ಬೇರೆ ಬೇರೆ ರಾಶಿಗಳಿಗೆ ಗ್ರಹಗಳು ಹೋದಂತೆ, ಜಾತಕನಲ್ಲಿಯೂ ಬದಲಾವಣೆ ಆಗುವುದು ಸಹಜ. ಈ ನಿಟ್ಟಿನಲ್ಲಿ ರವಿಯು ಮೇಷರಾಶಿಯಲ್ಲಿದ್ದಾಗ ಜಾತಕ ಹೇಗಿರುತ್ತಾನೆ ಎಂದು ತಿಳಿಯೋಣ. ರವಿಯು ಮೇಷ ರಾಶಿಯಲ್ಲಿ ಇದ್ದಾಗ ಜಾತಕ ಬುದ್ಧಿವಂತನಾಗಿರುತ್ತಾನೆ. ಮಾತ್ರವಲ್ಲದೆ ಈತ ಪ್ರಸಿದ್ಧಿ ಪಡೆದು, ಐಶ್ವರ್ಯವಂತನಾಗುವನು. ಅದೃಷ್ಟದಲ್ಲಿ ಏರುಪೇರಾಗಬಹುದು. ಆತ ಮಹತ್ವಾಕಾಂಕ್ಷೆ ಉಳ್ಳವನೂ, ಪ್ರಯತ್ನಶೀಲನೂ, ಆಕ್ರಮಣ ಸ್ವಭಾವದವನೂ ಆಗಿರುತ್ತಾನೆ. ಇದರೊಂದಿಗೆ ಅಂಥ ಜಾತಕ ಪ್ರಾಮಾಣಿಕ, ಉದಾರಿಯೂ, ಅಧ್ಯಾತ್ಮದ ಕಡೆಗೆ ಒಲುಮೆ ಉಳ್ಳವನೂ ಆಗಿರುತ್ತಾನೆ.