ಲೋಟಸ್ ಮೇಕಪ್ ಸ್ಟಿಕ್
ಲೋಟಸ್ ಹರ್ಬಲ್ಸ್ ಎಸ್ಪಿಎಫ್ 15 ಮಾಯಿಶ್ಚರೈಸಿಂಗ್ ಫಾರ್ಮುಲಾ ಹೊಂದಿರುವ ನ್ಯಾಚುರಲ್ ಬ್ಲೆಂಡ್ ಸ್ವಿಫ್ಟ್ ಮೇಕಪ್ ಸ್ಟಿಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಮೊಡವೆ ಕಲೆಗಳು, ಕಪ್ಪು ಕಲೆಗಳನ್ನು ಮುಚ್ಚಿಹಾಕಿ ಮುಖಕ್ಕೆ ಅಂದ ನೀಡುತ್ತದೆ ಎನ್ನುವುದು ಕಂಪನಿ ಹೇಳಿಕೆ. ಹನಿ, ನ್ಯಾಚುರಲ್ ಮತ್ತು ಕ್ರೀಮಿ ಈ ಮೂರು ಛಾಯೆಗಳಲ್ಲಿ ಲಭ್ಯ. ಬೆಲೆ- 325 ರುಪಾಯಿ.