ಪೂರ್ವಾಷಾಢ
ವಿದ್ಯ ಸಂಸ್ಥೆ, ಗುರುಕುಲಗಳು, ಜ್ಞಾನ ಬೋಧನೆ, ಮಂತ್ರಿಗಳ ಸಲಹೆಗಾರರಾಗಿ, ರಾಜಕೀಯ, ಪ್ರಿಂಟಿಂಗ್ ಪ್ರೆಸ್, ಪುಸ್ತಕಗಳ ಮಳಿಗೆ, ಫೈನಾನ್ಸ್, ಬ್ಯುಸಿನೆಸ್, ಷೇರು ಮಾರುಕಟ್ಟೆ ಸಂಬಂಧಿತ ಕೆಲಸ ಮಾಡಿದರೆ ಉತ್ತಮ.
ಉತ್ತರಾಷಾಢ
ರಾಜಕೀಯ, ಸರ್ಕಾರದ ಟೆಂಡರ್ ತೆಗೆದುಕೊಂಡು ಕೆಲಸ ಮಾಡಿಸುವುದು, ಸಗಟು ಕಿರಾಣಿ ವ್ಯಾಪಾರ, ಸಂಘ ಸಂಸ್ಥೆಗಳ ಮುಂದಾಳತ್ವ ವಹಿಸುವುದು, ಸಮಾಜ ಸೇವಕರು, ಪತ್ರಕರ್ತರು, ಬರಹಗಾರರರಾಗಬಹುದು.
ಶ್ರವಣ
ಗ್ರಂಥಿಗೆ ಅಂಗಡಿ, ಹೂವು ಹಣ್ಣು ಮಾರಾಟ, ಪೇಪರ್ ಏಜೆನ್ಸಿ, ಜ್ಯುವೆಲ್ಲರಿ ಅಂಗಡಿ, ಬೆಲ್ಲದ ಅಚ್ಚು ಕಾರ್ಖಾನೆ, ಕಬ್ಬಿನ ವ್ಯಾಪಾರ, ಹಾಲು ವ್ಯಾಪಾರ, ಬೆಳ್ಳಿ ಸಾಮಾನುಗಳ ಮಾರಾಟ ಮಾಡಬಹುದು.
ಧನಿಷ್ಠ
ಸಿಡಿಮದ್ದುಗಳ ತಯಾರಿಕಾ ಘಟಕ, ರಾಸಾಯನಿಕ ವಸ್ತುಗಳ ವ್ಯಾಪಾರ, ಪೊಲೀಸ್ ಮಿಲಿಟರಿ, ವಾಯುಸೇನೆಯಲ್ಲಿ ಉದ್ಯೋಗ ಮಾಡಬಹುದು.
ಶತಭಿಷ
ಬೃಹತ್ ಕೈಗಾರಿಕೆ, ಛಾಯಾಚಿತ್ರಗಳ ಅಂಗಡಿ, ಫೋಟೋ ಕಲರ್ ಲ್ಯಾಬ್, ಟೆಕ್ನಿಷಿಯನ್, ಪೈಂಟಿಂಗ್, ಚಲನಚಿತ್ರ ಬಿಡಿಭಾಗಗಳ ಮಾರಾಟ, ಮೊಬೈಲ್, ಟಿವಿ, ಕಂಪ್ಯೂಟರ್ ರಿಪೇರಿ, ಹಳೆಯ ವಸ್ತುಗಳನ್ನು ಕೊಳ್ಳುವುದು, ಮಾರುವುದು ಮಾಡಬಹುದು.
ಪೂರ್ವಾಭಾದ್ರ
ಸರ್ಕಾರಿ ಸ್ವಾಮ್ಯದ ಕೆಲಸಗಳು, ಹಣ್ಣು, ಹೂವು, ಹಾಲಿನ ವ್ಯಾಪಾರ, ತೆಂಗಿನಕಾಯಿ ಸಗಟು ವ್ಯಾಪಾರ, ಮೆಡಿಕಲ್ ಅಂಗಡಿ, ಆಯುರ್ವೇದ ಔಷಧಾಲಯದಲ್ಲಿ ಕೆಲಸ ಮಾಡಿದರೆ ಉತ್ತಮ.
ಉತ್ತರಾಭಾದ್ರ
ಪ್ರಿಂಟಿಂಗ್, ಆಯಿಲ್ ಅಂಗಡಿ, ಗ್ಯಾರೇಜ್, ಹಳೆಯ ಕಬ್ಬಿಣದ ವ್ಯಾಪಾರ, ಬಾಗಿಲು, ಕಿಟಕಿಗಳ ವ್ಯಾಪಾರ, ಲೈಬ್ರರಿ, ವಸ್ತುಸಂಗ್ರಹಾಲಯದಲ್ಲಿ ಕೆಲಸ, ಸಮುದ್ರ ವಸ್ತುಗಳ ಮಾರಾಟ ಮಾಡಬಹುದು.
ರೇವತಿ
ಅಧ್ಯಾಪಕ ವೃತ್ತಿ, ಮಂತ್ರಿವರ್ಗದವರಿಗೆ ಸಲಹೆಗಾರರು, ಐಷಾರಾಮಿ ವಸ್ತುಗಳ ಮಾರಾಟ, ಸುಗಂಧ ದ್ರವ್ಯ, ಸಾಕುಪ್ರಾಣಿಗಳ ಮಾರಾಟ, ಅಕ್ವೇರಿಯಂ ಅಂಗಡಿ, ಗ್ರಂಥಿಗೆ ಅಂಗಡಿ, ಭಾಷಾಂತರ ಮಾಡುವುದು ಮೊದಲಾದ ಕೆಲಗಳಲ್ಲಿ ತೊಡಗಿಸಿಕೊಳ್ಳಬಹುದು.
(ಮುಗಿಯಿತು)
ಅಂಜನ್ ಕುಮಾರ್
(ಹಿಂದಿನ ಸಂಚಿಕೆಯಿಂದ)