ಭಕ್ತಿ-ಜ್ಯೋತಿಷ್ಯ

ಬ್ರಹ್ಮ ತೇಜಸ್ಸು

ಕೆಲವು ವ್ಯಕ್ತಿಗಳಿರುತ್ತಾರೆ. ಅದ್ಭುತ ತೇಜಸ್ಸಿನಿಂದ ಕಂಗೊಳಿಸುತ್ತಿರುತ್ತಾರೆ. ಮಾತ್ರವಲ್ಲ, ಅವರು ಜೀವನದಲ್ಲಿ ಸಾಮಾನ್ಯರು ಊಹಿಸಲಾಗದ ಎತ್ತರ ಏರುವುದರ ಜತೆಗೆ ಜೀವನದ ಪ್ರತಿ ಹಂತದಲ್ಲಿಯೂ ಯಶಸ್ಸು ಪಡೆಯುತ್ತಿರುತ್ತಾರೆ. ಅವರು ಗುಂಪಿನಲ್ಲಿದ್ದರೂ ಪ್ರತ್ಯೇಕ ಅಸ್ತಿತ್ವ ಹೊಂದಿದವರಾಗಿರುತ್ತಾರೆ. ಅವರದು ಏನೋ ವಿಚಿತ್ರ ಸೆಳೆತ. ಎಲ್ಲರಿಗೂ ಅವರೊಂದಿಗೆ ಮಾತನಾಡುವ ತವಕ. ನಮಗೆ ಗೊತ್ತಿಲ್ಲದೆಯೇ ಅವರತ್ತ ಆಕರ್ಷಿತರಾಗಿಬಿಡುತ್ತೇವೆ. ಏಕೆ  ಹೀಗೆ? ಅದು ಬ್ರಹ್ಮ ತೇಜಸ್ಸಿನ ಛಾಯೆ. ಈ ತೇಜಸ್ಸು ಹೊಂದಿದ ವ್ಯಕ್ತಿ ತಾನು ಬಯಸಿದ್ದನ್ನೆಲ್ಲವನ್ನೂ ಪಡೆಯಬಲ್ಲ. ಇದನ್ನು ಭೌತಿಕ ಸಾಹಸಗಳಿಗೆ ಬಳಸಿಕೊಳ್ಳುವುದೋ ಅಥವಾ ಅದನ್ನೂ ಮೀರಿದ ಉದ್ದೇಶಗಳಿಗೆ ಉಪಯೋಗಿಸಿಕೊಳ್ಳುವುದೊ ಎನ್ನುವುದು ಆ ವ್ಯಕ್ತಿಯ ವಿವೇಚನೆಗೆ ಬಿಟ್ಟದ್ದು.
ಏಕೆ ಕೆಲವೇ ವ್ಯಕ್ತಿಗಳು ಬ್ರಹ್ಮ ತೇಜಸ್ಸು ಹೊಂದಿರುತ್ತಾರೆ ಮತ್ತು ಬಹುತೇಕರಿಗೆ ಇಂಥ ತೇಜಸ್ಸು ಇರುವುದಿಲ್ಲ? ಅದು ಅನೇಕ ಜನ್ಮಗಳಿಂದ ಸಂಚಯಿತವಾದ ತೇಜಸ್ಸು. ಕಠಿಣವಾದ ಕರ್ಮಾಚರಣೆಗಳು, ಅಷ್ಟಾಂಗ ಯೋಗದ ತತ್ವಗಳ ಪಾಲನೆಯಿಂದ ಅಂಥ ತೇಜಸ್ಸು ಗಳಿಸಿಕೊಂಡಿರುತ್ತಾರೆ. ಒಂದರ್ಥದಲ್ಲಿ ಇದನ್ನು ಕರ್ಮಫಲ ಎನ್ನಬಹುದು. ಈ ಕರ್ಮಫಲ ದೇಹದಲ್ಲಿ ಶುಕ್ರನ ರೂಪದಲ್ಲಿ ಅಡಕವಾಗಿರುತ್ತದೆ ಮತ್ತು ಓಜಸ್ಸಿನ ರೂಪದಲ್ಲಿ ಪ್ರಕಟವಾಗುತ್ತದೆ. ಅಷ್ಟಾಂಗ ಯೋಗದ ಎಲ್ಲ ಐದು ಯಾಮಗಳು ಈ ತೇಜಸ್ಸಿಗೆ ಪೂರಕವಾಗಿವೆ. ಐದನೇ ಯಾಮವಾದ ಬ್ರಹ್ಮಚರ್ಯದ ಮೂಲಕ ಇದು ವಿಶೇಷವಾಗಿ ಪ್ರಕಟಗೊಳ್ಳುತ್ತದೆ.
