ಸೂರ್ಯನ ಚಲನಾ ಸಿದ್ಧಾಂತವನ್ನು ಗ್ರೆಗೋರಿಯನ್ ಕ್ಯಾಲೆಂಡರ್‌ಗಳಲ್ಲಿ ಅಳವಡಿಸಿ, ಬ್ರಹ್ಮಾಂಡದಲ್ಲಿ ಸ್ಥಿರವಾಗಿರುವ ನಿರ್ದಿಷ್ಟ ತಾರಾಮಂಡಲಗಳಲ್ಲಿ ಸೂರ್ಯನ ಪ್ರವೇಶ ಮತ್ತು ನಿರ್ಗಮನದ ಕಾಲಗಣನೆ ಆಧಾರದ ಮೇಲೆ 79 ಪ್ರಮುಖ ತಾರಾಮಂಡಲಗಳನ್ನು ಗುರುತಿಸಲಾಗಿದೆ.
ನಂತರ, ಮಾನವ ಭೌತಿಕ ಗುಣಗಳಿಗೆ ಅವಿನಾಭಾವ ಸಂಬಂಧಗಳನ್ನು ಹೊಂದಿರುವ ಜ್ಯೋತಿಷ್ಯಶಾಸ್ತ್ರ ಅನ್ವಯಿಸುವ 12 ರಾಶಿಗಳನ್ನು ಗುರುತಿಸಿ, ಅವುಗಳಲ್ಲಿನ ಪ್ರಮುಖ ನಕ್ಷತ್ರಗಳ ಸಂಖ್ಯೆ ಮತ್ತು ನಿರ್ದಿಷ್ಟ ಆಕಾರ ಗುರುತಿಸಿ ಹೆಸರುಗಳನ್ನು ನೀಡಲಾಗಿದೆ.
ರಾಶಿ ಶಾಸ್ತ್ರದಲ್ಲಿ ಪ್ರಮುಖವಾಗಿ ಉತ್ತರಾಯಣ ಮತ್ತು ದಕ್ಷಿಣಾಯನ ಕಾಲಮಾನದಲ್ಲಿ ಸೂರ್ಯನು ಸಮಭಾಜಕ ವೃತ್ತದ ಮೇಲೆ ಹಾದು ಹೋಗುತ್ತಾನೆ. ಕನ್ಯಾರಾಶಿಯು 12 ರಾಶಿ, 58 ಪ್ರಮುಖ ನಕ್ಷತ್ರಗಳನ್ನು ಹೊಂದಿರುವ ವರ್ಜಿನ್ (ಕನ್ಯಾ) ಆಕಾರದ ಎರಡನೇ ಅತಿ ದೊಡ್ಡ ರಾಶಿ. ಈ ರಾಶಿಯಲ್ಲಿ ಸೂರ್ಯ ಪ್ರವೇಶಿಸಿ ಕೆಲವು ದಿನಗಳ ನಂತರ ನಿರ್ಗಮಿಸುತ್ತಾನೆ. ಸೂರ್ಯ ಸಮಭಾಜಕ ವೃತ್ತ ಸಮೀಪಿಸುತ್ತಿದ್ದು, ರಾತ್ರಿ, ಹಗಲುಗಳ ಕಾಲಮಾನ ಸರಿಸಮನಾಗಿರುತ್ತದೆ.
ಈ ಕಾಲಮಾನದಲ್ಲಿ ಸೂರ್ಯನ ನಭೋಪ್ರಭಾವ ಪೃಥ್ವಿಯ ಮೇಲ್ಮೈ ಆತ್ಮದ ಭೌತಿಕಗುಣಗಳ ಮೇಲೆ ಅಧಿಕವಾಗಿದ್ದು, ಅಂತರ್ ಪ್ರಭ ಎಂಬ ದಿವ್ಯ ಶಕ್ತಿಯನ್ನು ಎರಕ ಹೊಯ್ಯುತ್ತಿರುತ್ತದೆ.
