ಭಕ್ತಿ-ಜ್ಯೋತಿಷ್ಯ

ಜಾನಪದ ಸ್ಪರ್ಶ

ದೀಪಗಳ ಅವಳಿ. ಅಂದರೆ, ದೀಪಗಳ ಸಾಲು. ಇದು ಹಣತೆ ಹಚ್ಚಿ ಆನಂದಿಸುವ ಪರ್ವ. ಮಲೆನಾಡಿನಲ್ಲಿ 5 ದಿನಗಳ ಕಾಲ ಆಚರಿಸುವ ದೀರ್ಘ ಪರ್ವವಿದು. ಕರಿ, ಸಿರಿ, ವರುಷ ತೊಡಕು... ಹೀಗೆ ನಾನಾ ವಿಧದ ಸಾಂಸ್ಕೃತಿಕ ಆಚರಣೆ- ಆಕರ್ಷಣೆಗಳಿರುತ್ತವೆ.

ಅಂಟಿಗೆ ಪಿಂಟಿಗೆ
ದೀಪಾವಳಿ ಸಮಯದಲ್ಲಿ ಮಲೆನಾಡಿನಲ್ಲಿ ಗಮನ ಸೆಳೆಯುವ ಜಾನಪದ ಕಲೆ ಅಂಟಿಗೆ ಪಿಂಟಿಗೆ. ಒಂದಷ್ಟು ಜನರ ಗುಂಪು ಮೊದಲೇ ತಯಾರಿ ನಡೆಸಿಕೊಂಡು, ತಮ್ಮಲ್ಲಿರುವ ಕಲೆ ಹೊರಹಾಕಲು ತಾಲೀಮು ನಡೆಸುತ್ತಾರೆ.

ಹಬ್ಬದ ಹಿಂದಿನ ದಿವಸ ಅಂಟಿಗೆ- ಪಿಂಟಿಗೆಯ ಜ್ಯೋತಿಯನ್ನು ಬೆಳಗಿಸುತ್ತಾರೆ. ನಂತರ ತಂಡದ ನಾಯಕ ಊರಿನ ಹಿರಿಯರ ಮನೆಗೆ ಸುದ್ದಿ ಮುಟ್ಟಿಸಿ, ಸಿದ್ಧತೆ ಮಾಡಿಕೊಳ್ಳಲು ತಿಳಿಸುತ್ತಾರೆ. ಅಂಟಿಗೆ ಪಿಂಟಿಗೆಯಲ್ಲಿ ಒಮ್ಮೆ ಜ್ಯೋತಿ ಹೊತ್ತಿಸಿದ ಮೇಲೆ ಆರುವಂತಿಲ್ಲ. ತಂಡದ ಸದಸ್ಯರು ಸದಾ ಎಣ್ಣೆ ಹಾಕಿ, ಅದರ ಆರೈಕೆ ವಹಿಸುತ್ತಾರೆ. ನಂತರ ಅಂಟಿಗೆ- ಪಿಂಟಿಗೆಯ ಹಾಡು ಹೇಳುತ್ತಾ 8- 10 ಜನರ ತಂಡ ಮನೆಗಳಿಗೆ ಭೇಟಿ ನೀಡಿ ಜಾನಪದ ಜಾಗೃತಿ ಮೂಡಿಸುತ್ತದೆ.

ಇವರಿಗೆ ಮನೆಯ ಯಜಮಾನ ಹೊಸತೊಂದು ಬಟ್ಟೆಯನ್ನು ದಾನವಾಗಿ ನೀಡಬೇಕು. ಇಲ್ಲವೆ ಧಾನ್ಯಗಳನ್ನು ಶಕ್ತ್ಯಾನುಸಾರ ನೀಡಬೇಕು. ಇವರೊಂದಿಗೆ ಮೈಗೆಲ್ಲಾ ಮಸಿ ಬಳಿದುಕೊಂಡು, ಕಪ್ಪು ವೇಷ ಧರಿಸಿದ ಕೊರಗ ಕಾಣಸಿಗುವುದು ದೀಪಾವಳಿಯಲ್ಲಿ ಮಾತ್ರ.

ಬೂರೆ ಹಬ್ಬ
ನೀರು ತುಂಬುವ ಹಬ್ಬದಂದು, ಮಲೆನಾಡಿಗರು ರಾತ್ರಿಯೆಲ್ಲಾ ಎಚ್ಚರದಿಂದ ಇರುತ್ತಾರೆ. ಏಕೆಂದರೆ, ಅಂದು ಊರಿನ ಒಂದಷ್ಟು ಯುವಕರು ಗುಂಪು ಕಟ್ಟಿಕೊಂಡು, ಎಲ್ಲರ ಮನೆಯ ಹಿತ್ತಲಿಗೆ ಮಧ್ಯರಾತ್ರಿಯಲ್ಲಿ ದಾಳಿಯಿಡುತ್ತಾರೆ. ಅವರ ಮನೆಯ ಹಿತ್ತಲಿನಲ್ಲಿ ಬೆಳೆದ ತರಕಾರಿಗಳನ್ನು ಕೊಯ್ದು ಕದ್ದು ತರುತ್ತಾರೆ. ಹೀಗೆ ತರುವಾಗ ಸಿಕ್ಕಿ ಬಿದ್ದರೂ ಮನೆಯ ಯಜಮಾನ ಬಯ್ಯುವಂತಿಲ್ಲ. 

ತುರಿಕೆ ಎಲೆಗಳನ್ನು ಹಂಡೆಯ ನೀರಿಗೆ ಹಾಕುವುದು, ಮನೆಯ ಕಚೇರಿಯ ಮುಂದಿರುವ ಬೋರ್ಡುಗಳಿಗೆ  ಬಣ್ಣ ಹಚ್ಚುವುದು, ಹೀಗೆ ವಿವಿಧ ಕುಚೋದ್ಯಗಳನ್ನು ಈ ವೇಳೆ ಮಾಡಲಾಗುತ್ತದೆ. ಕಳ್ಳತನದಿಂದ ತೆಗೆದುಕೊಂಡು ಹೋದ ತರಕಾರಿಗಳನ್ನು, ಭೂಮಿ ಹುಣ್ಣಿಮೆಯ ದಿವಸ ಭೂ ತಾಯಿಗೆ ಬಯಕೆ ಹಾಕಿರುವ ಊಟದೊಂದಿಗೆ ಈ ತರಕಾರಿ, ಕಾಯಿ-ಪಲ್ಲೆಗಳನ್ನು ಹಾಕಿ, ಭೂತಾಯಿಗೆ ಉಣ ಬಡಿಸುವ ಪದ್ಧತಿಯೂ ಉಂಟು.

- ಭಾಗ್ಯ ನಂಜುಂಡಸ್ವಾಮಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು

'ರಾಹುಲ್ ಗಾಂಧಿ ಅವರೇ, ನಿಮ್ಮ ಉದ್ದೇಶಗಳು ಎಂದಿಗೂ ಈಡೇರಲ್ಲ': ವಿಪಕ್ಷದವರದ್ದು 'ನಗರ ನಕ್ಸಲ್' ಮನಸ್ಥಿತಿ; ನಿತಿನ್ ನಬಿನ್