ಭಕ್ತಿ-ಜ್ಯೋತಿಷ್ಯ

ಗೆಲುವಿನ ದಿನ!

ಮೂರು ದಿನಗಳ ಹಿಂದಷ್ಟೇ ದಸರಾ ಆಚರಿಸಿದ್ದೇವೆ. ದಸರಾ ನವರಾತ್ರಿಯ ಕೊನೆಯ ದಿನ. ಆಶ್ವೀಜ ಮಾಸದ ಶುಕ್ಲ ಪಕ್ಷ ದಶಮಿಯಂದು ಈ ಹಬ್ಬ ಬರುತ್ತದೆ. ಅದನ್ನು ವಿಜಯದಶಮಿ ಎಂತಲೂ ಹೇಳುತ್ತಾರೆ. ಇದು ದುಷ್ಟಶಕ್ತಿಗಳ ವಿರುದ್ಧ ಒಳ್ಳೆಯತನದ ಗೆಲುವಿನ ಸಂಕೇತ. ಶ್ರೀರಾಮಚಂದ್ರ ರಾವಣನನ್ನು ಸಂಹರಿಸಿದ್ದು ಇದೇ ದಿನ, ಮಹಿಷಾಸುರನನ್ನು ದುರ್ಗೆ ವಧಿಸಿದ್ದೂ ಇದೇ ದಿನ. ಇಂಥ ನೂರಾರು ಕಥೆಗಳು ವಿಜಯದಶಮಿ ಕುರಿತು ನಮಗೆ ಸಿಗುತ್ತವೆ. ಪ್ರಾದೇಶಿಕವಾಗಿ, ಒಂದೊಂದು ಸಮೂಹ- ಒಂದೊಂದು ಪಂಗಡಕ್ಕೆ ಸಂಬಂಧಿಸಿ ಒಂದೊಂದು ರೀತಿಯ ಕಥೆಗಳು ಸಿಗಬಹುದು. ಎಲ್ಲದರ ತಾತ್ಪರ್ಯವೂ ಒಂದೇ.
ವೇದಕಾಲದ ಋಷಿಗಳು ಬಹಳ ದೂರದೃಷ್ಟಿ ಉಳ್ಳವರಾಗಿದ್ದರು. ಸೃಷ್ಟಿಯಲ್ಲಿನ ಪ್ರತಿಯೊಂದರ ರಹಸ್ಯವನ್ನೂ ಅವರು ಬಲ್ಲವರಾಗಿದ್ದರು. ಸೃಷ್ಟಿಯ ಉಗಮ, ಅದರ ಕಾರ್ಯಶೈಲಿ, ಅಂತ್ಯ, ಮರುಸೃಷ್ಟಿ ಎಲ್ಲವನ್ನೂ ಬಲ್ಲವರಾಗಿದ್ದರು. ಆದರೆ ಇಂತಿಂಥ ದಿನಗಳಲ್ಲಿ ಇಂಥದ್ದನ್ನೇ ಮಾಡಬೇಕು ಎಂದು ಏಕೆ ಮಾಡಿಟ್ಟರು? ಸರಳ ಉತ್ತರ ಎಂದರೆ ಶಕ್ತಿ! ಬದುಕಿನಲ್ಲಿ ಸತ್ಯವನ್ನು ಅರಸುವವರಿಗೆ ದಸರೆಯನ್ನು ಕುರಿತಾದ ಕಥೆಗಳೆಲ್ಲ ಜ್ಞಾನಾರ್ಜನೆಯ ಸುಳಿವುಗಳಾಗಿ ಗೋಚರಿಸುತ್ತವೆ. ದಸರೆ ಕೆಟ್ಟದ್ದರ ಮೇಲೆ ಒಳ್ಳೆಯತನದ ಗೆಲುವಿನ ಪ್ರತೀಕ. ನಮ್ಮ ನಕಾರಾತ್ಮಕ ಶಕ್ತಿಯನ್ನೆಲ್ಲ ಕಳೆದುಕೊಂಡು ಸಕಾರಾತ್ಮಕ ಶಕ್ತಿಯನ್ನು ಆವಾಹಿಸಿಕೊಳ್ಳಲು ಪ್ರಶಸ್ತ ದಿನ. ಇದು ಆಯಾ ವ್ಯಕ್ತಿಯ ಮೇಲೆ  ಅವಲಂಬಿತವಾಗಿರುತ್ತದೆ ಎನ್ನುವುದು ಬೇರೆ ವಿಚಾರ.

ದಸರಾ ಎಂದರೆ ತಿಳಿವಳಿಕೆ ಇಲ್ಲದವರಿಗೆ ಜ್ಞಾನಾರ್ಜನೆ ದಿನ; ಸ್ವಾರ್ಥಿಗಳು ಔದಾರ್ಯ ಬೆಳೆಸಿಕೊಳ್ಳುವ ದಿನ; ಕೋಪಿಷ್ಠರು ಕ್ಷಮಾಗುಣ ಬೆಳೆಸಿಕೊಳ್ಳುವ ದಿನ; ಆಧ್ಯಾತ್ಮಿಕ ಮನೋಭಾವದವರಿಗೆ ಭೌತಿಕ, ಭಾವನಾತ್ಮಕ, ಆರ್ಥಿಕ ಅಸಮತೋಲ ನಿವಾರಿಸಿಕೊಂಡು ಇನ್ನಷ್ಟು ಎತ್ತರಕ್ಕೇರುವ ದಿನ. ಈ ಅರ್ಥದಲ್ಲಿ ನಮ್ಮ ಧ್ಯಾನ್ ಆಶ್ರಮದಲ್ಲಿ ನಾವು ನಿತ್ಯವೂ ದಸರಾ ಆಚರಿಸುತ್ತೇವೆ! ಯೋಗ ಎನ್ನುವುದು 'ಏಕ ತತ್ವ ನಿರಂತರ ಅಭ್ಯಾಸ'. ಸನಾತನ ಕ್ರಿಯೆಯಂಥ ಯೋಗದ ಮೂಲಕ ನಮ್ಮೊಳಗಿನ ಕಲ್ಮಶಗಳನ್ನೆಲ್ಲ ತೊಳೆದುಕೊಂಡು ಪರಿಶುದ್ಧ ವ್ಯಕ್ತಿಗಳಾಗಬಹುದು.

(ಸ್ಪಿರಿಚ್ಯುಯಲ್ ಹೀಲಿಂಗ್ ಮತ್ತು ಸನಾತನ ಕ್ರಿಯಾ ಕಾರ್ಯಾಗಾರಗಳನ್ನು ನಡೆಸಿಕೊಡಲು ಯೋಗಿ ಅಶ್ವಿನಿ ಅವರು ನವೆಂಬರ್ ಕೊನೆಯ ಭಾಗದಲ್ಲಿ ಬೆಂಗಳೂರಿಗೆ ಬರುವವರಿದ್ದಾರೆ. ನೋಂದಣಿ ಮತ್ತು ಮಾಹಿತಿಗಾಗಿ ಸಂಪರ್ಕಿಸಿ: 7406175228)

- ಯೋಗಿ ಅಶ್ವಿನಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!