ಸೆಪ್ಟೆಂಬರ್ ಕೊನೆ ಭಾಗದಲ್ಲಿ ಪೃಥ್ವಿಯ ಮೇಲೆ ಸೂರ್ಯನಿಂದ ಎರಕ ಹೊಯ್ಯುವ ನಭೋಪ್ರಭಾವ ದ್ವಿಗುಣಗೊಂಡಿರುತ್ತದೆ. ಈ ದಿನಗಳಲ್ಲಿ ಬಹುತೇಕ ರಾಶಿಯವರ ಅದೃಷ್ಟ ಮತ್ತು ದೆಸೆಗಳು ಬದಲಿಗೊಳ್ಳುತ್ತವೆ. ಈ ದಿನಗಳಲ್ಲಿ ಪ್ರಾತಃಕಾಲದ ಸೂರ್ಯನಿಗೆ ನಮಸ್ಕರಿಸಿದರೆ ಶನಿ ಮತ್ತು ಕುಜ ದೋಷ ದೂರವಾಗಿ ಅಮೃತ ಸಿದ್ಧಿಯೋಗ ಮತ್ತು ರಾಜಯೋಗ ಪ್ರಾಪ್ತವಾಗುತ್ತದೆ.
ಮೈಗ್ರೇನ್, ಬುದ್ಧಿಚಂಚಲ, ನರದೌರ್ಬಲ್ಯ ಮತ್ತು ಸಂತಾನವಿಲ್ಲದ ಮಹಿಳೆಯರು ತಪ್ಪದೇ ಈ ದಿನಗಳಲ್ಲಿ ಸೂರ್ಯ ನಮಸ್ಕಾರ ಮಾಡಬೇಕು.
ನಕ್ಷತ್ರಗಳ ಪ್ರಭಾವ
ಕನ್ಯಾರಾಶಿಯಲ್ಲಿರುವ 58 ತಾರೆಗಳಲ್ಲಿ ನಭೋಮಂಡದಲ್ಲಿ ಪ್ರಜ್ವಲಿಸುವ ತಾರೆಗಳಲ್ಲಿ ಭೂಮಿಯಿಂದ 220 ಜೋತಿರ್ವರ್ಷ ದೂರದಲ್ಲಿರುವ 16ನೇ ಅಧಿಕ ಪ್ರಭಾವಳಿ ಹೊಂದಿರುವ ಸ್ಪೀಕಾ ಮತ್ತು ಹಳದಿ ಬಣ್ಣದ ವಿಂದರ್ ಮ್ಯಾಟ್ರಿಕ್ಸ್ ನಕ್ಷತ್ರಗಳಿಂದ ಹೊರಸೂಸುವ ನಭೋಪ್ರಭಾವ ಸೂರ್ಯಕಿರಣ ಶಕ್ತಿಯಲ್ಲಿ ಸಂಯೋಜನೆಗೊಳ್ಳುತ್ತವೆ.
ಇದರಿಂದಾಗಿ ಈ ಕಾಲಮಾನದಲ್ಲಿ ವಿಶ್ವಾದ್ಯಂತ ಹಳದಿ ಹೂಗಳು ಬಿಡಲು ಆರಂಭಿಸಿ, ಹಳದಿ ಕೊಬ್ಬು ಹೆಚ್ಚುತ್ತಿರುತ್ತದೆ. ಆತ್ಮದ ಭೌತಿಕ ಗುಣಗಳು ತಾವಾಗಿಯೇ ಬದಲಿಗೊಳ್ಳುತ್ತಿರುತ್ತವೆ. ಈ ಕಾಲಮಾನದಲ್ಲಿ ಜನಿಸಿದ ಮಗುವಿಗೆ ಅಷ್ಟಾಂಗ ನಭೋಶಕ್ತಿ ಪ್ರಾಪ್ತವಾಗಿ ರಾಜಯೋಗ ಮತ್ತು ಅಮೃತಸಿದ್ಧಿಯೋಗ ಪ್ರಾಪ್ತವಾಗುತ್ತದೆ.
ಮಕ್ಕಳಲ್ಲಿ ಅಧಿಕ ಜ್ಞಾಪಕ ಶಕ್ತಿ, ಜ್ಞಾನ ಹೆಚ್ಚುತ್ತದೆ. ವಿಜ್ಞಾನದಲ್ಲಿ ಅಭಿವೃದ್ಧಿ ಕಾಣುತ್ತದೆ. ಅಧಿಕ ಆಯುಸ್ಸು, ಬಲ ಹೆಚ್ಚುತ್ತದೆ. ಮಾಹಿತಿಗೆ ಸಂಪರ್ಕಿಸಿ, ಮೊ. 9945605618.
- ನಾರಾಯಣಶೆಟ್ಟಿ ಪದ್ಮಶಾಲಿ