ನಮ್ಮ ನಿತ್ಯ ಬದುಕಿನಲ್ಲಿ ಈ ದೀಪ ನಾನಾ ಕಾರಣಕ್ಕಾಗಿ ಮಹತ್ವ ಪಡೆಯುತ್ತದೆ...
- ಪೂಜಾ ಕಾರ್ಯದ ಆರಂಭದಲ್ಲಿ ದೇವರ ಮುಂದೆ ದೀಪ ಹೊತ್ತಿಸುತ್ತೇವೆ. ಮಹಾಮಂಗಳಾರತಿಯಿಂದ ಪೂಜೆ ಮುಕ್ತಾಯ.
- ಬೆಳ್ಳಿ, ಹಿತ್ತಾಳೆ, ಕಂಚು, ತಾಮ್ರ, ಮಣ್ಣಿನ ಹಣತೆಗಳಿಗೆ ಎಣ್ಣೆ ಅಥವಾ ತುಪ್ಪವನ್ನು ಹಾಕಿ ದೇವರ ಮುಂದೆ ಹೊತ್ತಿಸಿ ಅದರ ಮುಂದೆ ಕುಳಿತು ಧ್ಯಾನ ಮಾಡುತ್ತಾರೆ.
- ಸುಮಂಗಲೆಯರು ಬೆಲ್ಲದಾರತಿ ಮಾಡಿ ಪೂಜಿಸುವುದು ಹೆಚ್ಚು.
- ಉತ್ಸವ, ಜಾತ್ರೆ ಸಮಾರಂಭಗಳಲ್ಲಿ ಸುಮಂಗಲೆಯರು ತಂಬಿಟ್ಟಿನ ಆರತಿ ಮಾಡುತ್ತಾರೆ.
- ಬನಶಂಕರಿ ದೇವಿಗೆ ನಿಂಬೆಹಣ್ಣಿನಲ್ಲಿ ಆರತಿ ಮಾಡಿ ಬೆಳಗುತ್ತಾರೆ. ಶನಿದೇವರಿಗೆ ಎಳ್ಳಿನಾರತಿಯೇ ಶ್ರೇಷ್ಠ.
- ಗಂಗಾ ನದಿಗೆ ನಿತ್ಯವೂ ಆರತಿ ನಡೆಯುತ್ತದೆ. ಆರತಿಯ ಕಂಬಗಳು ಒಂದಾಳು ಎತ್ತರವಿರುತ್ತವೆ. ಗಂಗಾ ನದಿಯಲ್ಲಿ ಹಣತೆಗಳನ್ನು ತೇಲಿಬಿಡಲಾಗುತ್ತದೆ.
- ದೇವರ ಮುಂದೆ ನಿರಂತರವಾಗಿ ಬೆಳಗಲಿ ಎಂದು ನಂದಾದೀಪ ಬೆಳಗಿಸುತ್ತಾರೆ.
- ವ್ಯಕ್ತಿ ಮರಣ ಹೊಂದಿದಾಗ ಶವದ ಸಮೀಪ ದೀಪ ಹಚ್ಚುತ್ತಾರೆ.
- ತಟ್ಟೆಗಳಲ್ಲಿ ರಂಗೋಲಿ ಬರೆದು ದೇವರಿಗೆ ಆರತಿ ಬೆಳಗುವುದುಂಟು. ಉತ್ಥಾನ ದ್ವಾದಶಿ ಸಮಯದಲ್ಲಿ ತುಳಸಿಗೆ ನೆಲ್ಲಿಕಾಯಿ ಆರತಿಯನ್ನು ಬೆಳಗುತ್ತಾರೆ.
- ಮಲೆನಾಡಿನಲ್ಲಿ ದೀಪಾವಳಿಯ ವೇಳೆ ಅಂಟಿಕೆ- ಪಿಂಟಿಕೆ ನಡೆಯುತ್ತದೆ. ದೇವಸ್ಥಾನದ ದೀಪವನ್ನು ಮನೆಮನೆಗೆ ತೆಗೆದುಕೊಂಡು ಹೋಗುತ್ತದೆ ಈ ತಂಡ. ಆ ದೀಪ ಮನೆಯಲ್ಲಿ ಬೆಳಗಿದರೆ ರೋಗರುಜಿನ ಬರುವುದಿಲ್ಲ ಎಂಬ ನಂಬಿಕೆ.
- ಪ್ರಕಾಶ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics