ಭಕ್ತಿ-ಜ್ಯೋತಿಷ್ಯ

ಗೃಹಗತಿ

ಸ್ವಂತ ಮನೆಯಲ್ಲಿ ವಾಸ ಮಾಡಬೇಕು ಎನ್ನುವುದು ಸಾಮಾನ್ಯವಾಗಿ ಎಲ್ಲರ ಕನಸು. ಆದರೆ ಅದು ನನಸಾಗೋದು ಮಾತ್ರ ಕೆಲವರಿಗಷ್ಟೆ ಇದಕ್ಕೆ...

ಸ್ವಂತ ಮನೆಯಲ್ಲಿ ವಾಸ ಮಾಡಬೇಕು ಎನ್ನುವುದು ಸಾಮಾನ್ಯವಾಗಿ ಎಲ್ಲರ ಕನಸು. ಆದರೆ ಅದು ನನಸಾಗೋದು ಮಾತ್ರ ಕೆಲವರಿಗಷ್ಟೆ ಇದಕ್ಕೆ ಕಾರಣಗಳು ಹತ್ತು ಹಲವು ಇದ್ದರೂ ಪ್ರಮುಖವಾದ ಕಾರಣವನ್ನು ಜ್ಯೋತಿಷ್ಯಶಾಸ್ತ್ರ ತಿಳಿಸುತ್ತದೆ.
'ದೇವತಾ'ಗ್ರಹರೂಪೇಣ ದರ್ಶಯಂತಿ ಶುಭಾಶುಭಂ ಎನ್ನುವಂತೆ ನಮ್ಮ ಎಲ್ಲಾ ಕನಸುಗಳ ಹಾಗೂ ಕಾಮನೆಗಳ ಸಾಕಾರಕ್ಕೆ ಗ್ರಹ ಬಲ ಮುಖ್ಯ. ಗ್ರಹ ನಿರ್ಮಾಣದ ವಿಚಾರಕ್ಕೆ ಬಂದಾಗ ಜ್ಯೋತಿಷ್ಯಶಾಸ್ತ್ರ ಬಹಳ ವಿಶೇಷವಾದ ವಿಭಿನ್ನ ಫಲಗಳನ್ನು ಕೊಡುವ ಗ್ರಹಗಳತ್ತ ಬೆಳಕು ಚೆಲ್ಲುತ್ತದೆ. ವಿಭಿನ್ನ ಹಾಗೂ ವಿಶೇಷ ಹೇಗೆ ಎಂದರೆ ಮನೆಯನ್ನು ಕೊಡುವ ಗ್ರಹ ಎಂದು ನಾವು ಒಂದೇ ಗ್ರಹವನ್ನು ಸೂಚಿಸಲು ಆಗದು. ಏಕೆಂದರೆ ಮನೆಯನ್ನು ಕಟ್ಟಲು ಬೇಕಾದ ಜಾಗವನ್ನು ಅಂದರೆ ಭೂಮಿಯನ್ನು ಕೊಡುವ ಗ್ರಹ ಕುಜ. ಹಾಗೇಯೇ ಕುಜ ಕೊಟ್ಟ ಭೂಮಿಯಲ್ಲಿ ಮನೆ ಕಟ್ಟಲು ಸಾಮಾಗ್ರಿಗಳನ್ನು ಖರೀದಿಸಲು ಹಣವನ್ನು ಕೊಡುವ ಗ್ರಹ ಶುಕ್ರ. ನಂತರ ಅಂಥ ಕಟ್ಟಿದ ಮನೆ ಗಟ್ಟಿಯಾಗಿರಲು ನೂರು ವರ್ಷ ಬಾಳಿಕೆ ಬರಲು ಹಾಗೂ ಆ ಮನೆಯಲ್ಲಿ ನಾವು ವಾಸ ಮಾಡಲು ಯೋಗವನ್ನು ಕರುಣಿಸುವವ ಶನ್ಯೆಶ್ವರ.
