ಹತ್ತೇ ತಿಂಗಳ ವರ್ಷ!
ಪ್ರಪಂಚದ ದಿನನಿತ್ಯದ ವ್ಯವಹಾರಗಳಿಗೆ ಎಲ್ಲರೂ ಅವಲಂಬಿತರಾಗಿರುವುದು ದಿನಾಂಕ ಮತ್ತು ತಿಂಗಳು ಎಂಬ ಪದಗಳ ಮೇಲೆಯೇ. ಹಾಗಾದರೆ ಈ ತಿಂಗಳುಗಳ ಪದಗಳು ಉದ್ಭವವಾದದ್ದಾದರೂ ಹೇಗೆ?
ಜನವರಿಯಿಂದ- ಡಿಸೆಂಬರ್‌ವರೆಗೆ 12 ತಿಂಗಳು. ಇಡೀ ಜಗತ್ತಿನಾದ್ಯಂತ ಬಳಸುವ ಅಂತಾರಾಷ್ಟ್ರೀಯ ಕ್ಯಾಲೆಂಡರ್ ಗ್ರೆಗೋರಿಯನ್ ಪಂಚಾಂಗವನ್ನು ಆಧರಿಸಿದೆ. ಈ ಕ್ಯಾಲೆಂಡರಿನಲ್ಲಿ 365 ದಿವಸಗಳನ್ನು ಸರಿದೂಗಿಸಲು ಕೆಲವು ತಿಂಗಳಿನಲ್ಲಿ 30 ದಿವಸಗಳನ್ನು, ಕೆಲವು ತಿಂಗಳುಗಳಲ್ಲಿ 31 ದಿವಸಗಳನ್ನು ಸೇರಿಸಲಾಗಿದೆ. ಹಿಂದೆ ರೋಮನ್ ಕ್ಯಾಲೆಂಡರ್‌ನಲ್ಲಿ ಹತ್ತು ತಿಂಗಳು ಮಾತ್ರ ಇದ್ದವು. ನಂತರ ಜೂಲಿಯಸ್ ಸೀಜರ್‌ನ ಹೆಸರಿನಲ್ಲಿ ಜುಲೈ ಮತ್ತು ಅಗಸ್ಟಸ್ ಹೆಸರಿನಲ್ಲಿ ಆಗಸ್ಟ್ ತಿಂಗಳುಗಳು ಸೇರ್ಪಡೆಯಾದವು. ಈಗಿನ ಕ್ಯಾಲೆಂಡರ್ ರೋಮನ್ ಕ್ಯಾಲೆಂಡರಿನ ಪರಿಷ್ಕೃತ ರೂಪವಾಗಿರುವುದರಿಂದ ತಿಂಗಳುಗಳ ಹೆಸರು ರೋಮನ್ ಮತ್ತು ಲ್ಯಾಟಿನ್ ಭಾಷೆಯಿಂದ ಬಂದಿವೆ.
ರೋಮನ್ ದೇವತೆ ಜೆನಸ್ ಹೆಸರಿನಿಂದ ಜನವರಿ, ಲ್ಯಾಟಿನ್ ಭಾಷೆಯ ಫ್ರಬರಾ ಎಂಬ ಪದದಿಂದ ಫೆಬ್ರವರಿ,
ರೋಮನ್ ದೇವತೆ ಮಾರ್ಸ್‌ನಿಂದ ಮಾರ್ಚ್, ಲ್ಯಾಟಿನ್ ಭಾಷೆಯ ಎಸ್ಪೆರಾಯರ್‌ನಿಂದ ಏಪ್ರಿಲ್,
ಮಕ್ಯರ್ ರೂರಿಯ ತಾಯಿಯಾದ ಮಾಯಿಯಾದಿಂದ ಮೇ, ಲ್ಯಾಟಿನ್ ಪದ ಜೇನ್ಸ್ ಪದದ ಆಧಾರದಿಂದ ಜೂನ್ ತಿಂಗಳುಗಳು ಹುಟ್ಟಿಕೊಂಡವು.
ಇದಲ್ಲದೆ ಜೂಲಿಯಸ್ ಸೀಜರ್‌ನು ಜನಿಸಿದ ಹಾಗೂ ಮರಣಹೊಂದಿದ ಸ್ಮರಣೆಗಾಗಿ ಜುಲೈ,
ಸೀಜರನ ಸೋದರಳಿಯನಾದ ಆಗಸ್ಟಸ್ ಹೆಸರನ್ನು ಆಗಸ್ಟ್ ಹೊಂದಿದೆ. ಸೆಪ್ಟೆಂಬರ್ ಸೆಪ್ಟೆಂಬಕ್ಟೋ ಪದದಿಂದ ಹುಟ್ಟಿದೆ. ಸಪ್ಟೆಂ ಎಂದರೆ ಏಳು ಎಂದು ಅರ್ಥ. ಅಕ್ಟೋಬರ್- ಒಕ್ಟೋ ಎಂದರೆ ಎಂಟು ಎಂದು ಅರ್ಥ. ನವೆಂಬರ್ ನೊವೆಮ್ ಪದದಿಂದ ಹುಟ್ಟಿದೆ. ನೊವೆಮ್ ಎಂದರೆ ಒಂಬತ್ತು ಎಂದು ಅರ್ಥ. ಡೆಸೆಮ್ ಪದದಿಂದ ಡಿಸೆಂಬರ್ ಹುಟ್ಟಿದೆ.
