ಭಕ್ತಿ-ಜ್ಯೋತಿಷ್ಯ

ಧನ್ ಧನಾಧನ್

ಮಾನವನ ಜೀವನವಿರುವುದು 'ಧರ್ಮಾರ್ಥ ಕಾಮ ಮೋಕ್ಷಾಯ' ಎಂಬ ಉಕ್ತಿಯ ಮೇಲೆ. ಅಂದರೆ ಚತುರ್ವಿಧ ಪುರುಷಾರ್ಥಗಳನ್ನು ಎಲ್ಲರೂ ಪಾಲಿಸಬೇಕಾಗುತ್ತದೆ. ಈ ಪುರುಷಾರ್ಥಗಳಲ್ಲಿ ಪ್ರಧಾನವಾದುದು ಅರ್ಥ. ಉಳಿದ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಸಾಧನೆಗಳಿಗೆ ಹಣ ಸಂಪಾದನೆ ಮುಖ್ಯ ಪಾತ್ರ ವಹಿಸುತ್ತದೆ.
ಧನವಿಲ್ಲದೇ ಏನನ್ನೂ ಸಾಧಿಸಲಾಗುವುದಿಲ್ಲ. ಅವರವರ ಯೋಗ್ಯತೆಗೆ ಅನುಸಾರವಾಗಿ ಧನ ಸಂಪಾದನೆ ಆಗುತ್ತದೆ. ಆದ್ದರಿಂದ ಧನಾಗಮನ ಯೋಗವನ್ನು ಪ್ರತಿಯೊಬ್ಬರೂ ಜಾತಕ ಪರಿಶೀಲಿಸಿ ತಿಳಿಯಬಹುದು.
ಧನಭಾವ ಲಗ್ನದಿಂದ 2ನೇ ಮನೆ. ಇದು ಮುಖ್ಯ. ಧನಯೋಗವನ್ನು ತಿಳಿಯಲು ಇದರ ಜೊತೆಗೆ 5, 9, 10, 11ನೇ ಭಾವಗಳೂ ಪ್ರಧಾನವಾಗುತ್ತದೆ. ಈ ಭಾವಗಳಿಗೆ ಹೆಚ್ಚಿನ ಸಂಬಂಧ ಉಂಟಾದಲ್ಲಿ ಧನಪ್ರಾಪ್ತಿಯಾಗುವ ಸಂಭವವಿರುತ್ತದೆ. ಜ್ಯೋತಿಷ್ಯದಲ್ಲಿ ಹಲವು ಪ್ರಧಾನ ಧನಯೋಗಗಳನ್ನು ಗುರುತಿಸಬಹುದು...

ತ್ರಿಲೋಚನಾ ಯೋಗ
ಸೂರ್ಯ, ಅಂಗಾರಕ, ಚಂದ್ರ ಪ್ರಸ್ಪರ ಕೋಣದಲ್ಲಿದ್ದು, ಬಲಶಾಲಿಗಳಾಗಿ ಒಂದರ ನಂತರ ಒಂದರಂತಿದ್ದರೆ ತ್ರಿಲೋಚನಾ ಯೋಗ ಉಂಟಾಗಿ ಜಾತಕ ಮಹದೈಶ್ವರ್ಯವಂತನಾಗಿ, ಬುದ್ಧಿಶಾಲಿಯಾಗಿ ಚಿರಕಾಲ ಬಾಳುವನು.

ಧನಾಕರ್ಷಣಾ ಯೋಗ
ಲಗ್ನಾಧಿಪತಿಯು ಧನಭಾವದಲ್ಲಿದ್ದು, ನವಮಾಧಿಪತಿ ಏಕಾದಶದಲ್ಲಿದ್ದು, ಸಪ್ತಮಾಧಿಪತಿ ಪಂಚಮದಲ್ಲಿದ್ದು, ಪಂಚಾಮಾಧಿಪತಿ ತೃತೀಯಾಧಿಪತಿ ಲಗ್ನದಲ್ಲಿದ್ದರೆ ಧನಾಕರ್ಷಣ ಯೋಗ ಉಂಟಾಗಿ ಜಾತಕ ಯಾರ ಮನೆಯಲ್ಲಿರುತ್ತಾನೋ ಆ ಮನೆಯವರು ಧನವಂತರಾಗುತ್ತಾರೆ.

ರಸಾತಲ ಯೋಗ
ದ್ವಾದಶಾಧಿಪತಿಯು ಪರಮೋಚ್ಚದಲ್ಲಿದ್ದು, ದ್ವಾದಶದಲ್ಲಿ ಶುಕ್ರನಿದ್ದು, ನಾಲ್ಕನೇ ಸ್ಥಾನಾಧಿಪತಿಯಿಂದ ನೋಡಲ್ಪಟ್ಟರೆ ರಸಾತಲ ಯೋಗ ಉಂಟಾಗಿ ಜಾತಕರು ಭೂಮಿಯಲ್ಲಿ ಬಚ್ಚಿಟ ಧನವನ್ನು ಹೊಂದಿ ಶ್ರೀಮಂತನಾಗಿ ಅರಸೋಪಾದಿಯಲ್ಲಿ ಬಾಳುತ್ತಾನೆ.