ಹೀಗೆ ಈ ಮೂರೂ ಗ್ರಹಗಳ ಬಲ ಯಾರಿಗೆ ಸಂಪೂರ್ಣವಾಗಿರುತ್ತದೆಯೋ ಅವರಿಗೆ ಸಂತೋಷವಾದ ಸ್ವಗೃಹ ನಿವಾಸಯೋಗ. ಇನ್ನು ಕೆಲವರಿಗೆ ಜಾತಕದಲ್ಲಿ ಕರ್ಕ ರಾಶಿಯಲ್ಲಿ ಕುಜನಿದ್ದಾಗ ನೀಚತ್ವದಿಂದಾಗಿ ಭೂಮಿ ಖರೀದಿಸುವ ಯೋಗ ಇಲ್ಲದಿದ್ದರೂ ಅವರ ಜಾತಕದಲ್ಲಿ ಶುಕ್ರ ಹಾಗೂ ಶನಿ ಬಲಯುತನಾಗಿದ್ದ ಪಕ್ಷದಲ್ಲಿ ಪ್ಲಾಟ್ ಖರೀದಿಸುವ ಹಾಗೂ ಅದರಲ್ಲಿ ವಾಸಿಸುವ ಯೋಗ ಸಿಗುತ್ತದೆ. ಕುಜ ಹಾಗು ಶುಕ್ರ ಈ ಎರಡೂ ಗ್ರಹ ಸರಿಯಿಲ್ಲದೆ ಕೇವಲ ಶನಿ ಬಲ ಮಾತ್ರ ಇದ್ದರೆ ಬಾಡಿಗೆ ಮನೆಯಾದರೂ ಉತ್ತಮವಾದ ಹಾಗೂ ಸುಖಮಯವಾದ ಗೃಹ ಲಾಭ.
'ಎಲ್ಲಾ ಗ್ರಹಗಳ ಬಲವಿದ್ದರೂ ಸಹ ಕೆಲವರಿಗೆ ಮನೆ ಕಟ್ಟಲು ಆಗದು. ಅದ್ದಕ್ಕೆ ಕಾರಣಗಳು ಹಲವು ಅಶುದ್ಧ ಭೂಮಿ'- ಯಾವ ಜಾಗದಲ್ಲಿ ಮನೆ ಕಟ್ಟಬೇಕು ಎಂದು ಯೋಚಿಸಿ ಪ್ರಾರಂಭಿಸುತ್ತಾರೊ ಮೊದಲನೆಯದಾಗಿ ಆ ಜಾಗ ಶುದ್ಧ ಹಾಗು ಗೃಹ ನಿರ್ಮಾಣಕ್ಕೆ ಯೋಗ್ಯವಾಗಿರುಬೇಕು. ಅಂದರೆ ಆ ಜಾಗದಲ್ಲಿ ನಾಗ ವಾಸಿಸುವ ಹುತ್ತ, ನಾಗನೆಡೆ (ಸರ್ಪ ಸಂಚಾರ) ಇರಬಾರದು. ಸ್ಮಶಾನದ ಬಳಿಯಿರುವ ಜಾಗವು ಸಹ ನಿಷೀದ್ಧ.

