ಭಕ್ತಿ-ಜ್ಯೋತಿಷ್ಯ

ಲೋಕ ಡೊಂಕಲ್ಲ!

'ಡಾಕ್ಟ್ರೇ, ನನಗೆ ಬೆರಳಲ್ಲಿ ದೇಹದ ಯಾವಭಾಗ ಒತ್ತಿದರೂ ವಿಪರೀತ ನೋವಾಗುತ್ತದೆ' ಎಂದು ಒಬ್ಬ ವ್ಯಕ್ತಿ ಡಾಕ್ಟರ್ ಬಳಿ ಹೇಳಿದ. ವೈದ್ಯರು ಅವನ ದೇಹವನ್ನೆಲ್ಲಾ ಪರೀಕ್ಷಿಸಿದರು....

'ಡಾಕ್ಟ್ರೇ, ನನಗೆ ಬೆರಳಲ್ಲಿ ದೇಹದ ಯಾವಭಾಗ ಒತ್ತಿದರೂ ವಿಪರೀತ ನೋವಾಗುತ್ತದೆ' ಎಂದು ಒಬ್ಬ ವ್ಯಕ್ತಿ ಡಾಕ್ಟರ್ ಬಳಿ ಹೇಳಿದ. ವೈದ್ಯರು ಅವನ ದೇಹವನ್ನೆಲ್ಲಾ ಪರೀಕ್ಷಿಸಿದರು. ಎಲ್ಲಿಯೂ ಯಾವ ಸಮಸ್ಯೆಯೂ ಕಾಣಲಿಲ್ಲ. ಆದರೆ ಹೆಬ್ಬೆರಳಿನ ತುದಿಯಿಂದ ಒತ್ತಿದಾಗ ನೋವೆನ್ನುತ್ತಿದ್ದಾನೆ!
ದೇಹವನ್ನೆಲ್ಲ ಹುಡುಕಾಡಿದ ವೈದ್ಯರು ಕೊನೆಗೂ ಸಮಸ್ಯೆಯ ಮೂಲ ಕಂಡುಹಿಡಿದರು. ವ್ಯಕ್ತಿ ಯಾವ ಬೆರಳಿನಿಂದ ಒತ್ತಿದಾಗ ನೋವು ಎನ್ನುತ್ತಿದ್ದನೋ, ಆ ಬೆರಳಿನ ತುದಿಯಲ್ಲಿ ಒಂದು ಹುಣ್ಣಾಗಿತ್ತು! ಹೀಗಾಗಿ ಅದರಿಂದ ಎಲ್ಲಿ ಒತ್ತಿದರೂ ನೋವು ಕಾಣಿಸುತ್ತಿತ್ತು.!
ನಮ್ಮ ಜೀವನದಲ್ಲಿಯೂ ಹೀಗೆಯೇ. ಸಮಸ್ಯೆಯ ಮೂಲ ನಮ್ಮಲ್ಲಿಯೇ ಇದ್ದರೂ ಬೇರೆಯವರಲ್ಲಿ ತಪ್ಪು ಹುಡುಕುತ್ತಿರುತ್ತೇವೆ. 'ಅವರು ವ್ಯಂಗ್ಯವಾಗಿ ಮಾತನಾಡುತ್ತಾರೆ', 'ಅವರಿಗೆ ನನ್ನನ್ನು ಕಂಡರೆ ಆಗುವುದಿಲ್ಲ', 'ಅವರಿಗೆ ಹೊಟ್ಟೆ ಕಿಚ್ಚು'... ಹೀಗೆ ಹತ್ತು ಹಲವು ಥರದ ಋಣಾತ್ಮಕ ಆಲೋಚನೆಯಿಂದ ಬೇರೆಯವರನ್ನು ನೋಡಿದಾಗ, ಅವರದೇ ತಪ್ಪು, ನನ್ನದು ಮಾತ್ರ ಸರಿ ಎಂಬ ಭಾವ ಮನಸ್ಸನ್ನು ಕಾಡುತ್ತದೆ.
ನಮ್ಮಲ್ಲಿಯೇ ಇರುವ ಋಣಾತ್ಮಕ ವಿಚಾರಗಳನ್ನು ಸರಿಪಡಿಸಿಕೊಂಡರೆ, ಇನ್ನೊಬ್ಬರು ಸರಿಯಾಗಿ ಕಾಣಿಸತೊಡಗುತ್ತಾರೆ. 'ಲೋಕದ ಡೊಂಕ ನೀವೇಕೆ ತಿದ್ದುವಿರಯ್ಯಾ? ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ' ಎಂಬ ಬಸವಣ್ಣನವರ ವಚನದ ಸಾಲಿನಂತೆ, ನಮ್ಮ ಡೊಂಕನ್ನು ತಿದ್ದಿಕೊಂಡರೆ ಲೋಕ ನೇರವಾಗಿ ಗೋಚರಿಸುತ್ತದೆ.
ತಪ್ಪುನಿನಿತುಂ ಸೈಸದ ಅಪ್ಪಣದ ಗುಣಶಾಲಿ ಕಪ್ಪು ಕಂಡು ಕನಲ್ವ ಗುಲಗಂಜಿ ಉಪ್ಪೋ ಸಪ್ಪೆಯೋ ನಿನ್ನ ಮೈಬೆವರ ನೆಕ್ಕಿ ನೀ ತಿಳಿ ಒಪ್ಪಿಹೆಯ ನೀನಜನ ಮಂಕುತಿಮ್ಮ... ಹೀಗೆನ್ನುತ್ತಾರೆ ಡಿವಿಜಿ.
ತಪ್ಪನ್ನು ಸ್ವಲ್ಪವೂ ಸಹಿಸೆನು ಎನ್ನುವವರ ಮನಸ್ಥಿತಿ, ತನ್ನ ಮೈಯಲ್ಲೇ ಕಪ್ಪಿರಿಸಿಕೊಂಡು, ಕಪ್ಪನ್ನು ಕಂಡರೆ ಕೋಪಿಸುವ ಗುಲಗಂಜಿಯಂತೆ, ಪ್ರತಿಯೊಬ್ಬರ ಮೈಯ ಬೆವರೂ ಉಪ್ಪೇ! ತಾನು ತಪ್ಪೇ ಮಾಡುವವನಲ್ಲ ಎಂದರೆ ತನ್ನ ಮೈ ಬೆವರನ್ನು ಸಪ್ಪೆ ಎಂದು ಸಾಧಿಸ ಹೊರಟಂತೆ ಎನ್ನುವುದು ಇದರ ಸಾರ.
ಹೀಗಾಗಿಯೇ ನಮ್ಮಲ್ಲಿಯೇ ಇರುವ ಸಮಸ್ಯೆಯ ಮೂಲವನ್ನು ಹುಡುಕಿ ಪರಿಹರಿಸಿಕೊಂಡು ಸಮಾಜದಲ್ಲಿ ಬದುಕುವುದು ಸೂಕ್ತ. ಬೇರೆಯವರನ್ನು ಬದಲಿಸಲು ಹೊರಡುವ ಮೊದಲು ನಾವು ಬದಲಾಗಬೇಕು. ಕಾಮಾಲೆ ಕಣ್ಣಿನವರಿಗೆ ಲೋಕವೆಲ್ಲಾ ಹಳದಿಯಾಗಿ ಕಾಣುತ್ತದೆ. ನಮ್ಮ ನೋಟ ನೇರವಾಗಿದ್ದಾಗ ಲೋಕ ಸಹಜಲಾಗಿ ನೇರವೆನಿಸುತ್ತದೆ. ಕವಿ ಎಸ್.ವಿ.ಪಿ. ಅವರು ಹೀಗೆನ್ನುತ್ತಾರೆ, 'ಪರರ ತಪ್ಪನೊಂದನು ಜನರು ಟೀಕಿಪರಲ್ತೆ ತಮ್ಮ ಸಾವಿರ ತಪ್ಪು ಮರೆತು. ನಿನ್ನ ಬಾಲದೊಳದೊಂದು ತೂತಿಹುದೆಂದಂತೆ ಸಾರಣೆ ಸೂಜಿಯ ಕುರಿತು.'
ಇನ್ನೊಬ್ಬರಲ್ಲಿ ದೊಷ ಹುಡುಕುವಾಗ ನಮ್ಮ ಸಾವಿರ ತಪ್ಪುಗಳು ಕಣ್ಣಿಗೆ ಕಾಣಿಸುವುದೇ ಇಲ್ಲ. ನಮ್ಮ ಚಿಕ್ಕ ಚಿಕ್ಕ ಕೆಲಸಗಳನ್ನೂ ದೊಡ್ಡ ಸಾಧನೆ ಎಂಬಂತೆ ಸಾರಿ ಹೇಳಲು ಸದಾ ಸಿದ್ಧವಿರುವ ಬಾಯಿ ಬೇರೆಯವರ ದೊಡ್ಡ ಸಾಧನೆಯನ್ನು ಹೇಳಲು ಇಚ್ಛಿಸುವುದಿಲ್ಲ. ಇನ್ನೊಬ್ಬರ ಸಾಧನೆಯನ್ನು ಗುರುತಿಸುವ ಹೃದಯ ವೈಶಾಲ್ಯತೆ ಉಳ್ಳವರು ತಮ್ಮ  ಸಮಸ್ಯೆಯ ಮೂಲವನ್ನು ಪ್ರಮಾಣಿಕವಾಗಿ ಗುರುತಿಸಿಕೊಂಡು ಸರಿಪಡಿಸಿಕೊಳ್ಳಲು ಖಂಡಿತಾ ಹಿಂಜರಿಯರು.

