ಭಕ್ತಿ-ಜ್ಯೋತಿಷ್ಯ

ಸಿಹಿಗಳ ಸರದಾರ

ದಸರಾ- ದೀಪಾವಳಿ ಅಂದರೆ ಸಿಹಿತಿಂಡಿಗಳ ಸಮಯ. ಸಿಹಿ ಮಳಿಗೆಗಳು ಸಾಲು ಸಾಲಾಗಿದ್ದರೂ, ಗುಣಮಟ್ಟ, ಸ್ವಚ್ಛತೆ ಕಾಪಾಡಿಕೊಂಡಿರುವ ಸಿಹಿತಾಣಗಳು ವಿರಳ. ಜಯನಗರ 5ನೇ ಕ್ರಾಸ್ ಬಳಿಯಿರುವ ಶ್ರೀ ವೆಂಕಟೇಶ್ವರ ಸ್ವೀಟ್ ಮೀಟ್ ಸ್ಟಾಲ್, ತನ್ನ ಗಾಂಧೀಬಜಾರ್ ಮಳಿಗೆಯಂತೆಯೇ 60ಕ್ಕೂ ಹೆಚ್ಚು ವರ್ಷಗಳ ಅನುಭವದಿಂದ ಸ್ವಚ್ಛತೆಗೆ, ಗುಣಮಟ್ಟಕ್ಕೆ ಹೆಸರು ಮಾಡಿದೆ.
ಸ್ವಚ್ಛ ಗಾಜಿನ ಹಂದರಗಳಲ್ಲಿ ನೀಟಾಗಿ ಡಿಸ್‌ಪ್ಲೇ ಆಗಿರುವ ಸಿಹಿ ತಿನಿಸುಗಳು, ಶುದ್ಧ ತುಪ್ಪದಿಂದ ಮಾಡಿದ ಮೈಸೂರ್ ಪಾಕ್ ಘಮ ಗ್ರಾಹಕರನ್ನು ಸೆಳೆಯುತ್ತೆ. ಇಲ್ಲಿನ ಮೈಸೂರ್ ಪಾಕ್‌ಗೆ ದೇಶ ವಿದೇಶಗಳಲ್ಲಿ ಬೇಡಿಕೆ. ಅವರ ತಯಾರಿಕ್ರಮ ಇತರ ಮಳಿಗೆಗಳಿಗಿಂತ ವಿಭಿನ್ನ. ಆದ್ದರಿಂದ ಇಲ್ಲಿನ ಮೈಸೂರು ಪಾಕ್ ಹೆಚ್ಚಿನ ಶೆಲ್ಫ್- ಲೈಫ್ ಹೊಂದಿದೆ. ಸಿಹಿ ಮಳಿಗೆಯ ಮಾಲಿಕರಾದ ವಿ.ಸಿ. ಹರಿಪ್ರಸಾದ್ 15-20 ವರ್ಷ ತಾತ ಹಾಗೂ ತಂದೆಯವರ  ಬಳಿ ಪಳಗಿದ ಬಳಿಕ, ಅಣ್ಣ ವಿಷ್ಣುಪ್ರಸಾದ್ ಒಡನೆ ಸೇರಿ ವೃತ್ತಿ ಮುಂದುವರಿಸಿದ್ದಾರೆ.
'ಇಲ್ಲಿ ಗ್ರಾಹಕರೇ ದೇವರು. ಗುಣಮಟ್ಟದಲ್ಲಿ ಎಂದೂ ಕಾಂಪ್ರಮೈಸ್ ಮಾಡಲಾರೆ' ಎನ್ನುವ ಹರಿಪ್ರಸಾದ್‌ಗೆ ಎಲ್ಲವೂ ಪರ್‌ಫೆಕ್ಟ್ ಆಗಿರಬೇಕು. ಕ್ವಾಲಿಟಿ, ಸರ್ವಿಸ್, ಹೈಜೀನ್ ಪ್ರಾಮುಖ್ಯ. ಮೈಸೂರ್‌ಪಾಕ್, ಚಿರೋಟಿ, ಪೇಣಿ, ಜಿಲೇಬಿ, ಜಹಾಂಗೀರ್, ಜಾಮೂನ್, ಬರ್ಫಿಗಳು, ಬಾದುಷಾ, ಹಲ್ವ, ಡ್ರೈಫ್ರೂಟ್ಸ್ ಲಡ್ಡು, ಬೇಸಿನ್ ಲಡ್ಡು, ಕೇಸರ್ ಸ್ಯಾಂಡ್ವಿಚ್, ಮಲಿಯ್ ಸ್ಯಾಂಡ್ವಿಚ್, ಖೀರ್‌ಕದಮ್, ಚಂಪಾಕಲಿ, ಚಂಚಂ, ರಸ್‌ಬರಿ, ರಸ್‌ಮಲೈ, ರಸಗುಲ್ಲಾ, ಮಲೈ ಕೋಫ್ತಾ, ಬಾಸುಂದಿ ಇಲ್ಲಿ ಫೇಮಸ್. ಶುದ್ಧ ತುಪ್ಪ ಮತ್ತು ತಾಜಾ ಹಣ್ಣಿನ ಪಲ್ಪ್ ಬಳಸಿ ತಯಾರಿಸಿದ ಹಣ್ಣಿನಾಕಾರದ ಬರ್ಫಿಗಳೂ ಈ ಲಿಸ್ಟ್‌ನಲ್ಲಿ ಸೇರಿವೆ.
ಸಿಹಿ ತಿಂದ ನಾಲಿಗೆಗೆ ಖಾರ- ಹಾಗಲಿಕಾಯಿ ಚಿಪ್ಸ್, ಆಲೂ ಚಿಪ್ಸ್, ಪಕೋಡ, ನಿಪ್ಪಟ್ಟು, ವಿಧ ವಿಧದ ಮಿಕ್ಸರ್‌ಗಳು, ಕೋಡಬಳೆ, ಬಾದಾಮಿ, ಗೋಡಂಬಿ ಮಸಾಲಾ, ಮುಂತಾದವೂ ಇಲ್ಲಿವೆ. ಇಲ್ಲಿನ ಸ್ವೀಟ್ಸ್ ಎಷ್ಟು ಫೇಮಸ್ಸೋ, ಅಷ್ಟೇ ಫೇಮಸ್ ಇಲ್ಲಿನ ಜ್ಯೂಸ್ ಮತ್ತು ಚಾಟ್ಸ್.
ನಮ್ಮ ಮಳಿಗೆಯ ಗುಣಮಟ್ಟಕ್ಕೆ ನಮ್ಮೊಂದಿಗೆ ಉತ್ಸಾಹದಿಂದ ಶ್ರಮಿಸುತ್ತಿರುವ ಕಾರ್ಮಿಕರೇ ಕಾರಣ. ಬೆಂಗಳೂರು, ಬನಾರಸ್, ಚೆನ್ನೈ, ಆಂಧ್ರ, ಬಿಹಾರ್, ಅಸ್ಸಾಂ ಮುಂತಾದೆಡೆಗಳಿಂದ ಬಂದಿರುವ ನನ್ನ ಈ ಬಹುನಾಡಿಗಳಿಗೆ ನಾನು ಚಿರಋಣಿ ಅಂತಾರೆ ಹರಿ. ಬೆಳಿಗ್ಗೆ 8ರಿಂದ ರಾತ್ರಿ 9ರ ವರೆಗೆ ತೆರೆದಿರುವ ಈ ಸಿಹಿ ಮಳಿಗೆಯಲ್ಲಿ ಪ್ರತಿ ಬಾರಿ ಹೊಸ ಖಾದ್ಯಗಳು ಪಟ್ಟಿಗೆ ಸೇರುತ್ತಲೆ ಇರುತ್ತವೆ. ದಸರಾ- ದೀಪಾವಳಿ ಸಮಯ ರೌಂಡ್ ದಿ ಕ್ಲಾಕ್  ಶ್ರಮಿಸಿ ಸೇವೆ ಸಲ್ಲಿಸಲು ಸಿದ್ಧವಾಗಿರುತ್ತೆ ಈ ಮಳಿಗೆ.

- ಗೀತಾ ಶ್ರೀನಿವಾಸನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!