ಕುಲದೇವತಾ ಕೋಪ
ನಮ್ಮ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಮನೆದೇವರ ಆಶೀರ್ವಾದ ಅತ್ಯಂತ ಅವಶ್ಯಕ. ಸ್ವಂತ ಮನೆಕಟ್ಟುವ ಮೊದಲು ನಮ್ಮ ಕುಲದೇವರಿಗೆ ಹೋಗಿ ಅಲ್ಲಿ ಪೂಜೆ ಹಾಗೂ ಪ್ರಾರ್ಥನೆ ಮಾಡದಿದ್ದರೆ ಮನೆ ಕಟ್ಟುವುದು ಕಷ್ಟ.

ಆಯ
ಮನೆಯನ್ನು ಕಟ್ಟುವ ಮೊದಲು ಖಾಲಿ ನಿವೇಶನದ ಉದ್ದ ಹಾಗೂ ಅಗಲವನ್ನು ಪರಿಗಣಿಸಿ ನಮ್ಮ ಶಾಸ್ತ್ರಗಳಲ್ಲಿ ಧ್ವಜ, ಗಜ, ಸಿಂಹ, ವೃಷಭ ಹೀಗೆ ಕೆಲವು ಆಯಗಳನ್ನು ಹೇಳಿರುತ್ತಾರೆ. ಆಯಾದಿ ಷೊಡಶ ವರ್ಗದಲ್ಲಿ ಸೂಚಿಸುವಂತೆ ಎಲ್ಲ ಗುಣಗಳು ಸರಿ ಹೊಂದುವುದು ಕಷ್ಟ ಸಾಧ್ಯ. ಆದರೂ ಮನೆಯನ್ನು ಕಟ್ಟುವಾಗ ಧನ, ಋಣ, ಆಯಸ್ಸು, ಆಯ ಇವುಗಳನ್ನು ವಿಶೇಷವಾಗಿ ಪರಿಗಣಿಸಿ ಉತ್ತಮವಾದುದನ್ನು ಬಳಸಿ ಮನೆಯನ್ನು ಕಟ್ಟಬೇಕು. ಇಲ್ಲವಾದಲ್ಲಿ ಸಹ ಗೃಹ ನಿರ್ಮಾಣ ಕಷ್ಟ ಸಾಧ್ಯ.

ವಾಸ್ತು
ಮನೆಯನ್ನು ಕಟ್ಟುವ ಕಾರ್ಯ ಪ್ರಾರಂಭಿಸುವಾಗ ಈಶಾನ್ಯದಿಂದಲೇ ಪ್ರಾರಂಭಿಸಬೇಕು. ಅದಲ್ಲದೆ ಅಗ್ನಿ ಮೂಲೆಯಿಂದ ಅಥವಾ ವಾಯವ್ಯದಿಂದ ಪ್ರಾರಂಭಿಸಿದಾಗ ಮನೆ ಕಟ್ಟುವ ಕಾರ್ಯದಲ್ಲಿ ವಿಘ್ನಗಳು ಹಾಗೂ ಅಕ್ಕಪಕ್ಕದವರಿಂದ ಮನಸ್ತಾಪ ಜಗಳಗಳು ಆಗುತ್ತವೆ.
ಹೀಗೆ ಸ್ವಗೃಹ ನಿರ್ಮಾಣದ ಕನಸು ನನಸಾಗಿಸಲು ಅನೇಕ ವಿಧವಾದ ತೊಡಕುಗಳು ಇರುತ್ತವೆ. ಆದರೆ ಶಾಸ್ತ್ರದಲ್ಲಿ ಹೇಳಿದ ಪರಿಹಾರವನ್ನು ಸರಿಯಾದ ಮಾರ್ಗದಲ್ಲಿ ಅನುಸರಿಸಿದಾಗ ಆ ಕಂಡ ಕನಸು ನನಸಾಗಿ ಸುಖವಾಗಿ ಅಲ್ಲಿ ನೆಲೆಸಬಹುದು. ಹೆಚ್ಚಿನ ಮಾಹಿತಿಗೆ ಮೊ. 9845682380ಗೆ ಸಂಪರ್ಕಿಸಿ.

- ವಿಠ್ಠಲ್ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ ಭಯಗೊಂಡಿದ್ದು ನಮ್ಮ ಹೋರಾಟದಲ್ಲಿ ಅರ್ಧ ಗೆದ್ದಿದ್ದೇವೆ, CEC ರಾಜೀನಾಮೆ ನೀಡುವವರೆಗೆ ಹಿಂಜರಿಯುವುದಿಲ್ಲ': ಇಂದು CJP ಪ್ರತಿಭಟನೆ ಮುಂದುವರಿಕೆ

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!