ಭಕ್ತಿ-ಜ್ಯೋತಿಷ್ಯ

ಸ್ಪಿರಿಚ್ಯುಯಲ್ ಹೀಲಿಂಗ್ ಎಂಬ ಜಾದೂ!

ನಮ್ಮ ದೇಹ ಸೃಷ್ಟಿಯ ಪ್ರತಿಬಿಂಬ. ಸೃಷ್ಟಿ ಅಸ್ತಿತ್ವದಲ್ಲಿರುವುದೇ ತನ್ನ ಸಮತೋಲನದ ಗುಣದಿಂದ. ನಮ್ಮ ದೇಹವೂ ಅಷ್ಟೆ. ಅದರೊಳಗೆ ಇರುವ ಅನೇಕ ಶಕ್ತಿ ಮತ್ತು ಬಲಗಳು ಸಮತೋಲಿತವಾಗಿದ್ದರೆ ನಾವು ಆರೋಗ್ಯದಿಂದ ಇರುತ್ತೇವೆ. ಅನಂದದಿಂದ ಬದುಕನ್ನು ಆಸ್ವಾದಿಸುತ್ತೇವೆ. ಅನಾರೋಗ್ಯ ಪೀಡಿತ ಶರೀರ ಎಂದರೆ ಅದರೊಳಗಿನ ಅಸಮತೋಲನವೇ ವಿನಾ ಬೇರೇನಲ್ಲ. ಆ ಅಸಮತೋಲನವನ್ನು ಸ್ಪಿರಿಚ್ಯುಯಲ್ ಹೀಲಿಂಗ್ ಮೂಲಕ ಗುಣಪಡಿಸಲು ಸಾಧ್ಯವಿದೆ, ಭೌತಿಕ ಕಾಯಕ್ಕೆ ಯಾವುದೇ ಹಾನಿ ಉಂಟುಮಾಡದೆ. ಸಾಮಾನ್ಯವಾಗಿ ಆಧುನಿಕ ವೈದ್ಯ ವಿಜ್ಞಾನ ಕಾಯಿಲೆಗೆ ತುತ್ತಾದ ಕೋಶವನ್ನೇ ಸಾಯಿಸುತ್ತವೆ. ಆದರೆ ಸ್ಪಿರಿಚ್ಯುಯಲ್ ಹೀಲಿಂಗ್ ಕಾಯಿಲೆಯ ಮೂಲವನ್ನೇ ರೂಪಾಂತರಿಸುವ ಮೂಲಕ ಶಾಶ್ವತವಾಗಿ ಸಮಸ್ಯೆಯನ್ನು ಬಗೆಹರಿಸುತ್ತದೆ.
ಋಷಿ ಅಗ್ನಿರಸ ನೀಡಿದ ಅಥರ್ವ ವೇದದಲ್ಲಿ ಸ್ಪಿರಿಚ್ಯುಯಲ್ ಹೀಲಿಂಗ್ ಬಗ್ಗೆ ಪ್ರಸ್ತಾಪವಿದೆ. 'ಯತು ವಿದ್ಯಾ' ಎನ್ನುವ ವಿಭಾಗದಲ್ಲಿ ಈ ಕುರಿತು ವಿವರವಾದ ಉಲ್ಲೇಖವಿದೆ. 'ಯತು' ಎಂದರೆ ತಕ್ಷಣ ಎಂದರ್ಥ. ಸ್ಪಿರಿಚ್ಯುಯಲ್ ಹೀಲಿಂಗ್ ಕೂಡ ಅದೇ ಅರ್ಥವನ್ನು ಧ್ವನಿಸುತ್ತದೆ. ಇದು ವರ್ಣಗಳ ಛಾಯೆಯ ಮೂಲಕ ಸಮಸ್ಯೆಯನ್ನು ಬಗೆಹರಿಸುತ್ತದೆ. ಸೃಷ್ಟಿ ಲಕ್ಷಾಂತರ ವರ್ಣಗಳು, ಛಾಯೆಗಳ ಸಂಯೋಜನೆಯಿಂದ ಕೂಡಿದೆ. ಪ್ರತಿ ಛಾಯೆಯೂ ಒಂದೊಂದು ನಿರ್ದಿಷ್ಟ ಲಕ್ಷಣಗಳನ್ನು ಹೊಂದಿದೆ. ಕೆಲವು ಸಂತೋಷ ಅನುಭೂತಿ ನೀಡಿ ಅಪ್ಯಾಯಮಾನವಾಗಿದ್ದರೆ, ಕೆಲವು