ಹಾಲು ಮತ್ತು ಹಾಲಾಹಲ
ಕಳೆದ ವಾರ ಹಾಲಿನ ಮಹತ್ವದ ಬಗ್ಗೆ, ಪುರಾಣ ಕಾಲದಲ್ಲಿ ಹಾಲು ಮತ್ತು ಅದರ ಉತ್ಪನ್ನಗಳಿಗೆ ನೀಡುತ್ತಿದ್ದ ಪ್ರಾಮುಖ್ಯತೆಯ ಬಗ್ಗೆ ಒಂದಷ್ಟು ದೃಷ್ಟಾಂತಗಳ ಮೂಲಕ ತಿಳಿಸಿಕೊಟ್ಟಿದ್ದೆವು. ಇದು ಹೇಳಿಕೇಳಿ ಭಗವಾನ್ ಶ್ರೀಮನ್ನಾರಾಯಣ ಮತ್ತು ಲಕ್ಷ್ಮಿ ವಿಶ್ರಮಿಸುವ ಸಾಗರ. ಅದನ್ನೇ ಕ್ಷೀರಸಾಗರ ಎನ್ನುವುದು. ಹಾಲಿನ ಮೂಲ ಅಷ್ಟೊಂದು ಪುರಾತನವಾದದ್ದು. ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ತುಪ್ಪ, ಆಕಳ ದೇಹದ ಕೊಬ್ಬಿನ ಅಂಶದಿಂದ ತಯಾರಾಗಿರುತ್ತದೆ. ಹೊಟ್ಟೆಯ ಕುಳಿಯ ಭಾಗ ಮತ್ತು ಇತರೆ ಭಾಗಗಳ ಕೊಬ್ಬನ್ನು ಬಳಸಿ ಹಲವು ಜನಪ್ರಿಯ ಬ್ರಾಂಡುಗಳ ತುಪ್ಪ ತಯಾರಾಗುತ್ತಿವೆ.
ಸತ್ತ ಪ್ರಾಣಿಗಳ ಕೊಬ್ಬನ್ನೂ ತುಪ್ಪಕ್ಕಾಗಿ ಬಳಸುತ್ತಿದ್ದಾರೆಂಬ ಮಾಹಿತಿಯಿದೆ. ವಾಣಿಜ್ಯ ಉದ್ದೇಶದಿಂದ ದೇಶದಲ್ಲಿ ನಿತ್ಯವೂ ಹಸು ಮತ್ತು ಎಮ್ಮೆಗಳ ಮಾರಣ ಹೋಮ ನಡೆಯುತ್ತಿದೆ. ಹಾಲು ಮತ್ತು ಹಾಲಿನ ಉತ್ಪನ್ನಕ್ಕಾಗಿ ಬಳೆಯಾಗುವ ಬದಲು ಹಸು ಮತ್ತು ಎಮ್ಮೆಗಳು ಮಾಂಸಹಾರಕ್ಕಾಗಿ ಬಳಕೆಯಾಗುತ್ತಿರುವುದು ನಿಜಕ್ಕೂ ದುರಂತ. ಯೂರಿಯಾ ಮತ್ತು ಮಾರ್ಜಕ ಮುಂತಾದ ರಾಸಾನಿಯಕ ಅಂಶಗಳನ್ನು ಬಳಸಿ ಸಿಂಥೆಟಿಕ್ ಹಾಲು ತಯಾರಿಸಿ ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾರಲಾಗುತ್ತಿದೆ. ಅಂದು ತಾರಕಾಸುರ ಮಾಡಿದ ಕುಕೃತ್ಯ ಇಂದು ಮನುಷ್ಯರಿಂದ ನಡೆಯುತ್ತಿದೆ. ಇವೆಲ್ಲದರ ಪರಿಣಾಮವೇ ಈ ಹೆಚ್ಚುತ್ತಿರುವ ಅಪರಾಧಗಳ, ಹಿಂಸಾಚಾರ ಮತ್ತು ನೋವುಗಳು. ಕಲಿಯುಗ ಕಂಡಿರುವಷ್ಟು ಮಾಲಿನ್ಯ ಮತ್ತು ಭೂಮಂಡಲ ತನ್ನ ಜೀವಮಾನದಲ್ಲೇ ಕಂಡಿಲ್ಲ. ನಮ್ಮ ಆಹಾರ, ಕುಡಿಯುವ ಎಲ್ಲ ಪಾನೀಯಗಳು, ಉಸಿರಾಡುವ ಗಾಳಿ ಎಲ್ಲವೂ ಮಲಿನಗೊಂಡಿದೆ.