ರೋಮನ್ ಕ್ಯಾಲೆಂಡರಿನ ಆಧಾರದಂತೆ ಹತ್ತು ತಿಂಗಳು ಮಾತ್ರ ಇದ್ದುದರಿಂದ ಸೆಪ್ಟೆಂಬರ್ ಏಳನೆಯ ತಿಂಗಳು, ಅಕ್ಟೋಬರ್ ಎಂಟನೆಯ ತಿಂಗಳು, ನವೆಂಬರ್ ಒಂಬತ್ತನೆಯ ತಿಂಗಳು ಮತ್ತು ಡಿಸೆಂಬರ್ ಹತ್ತನೆಯ ತಿಂಗಳುಗಳಾಗಿದ್ದವು. ನಂತರ ಎರಡು ತಿಂಗಳುಗಳ ಸೇರ್ಪಡೆಯಿಂದ ಇವುಗಳ ಸ್ಥಾನ ಕ್ರಮವಾಗಿ ಒಂಬತ್ತು, ಹತ್ತು, ಹನ್ನೊಂದು ಮತ್ತು ಹನ್ನೆರಡಾಯಿತು.
ವಾರಗಳ ಕತೆ
ವಾರದಲ್ಲಿ ಏಳು ದಿನ. ಆದರೆ ಸಾವಿರಾರು ವರ್ಷಗಳ ಹಿಂದೆ ಜನರಿಗೆ ವಾರದ ಬಗ್ಗೆ ಏನೂ ಗೊತ್ತಿರಲಿಲ್ಲ. ಆಗ ತಿಂಗಳ ರಹಸ್ಯ ಮಾತ್ರ ತಿಳಿದ್ದಿದರು. ಮೊದ ಮೊದಲು ಜನರು ಕೆಲವು ಸ್ಥಳವನ್ನು ಮಾರಾಟ, ವ್ಯಾಪಾರ ಸಭೆ ಸಮಾರಂಭ ಮತ್ತು ಕೆಲವು ಕಾರ್ಯಗಳಿಗೆ ತಿಂಗಳ ಪ್ರತಿ ಹತ್ತನೇ ದಿನವನ್ನು ಗೊತ್ತು ಮಾಡಿಕೊಂಡರು.
ಇತರ ಕೆಲವು ಸ್ಥಳಗಳಲ್ಲಿ ಏಳನೇ ಅಥವಾ ಐದನೇ ದಿನ ಗೊತ್ತು ಮಾಡಿಕೊಳ್ಳಲಾಯಿತು. ಬೆಬಿಲೋನಿಯಾದಲ್ಲಿ ಪ್ರತಿ ಏಳನೇ ದಿನವನ್ನು ವಿಶೇಷ ದಿನವೆಂದು ಪರಿಗಣಿಸಲಾಗುತ್ತಿತ್ತು. ಈಜಿಪ್ಟನ್ನರು ಏಳು ದಿನಗಳಿಗೆ ಐದು ಗ್ರಹಗಳ ಮತ್ತು ಸೂರ್ಯ -ಚಂದ್ರರ ಹೆಸರಿಟ್ಟರು.
ಅವುಗಳು ಭಾನುವಾರ, ಸೋಮವಾರ ರೊಮನ್ನರು ಸಹ ಏಳು ದಿನಗಳ ಪದ್ಧತಿಯನ್ನು ಅನುಸರಿಸುತ್ತಿದ್ದರು. ವಾರದ ದಿನಗಳಿಗೆ ಈಗಿರುವ ಹೆಸರುಗಳನ್ನು ಆಂಗ್ಲೋಸಾರ್ಕನಿಕ್ ಪದ್ಧತಿಯಿಂದ ತೆಗೆದುಕೊಳ್ಳಲಾಗಿದೆ.
ಈ ದಿನಗಳನ್ನು ದೇವತೆಗಳ ಹೆಸರುಗಳಿಂದ ಕರೆಯಲಾಗಿದೆ. ಸೂರ್ಯನ ದಿನವನ್ನು ಸುನಾನೆ ದೆಗ್ ಅಥವಾ ಸಂಡೆ-ಭಾನುವಾರ (ಭಾನು ಸೂರ್ಯನ ಮತ್ತೊಂದು ಹೆಸರು). ಚಂದ್ರನ ದಿನ ಮೊನಾನ್ದೆಗ್ ಅಥವಾ ಮಂಡೆ- ಸೋಮವಾರ (ಸೋಮ ಎಂದರೆ ಚಂದ್ರ) ಮಂಗಳ ದಿನ ಟೆವಸ್ ದೆಗ್, ಬುಧನ ದಿನ ವೋಡೆನ್ ದೆಗ್, ಗುರುವಿನ ದಿನ ಥೋರ್ ದೆಗ್, ಶುಕ್ರ ದಿನ ಪ್ರಿಗ್ ದೆಗ್, ಶನಿಯ ದಿನ ಸ್ಯಾಟನರ್ ದೆಗ್ ಅಂದರೆ ಶನಿವಾರ ಹೀಗೆ ವಿಶ್ವದ್ಯಾಂತ ಈಗ ಚಾಲ್ತಿಯಲ್ಲಿರುವ ವಾರದ ಏಳು ದಿನಗಳು, ಏಳು ಹೆಸರುಗಳು ಪಡೆದವು.
-ವೀಣಾ ಜಯರಾಮ್