- ಎಚ್.ಎಸ್. ನವೀನ್‌ಕುಮಾರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಜೆಪಿ ಪ್ರತಿಭಟನೆ: ಮೆಟ್ರೋ, ಇಂಟರ್ನೆಟ್ ಸೇವೆ ಸ್ಥಗಿತ, ಅಕ್ರಮ ಬಂಧನಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಕೇಂದ್ರಕ್ಕೆ ಸೂಚನೆ

'ಸತ್ತ ಮೇಲೂ ಕಾಡ್ತಿದ್ದಾನೆ'; ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲೂ ನಾನಾ ಪಾಟೇಕರ್ ಹೆಸರು ಎಳೆತಂದ ತನುಶ್ರೀ ದತ್ತಾ; ನೆಟ್ಟಿಗರ ಆಕ್ರೋಶ!

ನನ್ನ ಕನಸು ನೀವೇ ಸರ್‌; ನಿಮ್ಮ ಕಣ್ಣಲ್ಲಿ ನೀರು ತರಿಸಿದೆ: ಕಿಚ್ಚ ಸುದೀಪ್ ಮುಂದೆ ಕಣ್ಣೀರಿಟ್ಟ ಮಾಡರ್ನ್ ಮಹಾಕವಿ ಮಂಜು

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