ತುಳಸಿಯ ದರ್ಶನದಿಂದ ಪಾಪ ಪರಿಹಾರ, ಸ್ಪರ್ಶದಿಂದ ಪವಿತ್ರತೆ, ವಂದನದಿಂದ ರೋಗ ಪರಿಹಾರ, ಪ್ರೋಕ್ಷಿಸಿಕೊಂಡರೆ ಆಯುವೃದ್ಧಿ, ಅದನ್ನು ನೆಡುವುದರಿಂದ ಶ್ರೀಕೃಷ್ಣನ ಸಾನ್ನಿಧ್ಯ ಲಾಭ, ಅರ್ಚಿಸಿದರೆ ಮೋಕ್ಷಪ್ರಾಪ್ತಿಯಾಗುತ್ತದೆ ಎಂಬುದು ಭಾರತೀಯ ನಂಬಿಕೆ. ತುಳಸಿ ಇರುವಲ್ಲಿ ಸೊಳ್ಳೆ ಮತ್ತಿತರ ಕೀಟಗಳು ಮಾಯವಾಗುತ್ತವೆ. ಕೆಮ್ಮು, ನೆಗಡಿ ಸೇರಿದಂತೆ ಹಲವು ರೋಗಗಳಿಗೆ ಇದು ರಾಮಬಾಣ. ಇಂಥ ತುಳಸಿಗೆ ಉತ್ಥಾನ ದ್ವಾದಶಿಯಾದ ಇಂದು ರಾತ್ರಿ ವಿಶೇಷ ಪೂಜೆ ನಡೆಯುತ್ತದೆ.