ಭಕ್ತಿ-ಜ್ಯೋತಿಷ್ಯ

ಶನಿದೇವ ಮಂದಗ್ರಹನ ಸುಂದರ ರೂಪ

ಪ್ರತಿಯೊಂದು ಗ್ರಹವೂ ತನ್ನದೇ ಆದ ಕಾರಕತ್ವ ಹೊಂದಿರುತ್ತದೆ. ಕೆಲವು ಗ್ರಹಗಳು ಕಡಮೆ ಪ್ರಭಾವ ಹೊಂದಿ ಕಡಮೆ ಕಾರಕತ್ವ ಹೊಂದಿದ್ದರೆ, ಇನ್ನು ಕೆಲವು ಗ್ರಹಗಳು ಹೆಚ್ಚಿನ ಪ್ರಭಾವ ಹೊಂದಿ ಹೆಚ್ಚು ಕಾರಕತ್ವ ಉಳ್ಳವುಗಳಾಗಿರುತ್ತದೆ. ಶನಿಗ್ರಹ ಹೆಚ್ಚಿನ ಕಾರಕತ್ವ ಹೊಂದಿರುವುದರಿಂದ ಹೆಚ್ಚಿನ ಪ್ರಭಾವವನ್ನೂ ಹೊಂದಿದೆ.
ಶನಿ ಪ್ರತಿಯೊಬ್ಬರ ಜಾತಕದಲ್ಲಿ ಆಯುಷ್ಯ ಸೂಚಿಸುತ್ತಾನೆ. ಶನಿಯ ದೃಷಿ ಇರುವ ಗ್ರಹಗಳ ದಶಾಭುಕ್ತಿ  ಸಮಯದಲ್ಲಿ ಮಾರಕ ಕಾಯಿಲೆ ಬಂದರೆ ಅವರು ಮರಣ ಹೊಂದುತ್ತಾರೆ. ಆದ್ದರಿಂದ ಶನಿ ಆಯಷ್ಯಾಕಾರಕ, ನಿಂದಾಕಾರಕ, ಮೋಕ್ಷಕಾರಕನೂ ಆಗಿದ್ದಾನೆ.
ಮನುಷ್ಯನು ತನ್ನ ದೇಹವನ್ನು, ಮೈಗೆ ಹಾಕಿದ ಬಟ್ಟೆಯನ್ನು ಶುಚಿ ಮಾಡದೆ ದುರ್ವಾಸನೆಯಿಂದ  ಕೂಡಿದರೆ ಅವರನ್ನು ನಿಂದನೆ ಮಾಡುವುದು ಸಾಮಾನ್ಯ ಇದಕ್ಕೆ ಕಾರಣ ಶನಿ.
ಶನಿ ಅತ್ಯಂತ ಕಡಮೆ ವೇಗದಲ್ಲಿ ಚಲಿಸುವ ಗ್ರಹ, ಆದ್ದರಿಂದ ಇವನನ್ನು ನಿಧಾನಕಾರಕ ಎಂದು ಕರೆಯುತ್ತಾರೆ ಚುರುಕು ಇಲ್ಲದಿರುವುದು ಸೋಮಾರಿತನ, ಜಡತ್ವ. ಜಡತ್ವದಿಂದ ಕಾಯಿಲೆ ಬರುವುದು ಇದೆ. ಜಡತ್ವ ಒಂದು ಕಾಯಿಲೆ. ಆದುದರಿಂದ ಶನಿಯು ರೋಗಕಾರಕನು ಆದನು.
ಶನಿ ಸೇವೆ ಮಾಡುವವರ ಕಾರಕ. ಹಿಂದಿನ ಕಾಲದಲ್ಲಿ ಶೂದ್ರರರು ಸೇವೆ ಮಾಡುತ್ತಿದ್ದರು. ಇದಕ್ಕೆ ಕಾರಣ ಶನಿ. ಆದುದರಿಂದ ಸೇವಕಾರಕನಾದನು. ದೇಹಶ್ರಮಪಟ್ಟು ಬೆವರು ಸುರಿಸುವುದಕ್ಕೆ ಶನಿ ಕಾರಣ. ಆದ್ದರಿಂದ  ಶನಿ ಆಯುಷ್ಯ ಕಾರಕನೂ ಹೌದು. ಅಪ್ರಿಯವಾದುದು ಶನಿ. ಜಿಗುಪ್ಸೆ ಅಸಹ್ಯವಸ್ತುಗಳಾದ ಗೊಬ್ಬರ ಕಸ ಇತ್ಯಾದಿ. ಎಲ್ಲದಕ್ಕೂ ಇವನೇ ಕಾರಕ. ಇದರಿಂದಾಗಿ ಇವನು ಮಲಕಾರಕನಾದನು.
ಶನಿ ಸೋಮಾರಿತನ ಜಡತ್ವವನ್ನು ತೋರಿಸುವನು. ಇದರ ಪರಮಾವಧಿ ನಿದ್ರೆ. ಆದುದರಿಂದ ನಿದ್ರಾಕಾರಕನಾದ. ದೀರ್ಘನಿದ್ರೆ ಅಥವಾ ಸಾವು, ಮೃತ್ಯು ಇದಕ್ಕೆ ಇವನೇ ಕಾರಕ. ಆದುದರಿಂದ ಇವನನ್ನು ರೋಗಕಾರಕ ಎಂದು ಕರೆದರು.
ಮೋಕ್ಷಕಾರಕ: ಎಣ್ಣೆಗೆ ಇವನೇ ಕಾರಕ ಇವನ ಸ್ನಾನ ತೈಲ ಸ್ನಾನ. ಇದರಿಂದ ಆಯುಷ್ಯ ಅಭಿವೃದ್ಧಿ. ಶನಿ ಕೆಟ್ಟಾಗ ಎಳ್ಳು ದೀಪ ಹತ್ತಿಸುತ್ತಾರೆ. ಎಳ್ಳುದಾನ ಮಾಡುತ್ತಾರೆ. ಎಳ್ಳು ರಾಶಿಯನ್ನು ದಕ್ಷಿಣೆ ಸಮೇತ ಬ್ರಾಹ್ಮಣರಿಗೆ ದಾನ ಕೊಟ್ಟರೆ ಗಂಡತಾರ ಪರಿಹಾರ. ಸಾವು ಯಾವುದರಿಂದ ಬರುತ್ತದೆ ಎಂಬುದನ್ನು ಸೂಚಿಸುವವನೇ ಶನಿ. ಶನಿಗೆ ಹರಿನಾಮ ಭಜನೆ ಮಾಡಬೇಕು. ಮಾಹಿತಿಗಾಗಿ 9448490860.

= ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

ಹೆದ್ದಾರಿ ದಾಟುತ್ತಿದ್ದ ಕುರಿ-ಮೇಕೆಗಳ ಮೇಲೆ ಹರಿದ ಟ್ರಕ್; 23 ಕುರಿ, 2 ಮೇಕೆ ಸಾವು, ಭೀಕರ ವಿಡಿಯೋ ಸಿಸಿಟಿವಿಯಲ್ಲಿ ಸೆರೆ!

ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ: ಎಂಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!