ಮಂಕಾಗಿದ್ದು ಖಿನ್ನತೆಯ ಅನುಭವ ನೀಡುತ್ತವೆ. ಕೆಲವು ಪ್ರೀತಿಯನ್ನು ಪ್ರತಿಬಿಂಬಿಸಿದರೆ, ಕೆಲವು ಅಧ್ಯಾತ್ಮವನ್ನು ಸಂಕೇತಿಸುತ್ತವೆ. ಕೆಲವು ಕೋಪದ ಪ್ರತೀಕಗಳಾಗಿದ್ದರೆ, ಕೆಲವು ಅಧಿಕಾರವನ್ನು ಸೂಚಿಸುತ್ತವೆ. ಪ್ರತಿ ಛಾಯೆಯೂ ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತಿರುತ್ತದೆ.
ಧ್ಯಾನ ಆಶ್ರಮದ ಹೀಲರ್‌ಗಳು ಈ ವರ್ಣಗಳು, ಛಾಯೆಗಳನ್ನು ಬಳಸಿಕೊಂಡು ಕೋಶ ಅಥವಾ ವ್ಯಕ್ತಿಯ ದೇಹದಲ್ಲಿನ ಪದರಗಳಲ್ಲಿ ಪರಿಣಾಮಕಾರಿ ಬದಲಾವಣೆಗಳನ್ನು ತರುತ್ತಾರೆ. ಈ ವಿಜ್ಞಾನದಲ್ಲಿ ಯಾವುದೇ ಗೊಂದಲವಿಲ್ಲ. ಇದನ್ನು ಪರಿಪಕ್ವವಾಗಿ ಪ್ರಯೋಗಿಸಿದರೆ ತ್ವರಿತ ಪರಿಣಾಮ ಕಾಣಬಹುದು.
ಇಲ್ಲೊಂದು ಎಚ್ಚರಿಕೆ ಇದೆ. ಇದೊಂದು ಶಕ್ತಿಯುತ ವಿಜ್ಞಾನವಾದ್ದರಿಂದ ಹೀಲರ್‌ಗಳು ಕೆಲವು ವಿಶೇಷ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕಾದದ್ದು ಅಗತ್ಯ. ಅವನ್ನು ಗುರುಮುಖೇನ ಕಲಿತ ಧ್ಯಾನ ಮತ್ತು ಯೋಗ ತಂತ್ರಗಳಿಂದ ತಮ್ಮದಾಗಿಸಿಕೊಳ್ಳಬಹುದು. ಹೀಲರ್ ಪರಿಶುದ್ಧನಾಗಿರಬೇಕು. ತಾವು ಯಾರ ಮೇಲೆ ಇದನ್ನು ಪ್ರಯೋಗಿಸುತ್ತಾರೊ ಅವರಿಂದ ಏನನ್ನೂ ಸ್ವೀಕರಿಸಬಾರದು. ಹೀಲಿಂಗ್ ಅನ್ನು ತನ್ನ ಕರ್ತವ್ಯ ಎಂದು ಭಾವಿಸಬೇಕು. <
(ಸ್ಪಿರಿಚ್ಯುಯಲ್ ಹೀಲಿಂಗ್ ಕಲಿಯಲು ಆಸಕ್ತಿ ಇರುವವರು 7406175228 ಅಥವಾ 9448335830 ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು.)

- ಯೋಗಿ ಅಶ್ವಿನಿ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!