ಕಲರ್‌ಸ್ಟ್ರಾಲಜಿ 
ಭಕ್ತಿ-ಜ್ಯೋತಿಷ್ಯ

ಕಲರ್‌ಸ್ಟ್ರಾಲಜಿ!

ಹೆಸರೇ ವಿಚಿತ್ರ ಅನ್ನಿಸಬಹುದು. ಜ್ಯೋತಿಷ್ಯ ಮತ್ತು ವರ್ಣ ವಿಜ್ಞಾನ ಎರಡನ್ನೂ ಒಳಗೊಂಡ...

ಹೆಸರೇ ವಿಚಿತ್ರ ಅನ್ನಿಸಬಹುದು. ಜ್ಯೋತಿಷ್ಯ ಮತ್ತು ವರ್ಣ ವಿಜ್ಞಾನ ಎರಡನ್ನೂ ಒಳಗೊಂಡ ಅದ್ಭುತ ಲೋಕವಿದು. ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು. ಆದರೆ ಬಣ್ಣಗಳು ಮಾನವನ ಮನಸ್ಸಿನ ಮೇಲೆ ಬೀರುವ ಪರಿಣಾಮ ಊಹಾತೀತ. ಬಣ್ಣಗಳಿಂದ ಬದುಕು ಬದಲಿಸಿಕೊಳ್ಳಲೂ ಸಾಧ್ಯವಿದೆ ಎನ್ನುವುದು ಇನ್ನಷ್ಟು ಅಚ್ಚರಿ ಮೂಡಿಸಬಹುದು.

ಕಲರ್‌ಸ್ಟ್ರಾಲಜಿಯಲ್ಲಿ 366 ಬಣ್ಣಗಳಿವೆ. ಅಂದರೆ ಒಂದೊಂದು ದಿನಕ್ಕೆ ಒಂದೊಂದು ಬಣ್ಣ. ಅದೇ ರೀತಿ ಪ್ರತಿ ತಿಂಗಳಿಗೂ ನಿರ್ದಿಷ್ಟ ಬಣ್ಣ. ನಿಮ್ಮ ಜನ್ಮದಿನ, ಜನಿಸಿದ ತಿಂಗಳಿಗೆ ಯಾವ ಬಣ್ಣ ಹೊಂದುತ್ತದೆ ಎನ್ನುವುದರ ಅರಿವು ನಿಮಗಿದ್ದರೆ ಮತ್ತು ಜೀವನದಲ್ಲಿ ಅಳವಡಿಸಿಕೊಂಡರೆ ಅತ್ಯದ್ಭುತ ಬದಲಾವಣೆ ಕಾಣಬಲ್ಲಿರಿ.

ಅಸಾಧ್ಯವಾದುದನ್ನೂ ಸಾಧಿಸಬಲ್ಲಿರಿ. ಎಂತಹ ಕಷ್ಟಗಳನ್ನೂ ಸುರಳೀತವಾಗಿ ನಿಭಾಯಿಸಬಲ್ಲಿರಿ. ದೂರ ಹೋಗಿದ್ದ ನೆಮ್ಮದಿಯನ್ನು ಮತ್ತೆಮತ್ತೆ ಗಳಿಸಿಕೊಳ್ಳಬಲ್ಲಿರಿ. ಅಷ್ಟೇ ಏಕೆ, ನಿಮಗೆ ಹೊಂದಿಕೊಳ್ಳುವ ಸಂಗಾತಿ ಆಯ್ಕೆ ಮಾಡಿಕೊಳ್ಳಬಲ್ಲಿರಿ! ಇದೆಲ್ಲವೂ ಕಲರ್‌ಸ್ಟ್ರಾಲಜಿಯಿಂದ ಸಾಧ್ಯ.

ನಿಮ್ಮ ಜನ್ಮದಿನದ ಬಣ್ಣ ಈಗ ನಿಮ್ಮ ನೆಚ್ಚಿನ ಬಣ್ಣವಾಗದೇ ಇರಬಹುದು. ಆದರೆ ಈ ಬಣ್ಣವನ್ನು ನಿಮ್ಮದಾಗಿಸಿಕೊಳ್ಳುವುದು ಕಷ್ಟದ ಸಂಗತಿ ಅಲ್ಲವೇ ಅಲ್ಲ. ನೀವು ವಾಸಿಸುವ, ಕೆಲಸ ಮಾಡುವ ಪರಿಸರದಲ್ಲಿ ಎಲ್ಲಿಯಾದರೂ ಈ ಬಣ್ಣದ ಛಾಯೆ ಇದ್ದರೆ ಸಾಕು.

ಗೋಡೆಗಳಿಗೆ ಇದೇ ಬಣ್ಣ ಬಳಿಯುವ ಮೂಲಕ, ಬೆಡ್‌ಶೀಟ್, ಟವೆಲ್, ಬಟ್ಟೆ, ಕರ್ಚೀಫ್, ಸ್ಕಾರ್ಫ್ ಇತ್ಯಾದಿಗಳಲ್ಲಿ ಈ ಬಣ್ಣ ಹೊಂದುವ ಮೂಲಕ ಅಥವಾ ಈ ಬಣ್ಣವಿರುವ ಪೇಟಿಂಗ್, ಪೀಠೋಪಕರಣ ಹೊಂದುವ ಮೂಲಕ ಬದಲಾವಣೆಗೆ ನಿಮ್ಮನ್ನು ನೀವು ತೆರೆದುಕೊಳ್ಳಬಹುದು. ಇನ್ನು ನೀವುಂಟು ನಿಮ್ಮ ಬಣ್ಣವುಂಟು.

- ಯಶವಂತ ಸರದೇಶಪಾಂಡೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT