ಭಕ್ತಿ-ಜ್ಯೋತಿಷ್ಯ

ವೃದ್ಧಾಪ್ಯವನ್ನು ಮುಂದೂಡೋಣ

ಅಗ್ನಿ ಅಥವಾ ಬೆಂಕಿ ಎನ್ನುವುದು ಋಗ್ವೇದದ ಮೊದಲ ಅಕ್ಷರ. ಆಯುರ್ವೇದದ ಪ್ರಕಾರ ಶರೀರದಲ್ಲಿರುವ ಅನೇಕ ಅಗ್ನಿಗಳು ಆಹಾರವನ್ನು ಸುಡುತ್ತ ಕಾಯಕ್ಕೆ ಅಗತ್ಯವಿರುವ ಶಕ್ತಿ ಒದಗಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರುತ್ತವೆ. ಉದಾಹರಣೆಗೆ ಹೇಳಬೇಕೆಂದರೆ, ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುವುದು. ಈ ಪ್ರಕ್ರಿಯೆಯಲ್ಲಿ ಅನೇಕ ಆಂತರಿಕ ರಾಸಾಯನಿಕ ಕ್ರಿಯೆಗಳು ನಡೆಯುತ್ತವೆ. ಅದರಿಂದ ದೇಹದ ಅಂಗಾಂಗಳಿಗೆ ಹಾನಿಯೂ ಆಗುತ್ತಿರುತ್ತದೆ. ಅದರ ಪರಿಣಾಮವೇ ವಯಸ್ಸಾಗುವಿಕೆ. ಹೆಚ್ಚಿನ ಆಹಾರ ಸೇವಿಸಿದಷ್ಟೂ ಅದನ್ನು ಶಕ್ತಿಯಾಗಿ ಪರಿವರ್ತಿಸಲು ಹೆಚ್ಚಿನ ಸಂಪನ್ಮೂಲ ಅಂದರೆ ಅಗ್ನಿ ಬೇಕಾಗುತ್ತದೆ. ವೇಗವಾಗಿ ಉಸಿರಾಡುವುದು, ಲೈಂಗಿಕ ಕ್ರಿಯೆ, ಸಿಟ್ಟು, ಬಾಂಧವ್ಯ, ದುಃಖ, ಹಿಂಸೆ ಮೊದಲಾದ ಕ್ರಿಯೆ, ಆಲೋಚನೆಗಳನ್ನು ಭಾವನೆಗಳನ್ನಾಗಿ ಪರಿವರ್ತಿಸುವ ಕ್ರಿಯೆಗಳೂ ನಮ್ಮನ್ನು ಬೇಗ ವೃದ್ಧಾಪ್ಯದತ್ತ ತಳ್ಳುತ್ತವೆ. ಹಾಗಾದರೆ ಅಗ್ನಿಯನ್ನು ಶಾಂತಗೊಳಿಸಿ, ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುವುದು ಸಾಧ್ಯವಿಲ್ಲವೆ? ಅದಕ್ಕೆ ಉತ್ತರ ಎಂದರೆ ವೇದಕಾಲದಲ್ಲಿ ಮಾಡುತ್ತಿದ್ದ ಹವನಗಳು. ಅದನ್ನು ನಮ್ಮ ಧ್ಯಾನ್ ಆಶ್ರಮದಲ್ಲಿ ಈಗಲೂ ಮಾಡಲಾಗುತ್ತದೆ.
ಅಗ್ನಿ ಎಂದಿಗೂ  ಕಲುಷಿತಗೊಳಿಸಲು ಆಗದ್ದು. ಹಾಗೆಯೇ ಅಗ್ನಿಯೊಳಕ್ಕೆ ಏನೇ ಹೋದರೂ ಅದು ಸ್ವಚ್ಛವಾಗುತ್ತದೆ. ಹವನದಲ್ಲಿ ಬಳಕೆಯಾಗುವುದು ಇದೇ ತಂತ್ರ. ಹಿಂದೆ ವಾತಾವರಣ ಶುದ್ಧೀಕರಣಕ್ಕಾಗಿ ಹವನಗಳನ್ನು ಮಾಡುತ್ತಿದ್ದರು. ಅದಕ್ಕೆ ಬಳಸುವ ಸಾಮಾಗ್ರಿ ಮತ್ತು ಸಮೀಧಗಳು ಸಕಾರಾತ್ಮಕ ಅಲೆಗಳನ್ನು ಸೃಷ್ಟಿಸುತ್ತಿದ್ದವು. ಅದರಿಂದಾಗಿ ವಾತಾವರಣದಲ್ಲಿನ ಕೊಳೆ ಮತ್ತು ನಕಾರಾತ್ಮಕ ಶಕ್ತಿಗಳು ನಾಶವಾಗುತ್ತಿದ್ದವು. ಇವತ್ತಿಗೂ ಗುಹೆಗಳಲ್ಲಿ ವಾಸಮಾಡುವ ಸಾಧುಗಳು ನಿರಂತರವಾಗಿ ಬೆಂಕಿಯನ್ನು ಬಳಸುತ್ತಾರೆ (ಧುನಿ). ಆದರೆ, ಯಾವುದಾದರೂ ಸಾಧುವಿಗೆ ಶ್ವಾಸಕೋಶ ಕ್ಯಾನ್ಸರ್ ಅಥವಾ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಬಂದಿದ್ದನ್ನು ನೀವು ಕೇಳಿದ್ದೀರಾ? ಸಾಧುಗಳ ಆರೋಗ್ಯಕ್ಕೆ ಅವರು ಗುಹೆಯಲ್ಲಿ ನಿರಂತರವಾಗಿ ಬಳಸುವ ಅಗ್ನಿಯೇ ಕಾರಣ.
ಬೇಸರ ಎಂದರೆ ಇವತ್ತು ಹವನಗಳನ್ನು ಪರಿಶುದ್ಧ ರೀತಿಯಲ್ಲಿ ಮಾಡುತ್ತಿಲ್ಲ. ಹವನದ ನಿಜವಾದ ಪರಿಣಾಮವನ್ನು ಅನುಭವಿಸಬೇಕು ಎಂದಾದರೆ ಅದಕ್ಕೆ ಬಳಸುವ ಸಾಮಾಗ್ರಿಗಳು, ಸಮೀಧ ಮತ್ತು ಘೃತ (ಆಕಳ ತುಪ್ಪ) ಪರಿಶುದ್ಧವಾಗಿರಬೇಕು. ಹವನದಲ್ಲಿ ಭಾಗಿಯಾಗುವವರ ಮನಸ್ಸು ಸ್ವಚ್ಛವಾಗಿರಬೇಕು. ಮಂತ್ರೋಚ್ಛಾರ ದಲ್ಲೂ ದೋಷ ಇರಬಾರದು. ಇವೆಲ್ಲವೂ ಒಟ್ಟಾಗಿ ಸೇರಿ ಒಳ್ಳೆಯ ಪರಿಣಾಮವನ್ನು ಬೀರುತ್ತವೆ.

- ಯೋಗಿ ಅಶ್ವಿನಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ಪದಕ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

11/9 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!