಿ ಪದ್ಮಸಾಲಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