ಭಕ್ತಿ-ಜ್ಯೋತಿಷ್ಯ

ದೇಹಕ್ಕೂ, ಚಂದ್ರಂಗೂ ಬಂದಾರ ಮುನಿಸು...

ಮಾನವನ ಮನಸ್ಸಿನ ಮೇಲೆ ಪರಿಣಾಮ ಬೀರುವ ಗ್ರಹ ಚಂದ್ರ. ಬುದ್ಧಿಯ ಮೇಲೆ ಬುಧನ ಪರಿಣಾಮ, ಚಿತ್ತದ ಮೇಲೆ ಗುರುವಿನ ಹಿಡಿತ, ಸಾತ್ವಿಕ ಅಹಂಕಾರದ ಮೇಲೆ ಶನಿಯ ಪರಿಣಾಮ, ಅಭಿಮಾನ ಗರ್ವಗಳ ಮೇಲೆ ಕುಜನ ಪರಿಣಾಮ, ಶುಕ್ರನು ಜ್ಞಾನದ ಮೇಲೆ ಪರಿಣಾಮವನ್ನು ಕೊಡುವನು. ಮೋಕ್ಷದ ಮೇಲೆ ರಾಹು ಪರಿಣಾಮವನ್ನು ಬೀರುತ್ತಾನೆ.
ಚಂದ್ರನು ರಾಣಿಯಾದುದರಿಂದ ಪ್ರಜಾಕಾರಕ ಗ್ರಹ. ಗ್ರಹದಲ್ಲಿ ಪ್ರಥಮರಾದ ಸೂರ್ಯ, ಚಂದ್ರರು ಪ್ರಕಾಶ ಗ್ರಹರು. ಚಂದ್ರನು ಶುಭ ಗ್ರಹ. ಕ್ಷೀಣ ಚಂದ್ರ ಪಾಪ ಗ್ರಹ. ಲಗ್ನದಿಂದ ನವಮದಲ್ಲಿ ಚಂದ್ರನಿದ್ದರೆ ಹಿರಿಯರಿಂದ ಸುಖ ಸಿಗುವುದಿಲ್ಲ. ಇದು ಆತನ ಸ್ಥಾನದ ಫಲ. ಶುಕ್ಲ ಪಕ್ಷದ ದಶಮಿಯವರೆಗೆ ಚಂದ್ರ ಮಧ್ಯಮ ಬಲ. ಆದರೆ ನಂತರದ ಹತ್ತು ದಿನಗಳಲ್ಲಿ ಬಹು ಬಲವನ್ನು ಹೊಂದುತ್ತಾನೆ. ಆದರೆ ನಂತರ ಚಂದ್ರ ಬಲಹೀನನಾಗುತ್ತಾನೆ.
ಚಂದ್ರನಿಂದ ತಾರುಣ್ಯ, ಪ್ರೌಢ, ವೃದ್ಧಾವಸ್ಥೆಗಳನ್ನು ಮಾನವನ ಕರ್ಮದಲ್ಲಿ ಸೂಚಿಸಬಹುದು. ತಾರುಣ್ಯಾವಸ್ಥೆ ಶುಕ್ಲ ಪಕ್ಷದ ಮೊದಲ ಹತ್ತು ದಿನಗಳಲ್ಲಿ ಅವಸ್ಥೆಯ ಚಂದ್ರನಿಂದ ವಿಶೇಷ ಫಲ ಬೋಧನೆ ಸಾಧ್ಯವಿಲ್ಲ. ಕೃಷ್ಣ ಪಕ್ಷದಲ್ಲಿ ದಿವಾ ಜನನ, ಶುಕ್ಲ ಪಕ್ಷದಲ್ಲಿ ರಾತ್ರಿ ಜನನ ಶುಭ. ಅಮಾವಾಸ್ಯೆಯ ಚಂದ್ರನಿಗೆ ಸ್ತ್ರೀ ರಾಶಿಯಲ್ಲಿದ್ದಾಗ ತಾರುಣ್ಯ ನಂತರ ಶುಭ ಫಲ ಕಾಣುವುದು.
ಇಂಥವರಿಗೆ ಬಾಲ್ಯದಲ್ಲಿ ಕಷ್ಟ ಅಧಿಕವಾಗಿದ್ದು, ವಯಸ್ಸು ಆದಂತೆ ವೃದ್ಧಿಗೊಳ್ಳುತ್ತಿರುವರು. ಮೇಷ, ವೃಷಭ, ಕರ್ಕಾಟಕ, ಧನು, ಮಕರ ರಾಶಿಗಳು ವೃಷ್ಠೋದಯಗಳು. ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಕುಂಭ ರಾಶಿಗಳು ಶೀರ್ಷೋದಯ ರಾಶಿಗಳು. ಮೀನ ಉಭಯೋದಯ ರಾಶಿ. ಲಗ್ನ ಮತ್ತು ಚಂದ್ರ ರಾಶಿ ಷಷ್ಠಹಾಗೂ ಉಭಯೋದಯವಾದರೆ ಹೆಂಗಸರಿಗೆ ಹೆರಿಗೆ ಕಷ್ಟವಾಗುತ್ತದೆ.
ಶೀರ್ಷೋದಯ ರಾಶಿಯಲ್ಲಿ ಚಂದ್ರ ಮತ್ತು ಲಗ್ನವಿದ್ದರೆ ಹೆರಿಗೆ ಸಮಯ ಕಷ್ಟವಾಗುವುದಿಲ್ಲ. ಮೀನ ಉಭಯೋದಯ. ಇದರಲ್ಲಿ ಹೆರಿಗೆಯಾದರೆ ಕಷ್ಟವಾಗುತ್ತದೆ. ಚಂದ್ರನ ಕೇಂದ್ರದಲ್ಲಿ ಪಾಪಗ್ರಹ ಯೋಗ ಇದ್ದರೆ ಮನಸ್ಸು ಶುದ್ಧವಾಗಿರದು.
ಚಂದ್ರನು ಜಲರೂಪನಾದ್ದರಿಂದ ಜಲದೇವತೆಯು ರತ್ನಮುತ್ತುಗಳ ಹುಟ್ಟು. ಚಂದ್ರನು ಬಲಹೀನನಾದರೆ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ಗುರು ಗ್ರಹವು ಚಂದ್ರನ ಗುಣಧರ್ಮವನ್ನು ಕೊಡಿಸಿ ಅನಿಷ್ಟ ಫಲಕ್ಕೆ ಕಾರಣನಾಗುತ್ತಾನೆ.
ಚಂದ್ರನು ಅನಿಷ್ಟನಾಗಿದ್ದಾಗ ನಿದ್ರೆ ಹೆಚ್ಚಾಗುವುದು. ಕಫ, ಅತಿಸಾರ, ಶೀತ ಜ್ವರಗಳು ಕಂಡುಬರುವುದು. ಆಲೋಚನಾ ಶಕ್ತಿ ಕಡಿಮೆಯಾಗುತ್ತದೆ. ರಕ್ತ ದೋಷದಿಂದಾಗುವ ರೋಗಗಳು ಬರುತ್ತದೆ.

- ಮೂಲ್ಕಿ ಹರಿಶ್ಚಂದ್ರ ಸಾಲಿಯಾನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಸಮ್ಮತಿ, ಲೀಟರ್‌ಗೆ 8 ರೂ. ಏರಿಕೆ?