ಶುಕ್ರ ಎಂದರೆ ತೇಜಸ್ಸು. ಆತ ಒಳ್ಳೆಯ ಕರ್ಮಫಲಗಳನ್ನು ವೀರ್ಯದ ರೂಪದಲ್ಲಿ ಹಿಡಿದಿಟ್ಟುಕೊಳ್ಳುತ್ತಾನೆ. ವ್ಯಕ್ತಿ ಲೈಂಗಿಕವಾಗಿ ಉತ್ತೇಜಿತನಾಗಿ ಸ್ತ್ರೀಯೊಂದಿಗೆ ಬೆರೆತಾಗ ಈ ವೀರ್ಯಾಣುಗಳು ಗರ್ಭದೊಳಕ್ಕೆ ಪ್ರವೇಶಿಸಿ ಹೊಸ ಜೀವದ ಸೃಷ್ಟಿಯಾಗುತ್ತದೆ. ಗರ್ಭದಲ್ಲಿರುವ ಭ್ರೂಣದಲ್ಲಿ ಅಂದರೆ ಹೊಸ ಜೀವದಲ್ಲಿ ಹೇಗೆ ಸೇರಿಕೊಳ್ಳಬೇಕು ಎನ್ನುವುದು ಶುಕ್ರನಿಗೆ ಗೊತ್ತಿರುತ್ತದೆ. ಪರಿಣಾಮವಾಗಿ ಸದಾ ಚಟುವಟಿಕೆಯಿಂದ ಕೂಡಿದ, ಶಕ್ತಿವಂತನಾದ, ನಿರೋಗಿಯಾದ, ತೇಜಸ್ವಿ ವ್ಯಕ್ತಿಯ ಜನನವಾಗುತ್ತದೆ. ಶಕ್ತಿ ಹೇಗೆ ಪ್ರಕಟವಾಗುತ್ತದೆ ಎಂದರೆ ವ್ಯಕ್ತಿಯ  ಆಲೋಚನಾ ವಿಧಾನದಲ್ಲಿ ಪ್ರಚುರಗೊಳ್ಳುತ್ತದೆ. ಬ್ರಹ್ಮಚರ್ಯದ ತೇಜಸ್ಸು ಮತ್ತು ದೀರ್ಘಾಯುಷ್ಯದ ಬಗ್ಗೆ 'ದಿ ಏಜ್‌ಲೆಸ್ ಡೈಮೆನ್‌ಷನ್‌' ಕೃತಿಯಲ್ಲಿ ವಿವರವಾಗಿ ಹೇಳಿದ್ದೇನೆ.
ಸ್ತ್ರೀ ಎಂದರೆ ಶಕ್ತಿ. ಅದಕ್ಕೆ ಮಾಯೆಯನ್ನು ಸೃಷ್ಟಿಸುವ ತಾಕತ್ತಿದೆ ಮತ್ತು ಈ ಆಕರ್ಷಣೆಯೇ ಸೃಷ್ಟಿಕ್ರಿಯೆ ನಿರಂತರವಾಗಿರಲು ಕಾರಣ. ಸಾಮಾನ್ಯ ಪುರುಷರಿಗೆ ಈ ಮಾಯೆಯ ಆಕರ್ಷಣೆಯಿಂದ ದೂರವಿರಲು ಸಾಧ್ಯವೇ ಇಲ್ಲ. ಪರಿಣಾಮವಾಗಿ ಹೆಣ್ಣಿನ ಸಂಪರ್ಕ ಇಲ್ಲದೆಯೂ ಗಂಡು ಸ್ಖಲಿಸಬಲ್ಲ. ಆಗ ವೀರ್ಯಾಣುಗಳು ವಾತಾವರಣಕ್ಕೆ ಬಿಡುಗಡೆಯಾಗಿ ಶಕ್ತಿ ಕಳೆದುಕೊಳ್ಳುತ್ತವೆ. ಸಂಭೋಗದಲ್ಲಿ ಮಹಿಳೆ ಭಾವತೃಪ್ತಿ ತಲುಪಿದಾಗ, ಅದು ಪರಸ್ಪರರ ಸಂತೋಷವಾಗಿ ಪರಿವರ್ತನೆಯಾಗುತ್ತದೆ. ಆಗಲೂ ಅದ್ಭುತ ಶಕ್ತಿಯೊಂದು ತನ್ನ ಸಾಮರ್ಥ್ಯ ಕಳೆದುಕೊಂಡುಬಿಡುತ್ತದೆ. ಆದರೆ, ಸ್ತ್ರೀ ಕೆಲವು ಬಂಧ ಮತ್ತು ಮುದ್ರೆಗಳಿಂದ ತನ್ನ ಶರೀರದ ಕೆಲವು ಕೇಂದ್ರಗಳನ್ನು ಜಾಗೃತವಾಗಿಟ್ಟುಕೊಂಡು, ಈ ಶಕ್ತಿ ಸೋರಿಕೆಯಾಗದಂತೆ ತಡೆದಿಟ್ಟುಕೊಂಡರೆ ಅದು ಅದ್ಭುತ ಸೌಂದರ್ಯ ಮತ್ತು ಆಕರ್ಷಣೆಯಾಗಿ ರೂಪಾಂತರಗೊಳ್ಳುತ್ತದೆ.

-ಯೋಗಿ ಅಶ್ವಿನಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್

ಬೆಂಗಳೂರಿನಲ್ಲಿ CJP ಪ್ರತಿಭಟನೆ: ಪ್ರಕಾಶ್ ರಾಜ್, YouTuber ಧ್ರುವ್ ರಾಠಿ ಭಾಗಿ; CEC ರಾಜೀನಾಮೆಗೆ ಬಿಗಿಪಟ್ಟು..!

ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