ಉಪಚಯ ಯೋಗ
ತೃತೀಯ, ಷಷ್ಠ, ಏಕಾದಶಗಳಲ್ಲಿ (3,6,11) ಶುಭಗ್ರಹಗಳು ಸ್ಥಿರರಾದರೆ, ಶುಭಾಶುಭವನ್ನು ಉಂಟುಮಾಡುವ ಈ ಯೋಗ ಉಂಟಾಗಿ ಜಾತಕನು ಶುಕ್ಲಪಕ್ಷದ ಚಂದ್ರನಂತೆ ವೃದ್ಧಿಹೊಂದಿ ಧನವಂತನಾಗಿ ಸುಖದಿಂದ ಬಾಳುತ್ತಾನೆ.

ಲಕ್ಷ್ಮೀಯೋಗ
ನವಮಾಧಿಪತಿಯು ಭಾಗ್ಯದಲ್ಲಿ ಉಚ್ಚನಾಗಿದ್ದು, ಪಂಚಮಾಧಿಪತಿಯೊಂದಿಗೆ ಕೂಡಿದಲ್ಲಿ ಜಾತಕನಿಗೆ ಲಕ್ಷ್ಮೀಯೋಗ ಉಂಟಾಗಿ, ಬಹಳ ಧನಿಕನಾಗಿ, ಕೀರ್ತಿವಂತನಾಗಿ ಬಾಳುತ್ತಾನೆ.

ಕುಲಸಂವರ್ಧನ ಯೋಗ
ಚಂದ್ರನಿಗೆ, ಸೂರ್ಯನಿಗೆ, ಲಗ್ನಕ್ಕೆ ಪಂಚಮದಲ್ಲಿ ಸರ್ವಶುಭಗ್ರಹಗಳು ಬಲವತ್ತರಾಗಿದ್ದರೆ ಕುಲವರ್ಧನ ಯೋಗ ಉಂಟಾಗಿ, ಈ ಜಾತಕನು ಮಕ್ಕಳು, ಮೊಮ್ಮಕ್ಕಳನ್ನು, ಆರೋಗ್ಯಾದಿಗಳನ್ನು ಹೊಂದಿ, ಧನಿಕನಾಗಿ ಸೌಖ್ಯದಿಂದ ಬಾಳುವನು.

ಅಮೋಘ ಯೋಗ
ಅನೇಕ ಶುಭ ಗ್ರಹಗಳು ಉಚ್ಚ, ಮೂಲ ತ್ರಿಕೋಣಗಳಲ್ಲಿದ್ದರೆ, ರಾಜನ ಮೂಲಕ (ಸರ್ಕಾರದ ಮೂಲಕ) ಮಹಾಧನವನ್ನೀಯುವ ಅಮೋಘವಾದ ಧನಯೋಗ ಉಂಟಾಗಿ ಜಾತಕನು ಸುಖದಿಂದ ಬಾಳುವನು.

ಅರ್ಥಯೋಗ
ನವಮದಲ್ಲಿ ದ್ವಿತೀಯಾಧಿಪತಿಯು ಚತುರ್ಥನಾಗಿ ಪತಿಯೊಂದಿಗಿದ್ದು, ನವಮಾಧಿಪತಿಯು ಬಲಾಢ್ಯನಾಗಿ ದ್ವಿತೀಯ ಸ್ಥಾನದಲ್ಲಿದ್ದು, ಲಾಭಾಧಿಪತಿ ಲಾಭ ಭಾವದಲ್ಲಿದ್ದು, ಆ ಭಾವವು ಲಗ್ನಾಧಿಪತಿಗೆ ಉಚ್ಚಸ್ಥಾನದಲ್ಲಿದ್ದರೆ ಅರ್ಥಯೋಗ ಉಂಟಾಗಿ ಜಾತಕ ಕೋಟೀಶ್ವರನಾಗಿ ಅರಸನಂತೆ ಬಾಳುವನು.

ದೇವೇಂದ್ರ ಯೋಗ

ಲಗ್ನಾಧಿಪತಿ ಲಾಭದಲ್ಲಿದ್ದು, ದ್ವಿತೀಯಾಧಿಪತಿ ದಶಮದಲ್ಲಿದ್ದು, ದಶಮಾಧಿಪತಿ ದ್ವಿತೀಯದಲ್ಲಿದ್ದು, ಲಾಭಾಧಿಪತಿ ಲಗ್ನದಲ್ಲಿದ್ದರೆ ಜಾತಕ ದೇವೇಂದ್ರನಂತೆ ಕೋಟೀಶ್ವರನಾಗಿ ಕೀರ್ತಿವಂತನಾಗಿ ಬಾಳುವುನು.  

- ಎಂ.ವಿ. ಸತ್ಯನಾರಾಯಣ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್

ಬೆಂಗಳೂರಿನಲ್ಲಿ CJP ಪ್ರತಿಭಟನೆ: ಪ್ರಕಾಶ್ ರಾಜ್, YouTuber ಧ್ರುವ್ ರಾಠಿ ಭಾಗಿ; CEC ರಾಜೀನಾಮೆಗೆ ಬಿಗಿಪಟ್ಟು..!

ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