ನಾವು ಸೇವಿಸುವ ಈ ಮೂಲಭೂತ ಅಂಶಗಳಲ್ಲಾದರೂ ಶುದ್ಧತೆ ಬಯಸುವುದು ಅಗತ್ಯ. ಶುದ್ಧ ಹಾಲು ಸಿಹಿಯಾಗಿರುತ್ತದೆ. ಗಮನಿಸಿ. ಅದನ್ನು ಕಾಯಿಸಿದಾಗ ತೆಳುಕಂದು ಬಣ್ಣಕ್ಕೆ ತಿರುಗುತ್ತದೆ. ತುಪ್ಪ ಮಾಮೂಲು ತಾಪಮಾನದಲ್ಲಿ ದ್ರವರೂಪದಲ್ಲಿರುತ್ತದೆ. ಹವಾಮಾನ ತಂಪಾದಷ್ಟೂ ಅದು ಗಟ್ಟಿಯಾಗುತ್ತದೆ. ಅಂಗೈಯಲ್ಲಿ ಇಟ್ಟುಕೊಂಡರೆ ಚಲಿಗಾಲದಲ್ಲೂ ಕರಗುತ್ತದೆ. ಹಳದಿ ಬಣ್ಣದ ಜೇನಿನ ರೂಪ ಶುದ್ಧ ತುಪ್ಪದ್ದು. ಹಸು ದೈವಸ್ವರೂಪಿ. ಅದರ ವಿಕಸನವೇ ಹಾಗೊಂದು ದೈವತ್ವದೊಂದಿಗೆ ಥಳುಕು ಹಾಕಿಕೊಂಡಿದೆ. ಅದು ನಂಬಿಕೆ ಮತ್ತು ಸಂಸ್ಕೃತಿಯ ಪ್ರತೀಕ ಕೂಡ.
ಮಹಾಭಾರತದಲ್ಲಿ ಹಸುವಿನ ಪಾವಿತ್ರತೆ ಬಗೆಗೆ ಕಥೆಗಳು ಕೂಡ ಇವೆ. ಮಹಾಭಾರತ ಕಾಲದಲ್ಲಿ ಚ್ಯವನ ಮಹರ್ಷಿ ಮತ್ತು ನಹುಷ ಮಹಾರಾಜ ಹಸುವಿನ ವ್ಯಾಪಾರ ಮಾಡಿದ್ದರಂತೆ. ದುಡ್ಡಿನ ವ್ಯವಹಾರವಾಗಿರಲಿಲ್ಲ. ಅದು ಗೋವಿನ ಮಹತ್ವ ತಿಳಿದಿದ್ದ ನಹುಷ ಮಹಾರಾಜ ಚ್ಯವನ ಮಹರ್ಷಿಗೆ ಭಾರಿ ಬೆಲೆಯ ವಸ್ತುಗಳನ್ನು ವಿನಿಮಯಾವಾಗಿ ಕೊಟ್ಟಿದ್ದರಂತೆ. ಗೋಮಾಂಸ ತಿನ್ನುವುದೂ ಒಂದೇ ನರಭಕ್ಷಣೆಯೂ ಒಂದೇ ಎಂಬುದು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಅದು ಅಷ್ಟೊಂದು ಘೋರ. ನಮ್ಮ ವೇದಗಳು ಕೂಡ ಇದನ್ನೇ ನುಡಿದಿವೆ. ಹಸುಗಳ ಮಾರಣಹೋಮ ನಡೆದಷ್ಟೂ ಸಮಾಜದ ಆರೋಗ್ಯ ಹದಗೆಡುತ್ತಾ ಹೋಗಿ ವಿನಾಶದ ಅಂಚು ತಲುಪುತ್ತದೆ. ನಾವು ಕಂಡುಕೇಳರಿಯದ ಹಲವು ಕಾಯಿಲೆಗಳು ಹುಟ್ಟುಕೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿ.
-ಯೋಗಿ ಅಶ್ವಿನಿ